For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ಬಹಿರಂಗವಾಯ್ತು ಅಲಿಯಾ ಭಟ್ 'ಗಂಗೂಬಾಯಿ ಕಾಠಿಯವಾಡಿ' ಬಿಡುಗಡೆ ದಿನಾಂಕ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಗಂಗೂಬಾಯಿ ಕಾಠಿಯವಾಡಿ ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಬಹಿರಂಗವಾಗಿದೆ. ಅಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಗಂಗೂಬಾಯಿ ಸಿನಿಮಾಗೆ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ಹೇಳಿದ್ದಾರೆ.

  ಕೊರೊನಾ ನಡುವೆಯೂ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಬಹುನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲು ಸಜ್ಜಾಗಿದ್ದಾರೆ. ಮುಂದೆ ಓದಿ...

  ಸಂಕ್ರಾಂತಿ ಹಬ್ಬಕ್ಕೂ ಮೊದಲು ಬರ್ತಿದೆ ಗಂಗೂಬಾಯಿ

  ಸಂಕ್ರಾಂತಿ ಹಬ್ಬಕ್ಕೂ ಮೊದಲು ಬರ್ತಿದೆ ಗಂಗೂಬಾಯಿ

  ಮುಂದಿನ ವರ್ಷ ಜನವರಿಗೆ ಗಂಗೂಬಾಯಿ ಕಾಠಿಯವಾಡಿ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಅನೇಕ ಸಿನಿಮಾಗಳ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಕೊರೊನಾ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಗಿದ್ದ ಸಿನಿಮಾಗಳೀಗ ರಿಲೀಸ್ ಡೇಟ್ ಬಹಿರಂಗ ಪಡಿಸಿದ್ದಾರೆ. ಗಂಗೂಬಾಯಿ ಸಿನಿಮಾ ಬಿಡುಗಡೆ ದಿನಾಂಕ ಕೂಡ ಬಹಿರಂಗವಾಗಿದ್ದು, ಜನವರಿಯಲ್ಲಿ ಬರಲು ಸಜ್ಜಾಗಿದೆ.

  ಜನವರಿ 6ಕ್ಕೆ ಸಿನಿಮಾ ಬಿಡುಗಡೆ

  ಜನವರಿ 6ಕ್ಕೆ ಸಿನಿಮಾ ಬಿಡುಗಡೆ

  ಅಂದಹಾಗೆ ಗಂಗೂಬಾಯಿ ಸಿನಿಮಾ ಜನವರಿ 6ರಂದು ತೆರೆಗೆ ಬರುತ್ತಿದೆ. ಸಂಕ್ರಾಂತಿ ಸಮಯದಲ್ಲಿ ಅನೇಕ ಸಿನಿಮಾಗಳು ತೆರೆಗೆ ಬರುತ್ತಿವೆ. ಸಂಕ್ರಾಂತಿಗೂ ಮೊದಲೇ ಗಂಗೂಬಾಯಿ ಸಿನಿಮಾ ಬಿಡುಗಡೆಯಾಗಲಿದೆ. ಈ ಬಗ್ಗೆ ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣ ಸಂಸ್ಥೆ ಟ್ವೀಟ್ ಮಾಡಿ ಅಧಿಕೃತಗೊಳಿಸಿದೆ. "ಜನವರಿ 6ರಂದು ಸಿನಿಮಾ ಗಂಗೂಬಾಯಿ ಕಥೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ" ಎಂದು ಹೇಳಿದ್ದಾರೆ. ಈ ಮೊದಲು ಸಿನಿಮಾ ಒಟಿಟಿಯಲ್ಲಿ ಬರಲಿದೆ ಎನ್ನಲಾಗಿತ್ತು. ಆದರೀಗ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ.

  ನೈಜ ಘಟನೆ ಆಧಾರಿತ ಸಿನಿಮಾ

  ನೈಜ ಘಟನೆ ಆಧಾರಿತ ಸಿನಿಮಾ

  ಗಂಗೂಬಾಯಿ ಸಿನಿಮಾ ನೈಜ ಘಟನೆ ಆಧರಿಸಿದ ಚಿತ್ರವಾಗಿದೆ. ಮುಂಬೈನ ಕಾಮಾಟಿಪುರದ ಡಾನ್ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಗಂಗೂಬಾಯಿಯಾಗಿ ನಟಿ ಆಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

  ಚಿತ್ರದ ವಿರುದ್ಧ ದೂರು ನೀಡಿದ್ದ ಗಂಗೂಬಾಯಿ ದತ್ತು ಪುತ್ರ

  ಚಿತ್ರದ ವಿರುದ್ಧ ದೂರು ನೀಡಿದ್ದ ಗಂಗೂಬಾಯಿ ದತ್ತು ಪುತ್ರ

  ಗಂಗೂಬಾಯಿ ಸಿನಿಮಾದ ವಿರುದ್ಧ ಅವರ ದತ್ತು ಪುತ್ರ ಎಂದು ಹೇಳಿಕೊಳ್ಳುತ್ತಿರುವ ಬಾಬುರಾವ್ ಶಾ ಆಕ್ರೋಶ ಹೊರಹಾಕಿದ್ದರು. ಚಿತ್ರದಲ್ಲಿ ಗಂಗೂಬಾಯಿ ಅವರನ್ನು ಕೆಟ್ಟದಾಗಿ ತೊರಿಸಲಾಗಿದೆ ಎಂದು ಚಿತ್ರತಂಡದ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಸಂಜಯ್ ಲೀಲಾ ಬನ್ಸಾಲಿ ಮತ್ತು ನಿರ್ಮಾಣ ಸಂಸ್ಥೆ ವಿರುದ್ಧ ದೂರು ನೀಡಿದ್ದರು. ಎಲ್ಲಾ ವಿವಾದಗಳನ್ನು ಮೀರಿ ಕೊನೆಗೂ ಗಂಗೂಬಾಯಿ ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿದೆ. ಗಂಗೂಬಾಯಿಯಾಗಿ ಅಲಿಯಾ ಭಟ್ ಹೇಗೆ ನಟಿಸಿದ್ದಾರೆ ಎಂದು ನೋಡಲು ಇನ್ನು ಸ್ವಲ್ಪ ಸಮಯ ಕಾಯಲೇಬೇಕು.

  English summary
  Alia Bhatt starrer Gangubai Kathiawadi film will release on january 6th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X