Met Gala 2024: ಗ್ರ್ಯಾಂಡ್ ಈವೆಂಟ್‌ನಲ್ಲಿ ಸೀರೆ ಉಟ್ಟು ಆಲಿಯಾ ಕಮಾಲ್

ಜಗತ್ತಿನ ಅತಿದೊಡ್ಡ ಫ್ಯಾಷನ್ ಈವೆಂಟ್‌ಗಳಲ್ಲಿ ಮೆಟ್ ಗಾಲಾ ಪ್ರತಿವರ್ಷ ಸದ್ದು ಮಾಡುತ್ತದೆ. ನ್ಯೂಯಾರ್ಕ್‌ ಎಫ್‌ಎಸ್‌ಇ ಮೆಟ್ರೋಪಾಲಿಟನ್ ಮ್ಯೂಜಿಯಂ ಆಫ್ ಆರ್ಟ್‌ನಲ್ಲಿ ಈ ವರ್ಷವೂ ಈವೆಂಟ್ ಶುರುವಾಗಿದೆ. ಹಾಲಿವುಡ್ ತಾರೆಯರ ಜೊತೆಗೆ ಬಾಲಿವುಡ್ ನಟಿಯರು ರೆಡ್‌ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾರೆ. ಡಿಸೈನರ್‌ಗಳು ವಿಶೇಷಗಾಗಿ ಸಿದ್ಧಪಡಿಸಿದ ಚಿತ್ರವಿಚಿತ್ರ ಕಾಸ್ಟ್ಯೂಮ್ ತೊಟ್ಟು ಚೆಲುವೆಯರು ಮೋಡಿ ಮಾಡುತ್ತಾರೆ.

ಈ ವರ್ಷ ಮೆಟ್ ಗಾಲಾ ಈವೆಂಟ್‌ನಲ್ಲಿ ಬಾಲಿವುಡ್ ಚೆಲುವೆ ಆಲಿಯಾ ಭಟ್ ಸೀರೆ ಉಟ್ಟು ಕಂಗೊಳಿಸಿದ್ದಾರೆ. ಬಿಳಿ ಬಣ್ಣದ ಸಬ್ಯಸಾಚಿ ಸೀರೆಯಲ್ಲಿ ರೆಡ್ ಕಾರ್ಪೆಟ್ ಮೇಲೆ ಆಲಿಯಾ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋಗಳು ವೈರಲ್ ಆಗುತ್ತಿದೆ. ಹಾಲಿವುಡ್ ಫೋಟೊಗ್ರಾಫರ್ಸ್ ಬಾಲಿವುಡ್ ಬೆಡಗಿಯ ಅಂದ ಚೆಂದವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿಯಲು ಮುಗಿಬಿದ್ದಿದ್ದಾರೆ.

Alia Bhatt Stuns at Met Gala 2024 in Traditional Saree

ಮೆಟ್ ಗಾಲಾ ಈವೆಂಟ್‌ನಲ್ಲಿ ಭಾಗಿ ಆಗುತ್ತಿರುವ ಬಗ್ಗೆ ವೋಗ್ ಸಂದರ್ಶನದಲ್ಲಿ ಆಲಿಯಾ ಭಟ್ ಮಾತನಾಡಿದ್ದಾರೆ. "ನನಗೆ ಬಹಳ ಖುಷಿಯಾಗುತ್ತಿದೆ. ಬಹಳ ಎಗ್ಸೈಟ್ ಆಗಿದ್ದೀನಿ. ತಿಂಗಳ ತಯಾರಿ, ಸಾಕಷ್ಟು ಚರ್ಚೆ ಎಲ್ಲವೂ ಈ ಕ್ಷಣಕ್ಕಾಗಿಯೇ ಮಾಡಿದ್ದು. ಇದು ನಿಜಕ್ಕೂ ಸಖತ್ ಸ್ಪೆಷಲ್. ನಾನು ಮೆಟ್ ಗಾಲಾದಲ್ಲಿ ಹೆಜ್ಜೆ ಹಾಕಿದ್ದು 2ನೇ ಬಾರಿ. ಸೀರೆ ಉಟ್ಟಿದ್ದು ಇದೇ ಮೊದಲು ಎಂದು ಆಲಿಯಾ ಭಟ್ ವಿವರಿಸಿದ್ಧಾರೆ.

ಇನ್ನು ಆಲಿಯಾ ಭಟ್ ಮೆಗ್ ಗಾಲಾ ಲುಕ್ ವೈರಲ್ ಆಗುತ್ತಿದ್ದಂತೆ ಇದು ದೀಪಿಕಾ ಪಡುಕೋಣೆ ಲುಕ್ ಕಾಪಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 2017ರಲ್ಲಿ ಮರಾಠಿ ಫಿಲ್ಮ್‌ಫೇರ್ ಅವಾರ್ಡ್ಸ್ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಇದೇ ರೀತಿಯ ಸೀರೆ ಉಟ್ಟಿದ್ದರು. ಈ ಸೀರೆಯನ್ನು ಸಹ ಸಬ್ಯಸಾಚಿ ವಿನ್ಯಾಸಗೊಳಿಸಿದ್ದರು. ಸೇಮ್ ಇದೇ ಡಿಸೈನ್ ಕಾಪಿ ಪೇಸ್ಟ್ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಆಲಿಯಾ ಭಟ್ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಮದುವೆ, ಮಗು ಎಂದು ಕೆಲ ದಿನಗಳ ಕಾಲ ಚಿತ್ರರಂಗದಿಂದ ದೂರಾಗಿದ್ದ ಆಕೆ ಇದೀಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ಮುಂದಾಗಿದ್ದಾರೆ. ರಾಹಾಳ ಆರೈಕೆ ಜೊತೆ ಜೊತೆಗೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ನಿರ್ದೇಶಕ ಅಯಾನ್ ಮುಖರ್ಜಿ ಇತ್ತೀಚೆಗೆ ರಣ್ಬೀರ್- ಆಲಿಯಾ ಮಗಳನ್ನು ಕರೆದುಕೊಂಡು ಸುತ್ತಾಡಿದ್ದ ವಿಡಿಯೋ ವೈರಲ್ ಆಗಿತ್ತು.

ಕಳೆದ ವರ್ಷ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಹಾಗೂ 'ಹಾರ್ಟ್‌ ಆಫ್ ಸ್ಟೋನ್' ಎನ್ನುವ ಹಾಲಿವುಡ್ ಚಿತ್ರದಲ್ಲಿ ಆಲಿಯಾ ಭಟ್ ಮಿಂಚಿದ್ದರು. ರಾಣಿ ಚಟರ್ಜಿ ಪಾತ್ರಕ್ಕಾಗಿ ಫಿಲ್ಮ್ ಫೇರ್ ಸೇರಿದಂತೆ ಹಲವು ಪ್ರಶಸ್ತಿಗಳು ಆಲಿಯಾಗೆ ಲಭಿಸಿತ್ತು.

2022ರ ಏಪ್ರಿಲ್ 14ರಂದು ರಣ್ಬೀರ್- ಆಲಿಯಾ ಭಟ್ ಮದುವೆ ಆಗಿತ್ತು. ಅದೇ ವರ್ಷ ನವೆಂಬರ್ 6ಕ್ಕೆ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮದುವೆಗೂ ಮುನ್ನ ಆಕೆ ಗರ್ಭಿಣಿ ಆಗಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು. ಸದ್ಯ 'ಜಿಗ್ರ' ಎನ್ನುವ ಚಿತ್ರವನ್ನು ಆಕೆ ನಿರ್ಮಿಸಿ ನಟಿಸುತ್ತಿದ್ದಾರೆ.

Alia Bhatt Stuns at Met Gala 2024 in Traditional Saree

ಮಹೇಶ್ ಭಟ್ ಹಾಗೂ ಸೋನಿ ರಾಜ್ದನ್ ಮಗಳಾಗಿ ಹುಟ್ಟಿದ ಆಲಿಯಾ ಭಟ್‌ ಚಿತ್ರರಂಗಕ್ಕೆ ಬರುವುದು ಕಷ್ಟ ಏನು ಆಗಲಿಲ್ಲ. ಬಾಲನಟಿಯಾಗಿಯೇ ಬಾಲಿವುಡ್ ಪ್ರವೇಶಿಸಿದ ಆಕೆ 'ಸ್ಟೂಡೆಂಟ್ ಆಫ್ ದಿ ಇಯರ್' ಸಿನಿಮಾ ಮೂಲಕ ನಾಯಕಿ ಆಗಿದ್ದರು. ಹೈವೇ, ಉಡ್ತಾ ಪಂಜಾಬ್, ಡಿಯರ್ ಜಿಂದಗಿ, ಗಂಗೂಬಾಯಿ ಕಥಿಯಾವಾಡ, ಆರ್‌ಆರ್‌ಆರ್ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದಾರೆ.

More from Filmibeat

English summary
Alia Bhatt's Forrest Fairy Look from Met Gala 2024 goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X