ಸಹೋದರಿಯ ಸ್ಥಿತಿ ಕಂಡು ಕಣ್ಣೀರಿಟ್ಟ ಬಾಲಿವುಡ್ ನಟಿ ಆಲಿಯಾ ಭಟ್

ಖ್ಯಾತ ಪತ್ರಕರ್ತೆ ಬರ್ಖಾ ದತ್ 'ವಿ ದಿ ವಿಮೆನ್' ಎನ್ನುವ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ದೇಶದ ವಿವಿದ ಭಾಗಗಳಲ್ಲಿ ವಿ ದಿ ವಿಮೆನ್ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಿಳೆಯರ ಕಷ್ಟ, ಸಮಸ್ಯೆ, ನೋವನ್ನು ಹೇಳಿಕೊಳ್ಳುವ ವೇದಿಕೆ ವಿ ದಿ ವಿಮೆನ್. ಇತ್ತೀಚಿನ ದಿನಗಳಲ್ಲಿ ಮಿ ಟೂ ಚಳುವಳಿ ಹೆಚ್ಚು ಸದ್ದು ಮಾಡಿದ್ದರು, ಸಮಸ್ಯೆಯಿಂದ ನರಳುತ್ತಿರುವ ಅನೇಕ ಮಹಿಳೆಯರ ಧ್ವನಿ ಇಂದಿಗೂ ಕೇಳಿಸುವುದೆ ಇಲ್ಲ. ಅಂತಹ ಮಹಿಳೆಯರಿಗೆ ವೇದಿಕೆಯನ್ನು ಒದಗಿಸಿ, ಅವರ ಕಷ್ಟ, ಸಮಸ್ಯೆ ಹಾಗೂ ಸಾಧನೆ ಸೇರಿದಂತೆ ಮಹಿಳೆಯರ ಅಂತರಂಗ ತೆರೆದಿರುವ ಒಂದು ವೇದಿಕೆ.

ಕ್ರೀಡೆ, ಸಿನಿಮಾ, ರಾಜಕೀಯ, ಸಾಹಿತ್ಯ ಸೇರಿದಂತೆ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಮೂಲಕ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಇತ್ತೀಚಿಗೆ ಬರ್ಖಾ ದತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿಯೂ ಸಂವಾದ ಕಾರ್ಯಕ್ರಮ ನಡೆಸಲಾಗಿತ್ತು.

ನಟಿ ಶ್ರುತಿ ಹರಿಹರನ್, ದ್ಯುತಿ ಚಾಂದ್, ನಿಶಾ ಮಿಲೆಟ್, ನಟಿ ಸಾರಾ ಅಲಿಖಾನ್, ಕಿರಣ್ ಮಜುಂದಾರ್ ಷಾ ಸೇರಿದಂತೆ 25ಕ್ಕೂ ಅಧಿಕ ಮಂದಿ ಸಂವಾದದಲ್ಲಿ ಭಾಗಿಯಾಗಿದ್ದರು. ನಟಿ ಶ್ರುತಿ ಹರಿಹರನ್ ಮಿ ಟೂ ಬಗ್ಗೆ ಮಾತನಾಡಿ ಈ ಪ್ರಕರಣದಿಂದ ಅವಕಾಶಗಳು ಕಮ್ಮಿಯಾಯಿತು ಎಂದು ಹೇಳಿದ್ದರು. ಇನ್ನು ಮುಂಬೈನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಟಿ ಅಲಿಯಾ ಭಟ್ ಭಾಗಿಯಾಗಿ ಕಣ್ಣೀರಾಕಿದ್ರು.

ಮುಂಬೈನಲ್ಲಿ ವಿ ದಿ ವಿಮೆನ್ ಸಂವಾದ

ಮುಂಬೈನಲ್ಲಿ ವಿ ದಿ ವಿಮೆನ್ ಸಂವಾದ

ಇತ್ತೀಚಿಗೆ ಮುುಂಬೈನಲ್ಲಿ ನಡೆದ ವಿ ದಿ ವಿಮೆನ್ ಸಂವಾದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಅಲಿಯಾ ಭಟ್ ಮತ್ತು ಸಹೋದರಿ ಶಾಹಿನ್ ಭಟ್ ಭಾಗಿಯಾಗಿದ್ದರು. ವಿ ದಿ ವಿಮೆನ್ ವೇದಿಕೆಯಲ್ಲಿ ಮಾತನಾಡುತ್ತ ನಟಿ ಅಲಿಯಾ ಭಟ್ ಗಳಗಳನೆ ಅತ್ತಿದ್ದಾರೆ. ಸಹೋದರಿ ಶಾಹಿನ್ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತ ಅಲಿಯಾ ಭಾವುಕರಾಗಿದ್ದಾರೆ.

ಖಿನ್ನತೆಗೆ ಒಳಗಾಗಿದ್ದ ಅಲಿಯಾ ಸಹೋದರಿ

ಖಿನ್ನತೆಗೆ ಒಳಗಾಗಿದ್ದ ಅಲಿಯಾ ಸಹೋದರಿ

ಸಹೋದರಿ ಶಾಹಿನ್ ಅನೇಕ ವರ್ಷಗಳಿಂದ ಖಿನ್ನತೆಗೆ ಒಳಗಾದಿದ್ದರಂತೆ. ಸುಮಾರು ವರ್ಷಗಳ ಕಾಲ ಅಕೆ ಅನುಭವಿಸಿದ ಯಾತನೆ ನೆನೆದು ಅಲಿಯಾ ಕಣ್ಣೀರಿಟ್ಟರು. ಸಹೋದರಿ ಶಾಹಿನ್ ಬಗ್ಗೆ ಮತನಾಡುವ ವೇಳೆಯಲ್ಲ ಅಲಿಯಾ ಭಾವುಕರಾಗುತ್ತಾರೆ.

ವೈರಲ್ ಆದ ಬಾಲಿವುಡ್ ಜೋಡಿ ಹಕ್ಕಿಗಳ ರಹಸ್ಯ ಪ್ರವಾಸ ಫೋಟೋಗಳಿವು

ಖಿನ್ನತೆ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾಪ

ಖಿನ್ನತೆ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾಪ

ಇನ್ನು ಅಲಿಯಾ ಸಹೋದರಿ ಶಾಹಿನ್ ಒಂದು ಪುಸ್ತಕ ಕೂಡ ಬರೆದಿದ್ದಾರೆ. 'I've Never Been (Un) Happier' ಎನ್ನುವ ಪುಸ್ತಕ ಶಾಹಿನ್ ಬರೆದಿದ್ದಾರೆ. 26 ವರ್ಷ ಆಕೆಯ ಜೊತೆಯೆ ಇದ್ದರು, ಆಕೆ ಬರೆದ ಪುಸ್ತಕ ಓದಿನ ನಂತರ ಶಾಹಿನ್ ಏನು ಮಾಡುತ್ತಿದ್ದರು ಎನ್ನುವುದು ಅರ್ಥವಾಗಿದೆ" ಎಂದು ಹೇಳಿದ್ದಾರೆ.

ಆತ್ಮಹತ್ಯೆ ನಿರ್ಧಾರ ಮಾಡಿದ್ದೆ

ಆತ್ಮಹತ್ಯೆ ನಿರ್ಧಾರ ಮಾಡಿದ್ದೆ

"ಖಿನ್ನತೆ ಬಗ್ಗೆ ಮಾತನಾಡಿದ ಶಾಹಿನ್ ನಾನು ಬದುಕುವುದೆ ಬೇಡ ಎಂದು ನಿರ್ಧರಿಸಿದ್ದೆ. 17-18 ವರ್ಷದವಳಾಗಿದ್ದಾಗ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಸಿದ್ದೆ. ಖಿನ್ನತೆ ನನ್ನ ಜೀವನದ ಒಂದು ಭಾಗವಾಗಿದೆ. ಆದರೀಗ ನಾನು ನಾರ್ಮಲ್ ಆಗಿದ್ದೀನಿ" ಎಂದು ಹೇಳಿದ್ದಾರೆ. ಅಲಿಯಾ ಭಟ್ ಸಹೋದರಿ ಶಾಹಿನ್ ಜೊತೆ ಉತ್ತಮವಾದ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಇಬ್ಬರು ಸದಾ ಒಟ್ಟಿಗೆ ಇರುತ್ತಾರೆ. ಪ್ರೀತಿಯ ಸಹೋದರಿ ಬಗ್ಗೆ ಮಾತನಾಡುವಾಗಲೆಲ್ಲ ಅಲಿಯಾ ಭಾವುಕರಾಗುತ್ತಾರೆ.

More from Filmibeat

English summary
Bollywood actress alia bhatt tears talking about her sister depression.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X