ಆಲಿಯಾ ಭಟ್ ಗೆ ಈ ದಿನ ತುಂಬಾ ತುಂಬಾ ವಿಶೇಷವಂತೆ
ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ವಿಭಿನ್ನ ಪಾತ್ರ ಮತ್ತು ವಿಭಿನ್ನ ಸಿನಿಮಾಗಳ ಮೂಲಕ ಜನರ ಗಮನ ಸೆಳೆದಿರುವ ನಟಿ. ಸ್ಟೂಡೆಂಟ್ ಆಫ್ ದಿ ಇಯರ್, ಹೈವೇ, 2ಸ್ಟೇಟಸ್, ರಾಝೀ, ಗಲ್ಲಿ ಬಾಯ್ ಅಂತಹ ಹಿಟ್ ಸಿನಿಮಾಗಳನ್ನ ನೀಡಿರುವ ಆಲಿಯಾ, ಈಗ ಕಳಂಕ್ ಚಿತ್ರದ ಮೂಲಕ ಸದ್ದು ಮಾಡ್ತಿದ್ದಾರೆ.
ಇದೀಗ, ಮೊದಲ ಸಲ ದಕ್ಷಿಣ ಭಾರತದ ಚಿತ್ರದಲ್ಲಿ ಆಲಿಯಾ ಭಟ್ ನಟಿಸುತ್ತಿದ್ದಾರೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರದಲ್ಲಿ ಆಲಿಯಾ ನಾಯಕಿ ಅಭಿನಯಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ರಾಜಮೌಳಿ ಅವರೇ ಟ್ವೀಟ್ ಮಾಡಿ, ಬಾಲಿವುಡ್ ನಟಿಗೆ ಸ್ವಾಗತ ನೀಡಿದ್ದಾರೆ.
ರಾಜಮೌಳಿ ತಂಡದ ಸ್ವಾಗತಕ್ಕೆ ಧನ್ಯವಾದ ಹೇಳಿರುವ ಆಲಿಯಾ ಭಟ್, ನನಗೆ ಈ ದಿನ ತುಂಬಾ ತುಂಬಾ ವಿಶೇಷ. ಈ ತಂಡದ ಜೊತೆ ನಟಿಸಲು ಕಾತುರದಿಂದ ಕಾಯ್ತಿದ್ದೀನಿ. ಥ್ಯಾಂಕ್ ಯೂ ರಾಜಮೌಳಿ ಸರ್ ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ'' ಎಂದು ಟ್ವೀಟ್ ಮಾಡಿದ್ದಾರೆ.

ಇನ್ನುಳಿದಂತೆ ಬಾಹುಬಲಿ ಚಿತ್ರದ ನಂತರ ಆರ್ಆರ್ಆರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಅಜಯ್ ದೇವಗನ್ ಕೂಡ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ 2020ಕ್ಕೆ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











