ಈ ಬಾಲಿವುಡ್ ನಟ-ನಟಿಯರು ಭಾರತದಲ್ಲಿ ಯಾಕೆ ಮತ ಚಲಾಯಿಸಲ್ಲ; ಕಾರಣವೇನು?

ದೇಶದಲ್ಲಿ ಲೋಕಸಭೆ ಚುನಾವಣೆ ಕಾವು ರಂಗೇರಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಎರಡನೇ ಹಂತದ ಮತದಾನಕ್ಕೆ ದಿನಗಣನೆ ಶುರುವಾಗಿದೆ. 4 ರಾಜ್ಯಗಳಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ಸಹ ನಡೆಯುತ್ತಿದೆ.

ಸದೃಢ ಸರ್ಕಾರಕ್ಕಾಗಿ ಎಲ್ಲರೂ ಮತ ಚಲಾಯಿಸಲೇಬೇಕು. ಆದರೆ ಇವತ್ತಿಗೂ ಮತದಾನದ ಪ್ರಮಾಣ ಬಹಳ ಕಮ್ಮಿ ಇದೆ. ಅನಕ್ಷರಸ್ಥರು ಕೂಡ 10 ನಿಮಿಷ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಲು ಹಿಂದು ಮುಂದು ನೋಡುತ್ತಾರೆ. ಇದೇ ಕಾರಣಕ್ಕೆ ದಿನದಿಂದ ದಿನಕ್ಕೆ ಮತದಾನ ಪ್ರಮಾಣ ಕಮ್ಮಿ ಆಗುತ್ತಲೇ ಇದೆ. ಇದೆಲ್ಲಾ ಒಂದು ಕಡೆ ಇದ್ದರೆ ಕೆಲವರಿಗೆ ದೇಶದಲ್ಲಿ ಮತದಾನ ಹಕ್ಕು ಇಲ್ಲ. ಈ ಪಟ್ಟಿಯಲ್ಲಿ ಸಿನಿಮಾ ತಾರೆಯರು ಇದ್ದಾರೆ.

Alia Bhatt to Imran Khan Bollywood actors who will not be voting in Lok Sabha Elections 2024

ಬಾಲಿವುಡ್‌ನ ಖ್ಯಾತ ನಟ-ನಟಿಯರು ಮತದಾನ ಮಾಡುವುದಿಲ್ಲ. ಅವರಿಗೆ ಭಾರತದ ಪೌರತ್ವ ಇಲ್ಲ. ಹಾಗಾಗಿ ಇಲ್ಲಿ ಮತ ಚಲಾಯಿಸುವ ಹಕ್ಕು ಇಲ್ಲ ಎಂದರೆ ನಿಮಗೆ ಅಚ್ಚರಿ ಆಗಬಹುದು. ಬ್ರಿಟೀಷ್ ಪೌರತ್ವ ಹೊಂದಿರುವ ಕಾರಣ ಭಾರತದ ಚುನಾವಣೆಗಳಿಗೆ ಆಲಿಯಾ ಭಟ್ ಮತ ಚಲಾಯಿಸಲು ಸಾಧ್ಯವಿಲ್ಲ. ಭಾರತೀಯ ಚುನಾವಣೆಗಳಲ್ಲಿ ಮತ ಚಲಾಯಿಸಲು ಅರ್ಹಳಾಗಿಲ್ಲ. ಈ ನಿರ್ಬಂಧವು ಭಾರತೀಯ ನಾಗರಿಕರಿಗೆ ಮಾತ್ರ ಮತದಾನದ ಹಕ್ಕುಗಳನ್ನು ಸೀಮಿತಗೊಳಿಸುವ ಭಾರತೀಯ ಚುನಾವಣಾ ಕಾನೂನುಗಳನ್ನು ಆಧರಿಸಿದೆ.

ಬಿಟೌನ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್‌ ಅವರದ್ದು ಇದೇ ಕಥೆ. ತಾಯಿ ಮಲೇಷಿಯಾದವರು. ತಂದೆ ಶ್ರೀಲಂಕಾ. ಬಹ್ರೇನ್‌ನಲ್ಲಿ ಹುಟ್ಟಿ ಬೆಳೆದ ಜಾಕ್ವೆಲಿನ್ ಶ್ರೀಲಂಕಾ ದೇಶದ ಪೌರತ್ವ ಇದೆ. ಹಾಗಾಗಿ ಆಕೆ ಮುಂಬೈನಲ್ಲೇ ಬೀಡು ಬಿಟ್ಟಿದ್ದರೂ ಇಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ. ಸದ್ಯ ಜಾಕ್ವೆಲಿನ್ ಕ್ರೇಜ್ ಕೂಡ ಕಮ್ಮಿ ಆಗಿದೆ. ಇತ್ತೀಚೆಗೆ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಈಕೆಯ ಹೆಸರು ತಳುಕು ಹಾಕಿಕೊಂಡು ಭಾರೀ ಸುದ್ದಿ ಆಯಿತು.

ಐಟಂ ಸಾಂಗ್‌ನಲ್ಲಿ ಕುಣಿದು ಹೆಚ್ಚು ಜನಪ್ರಿಯತೆ ಪಡೆದ ನಟಿ ನೋರಾ ಫತೇಹಿ. ಆಕೆ ಕೆನಡಾ ಪೌರತ್ವ ಹೊಂದಿದ್ದು ಅಲ್ಲೇ ಹುಟ್ಟಿ ಬೆಳೆದಾಕೆ. ಹಾಗಾಗಿ ನೋರಾ ಕೂಡ ಭಾರತದ ಯಾವುದೇ ಚುನಾವಣೆಗಳಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ.

ಬಾಲಿವುಡ್ ನಟ ಇಮ್ರಾನ್ ಖಾನ್ ತಮ್ಮ ರೊಮ್ಯಾಂಟಿಕ್ ಸಿನಿಮಾಗಳಿಂದ ಸಿನಿರಸಿಕರಿಗೆ ಚಿರಪರಿಚಿತ. ಇಮ್ರಾನ್ ಹುಟ್ಟಿ ಬೆಳೆದಿದ್ದು ದೂರದ ಅಮೆರಿಕಾದ ವಿಸ್ಕಾನ್ಸಿನ್‌ನ ಮ್ಯಾಡಿಸನ್‌ನಲ್ಲಿ. ತಂದೆ - ತಾಯಿ ವಿಚ್ಛೇದನ ಪಡೆದು ದೂರಾದ ಬಳಿಕ ಇಮ್ರಾನ್ ಭಾರತಕ್ಕೆ ಬಂದರು. ನಟ ಆಮೀರ್ ಖಾನ್‌ ಬಂಧು ಕೂಡ ಆಗಿರುವ ಇಮ್ರಾನ್ ಇಲ್ಲಿ ಮತ ಚಲಾಯಿಸುವುದಿಲ್ಲ.

ಕೆನಡಾದಲ್ಲಿ ಹುಟ್ಟಿ ಅಮೆರಿಕಾ ಪೌರತ್ವ ಹೊಂದಿರುವ ಸನ್ನಿ ಲಿಯೋನ್ ಸಹ ಇಲ್ಲಿ ಮತ ಚಲಾಯಿಸುವುದಿಲ್ಲ. ಮೊದಲು ನೀಲಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸನ್ನಿ ಬಳಿಕ ಬಿಗ್‌ಬಾಸ್ ಶೋ ಮೂಲಕ ಭಾರತಕ್ಕೆ ಬಂದರು. ಬಳಿಕ ಸ್ಪೆಷಲ್ ಸಾಂಗ್‌ನಲ್ಲಿ ಕುಣಿದು, ಬೋಲ್ಡ್ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದರು. ಸದ್ಯ ಪತಿ ಹಾಗೂ ಮಕ್ಕಳ ಜೊತೆ ಮುಂಬೈನಲ್ಲೇ ಸನ್ನಿ ವಾಸವಿದ್ದಾರೆ.

Alia Bhatt to Imran Khan Bollywood actors who will not be voting in Lok Sabha Elections 2024

ಮತ್ತೊಬ್ಬ ಬಿಂದಾಸ್ ನಟಿ ಇಲಿಯಾನ ಡಿಕ್ರೂಸ್ ಕೂಡ ಭಾರತದಲ್ಲಿ ಮತ ಚಲಾಯಿಸಲು ಹಕ್ಕು ಹೊಂದಿಲ್ಲ. ತೆಲುಗಿನ 'ದೇವದಾಸು' ಸಿನಿಮಾ ಮೂಲಕ ಆಕೆ ಬಣ್ಣದ ಲೋಕಕ್ಕೆ ಪರಿಚಿತರಾದರು. ಕನ್ನಡ ಸಿನಿಮಾಗಳಲ್ಲಿ ಕೂಡ ಮಿಂಚಿದ್ದಾರೆ. ಆಕೆ ಪೋರ್ಚುಗೀಸ್ ಪೌರತ್ವ ಹೊಂದಿದ್ದಾರೆ.

ಹಿರಿಯ ನಟಿ ದೀಪ್ತಿ ನಾವಲ್, ಕಲ್ಕಿ ಕೊಚ್ಲಿನ್, ನಗ್ರೀಸ್ ಫಕ್ರಿ ಹೀಗೆ ಇನ್ನು ಹಲವು ನಟ-ನಟಿಯರು ಭಾರತದಲ್ಲಿ ಈ ಬಾರಿಯೂ ಮತ ಚಲಾಯಿಸುತ್ತಿಲ್ಲ. ಈ ಹಿಂದೆ ನಟ ಅಕ್ಷಯ್ ಕುಮಾರ್‌ಗೆ ಸಹ ಈ ಅವಕಾಶವಿರಲಿಲ್ಲ. ಆದರೆ ಕಳೆದ ವರ್ಷ ಅಕ್ಕಿ ಭಾರತದ ಪೌರತ್ವ ಪಡೆದುಕೊಂಡಿದ್ದರು.

More from Filmibeat

English summary
Bollywood actors who can't vote in Lok Sabha elections 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X