For Quick Alerts
  ALLOW NOTIFICATIONS  
  For Daily Alerts

  'ಶಿವ' ಎನ್ನಲು ಹನ್ನೆರಡು ಕೋಟಿ ಪಡೆದ ಆಲಿಯಾ ಭಟ್!

  |

  ಆಲಿಯಾ ಭಟ್ ಬಾಲಿವುಡ್‌ನ ಟಾಪ್ ನಟಿ. ಇತ್ತೀಚಿನ ವರ್ಷಗಳಲ್ಲಿ ದೀಪಿಕಾ ಪಡುಕೋಣೆಯನ್ನೂ ಮೀರಿಸಿ ಮುಂದೆ ಸಾಗಿದ್ದಾರೆ. ಬಾಲಿವುಡ್‌ನ ಟಾಪ್ ನಟರೇ ಹಿಟ್ ನೀಡಲು ತಿಣುಕಾಡುತ್ತಿದ್ದಾಗ 'ಗಂಗೂಭಾಯಿ ಕಾಠಿಯಾವಾಡಿ' ಅಂಥಹಾ ಮಹಿಳಾ ಪ್ರಧಾನ ಸಿನಿಮಾ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಹೊಡೆದವರು ಆಲಿಯಾ.

  ಬಾಲಿವುಡ್‌ನ ಕೆಲವು ಯುವ ಸ್ಟಾರ್ ನಟರಿಗಿಂತಲೂ ಹೆಚ್ಚಿನ ತಾರಾ ಮೌಲ್ಯ ಹೊಂದಿರುವ ಆಲಿಯಾ, ತಮ್ಮ ತಾರಾ ಮೌಲ್ಯಕ್ಕೆ ತಕ್ಕಂತೆ ಸಂಭಾವನೆಯನ್ನೂ ಪಡೆಯುತ್ತಾರೆ. ಸ್ಟಾರ್ ನಟ-ನಟಿಯರು ಸಿನಿಮಾದಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳುತ್ತಾರೆ. ಆಕ್ಷನ್-ರೊಮ್ಯಾನ್ಸ್, ಡ್ಯಾನ್ಸ್ ಇನ್ನಿತರೆಗಳಲ್ಲಿ ತೊಡಗುತ್ತಾರೆ ಹಾಗಾಗಿ ಅವರಿಗೆ ಹೆಚ್ಚಿನ ಸಂಭಾವನೆ ಎಂಬುದು ಅಲಿಖಿತ ನಿಯಮ ಎಂಬಂತಾಗಿದೆ.

  ಆದರೆ ನಟಿ ಆಲಿಯಾ ಭಟ್‌ಗೆ ಕೇವಲ 'ಶಿವ' ಎನ್ನಲು ಹನ್ನೆರಡು ಕೋಟಿ ಸಂಭಾವನೆ ನೀಡಲಾಗಿದೆಯಂತೆ! ಹೀಗೆಂದು ನೆಟ್ಟಿಗರು ಆರೋಪ ಮಾಡಿದ್ದಾರೆ.

  ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದು ಸೂಪರ್ ಹಿಟ್ ಎನಿಸಿಕೊಂಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ಈಗಾಗಲೇ 250 ಕೋಟಿಗೂ ಹೆಚ್ಚು ಹಣ ಬಾಚಿದೆ. ಆದರೆ ಸಿನಿಮಾ ಬಗ್ಗೆ ವಿಮರ್ಶೆಗಳು ಮಾತ್ರ ಋಣಾತ್ಮಕವಾಗಿಯೇ ಬಂದಿವೆ. ಅದರಲ್ಲಿಯೂ ನಾಯಕಿಯಾಗಿ ನಟಿಸಿರುವ ಆಲಿಯಾ ಭಟ್ ಪಾತ್ರದ ಬಗ್ಗೆಯಂತೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ವಿಮರ್ಶಕರು ಮತ್ತು ಪ್ರೇಕ್ಷಕರು.

  'ಬ್ರಹ್ಮಾಸ್ತ್ರ' ಸಿನಿಮಾದ ಆಲಿಯಾ ಭಟ್ ಪಾತ್ರದ ಬಗ್ಗೆ ನೆಟ್ಟಿಗರು ಹಾಸ್ಯ ಮಾಡಿದ್ದು, ಸಿನಿಮಾದಲ್ಲಿ 'ಶಿವ', 'ಶಿವ' ಎಂದು ಬೇರೆ ಬೇರೆ ರೀತಿಯಲ್ಲಿ ಹೇಳುವುದು ಬಿಟ್ಟು ಆಲಿಯಾ ಭಟ್ ಏನನ್ನೂ ಮಾಡಿಲ್ಲ. ಕೇವಲ 'ಶಿವ' ಎನ್ನಲು ಆಲಿಯಾ ಭಟ್‌ಗೆ 12 ಕೋಟಿ ಸಂಭಾವನೆ ನೀಡಲಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

  'ಬ್ರಹ್ಮಾಸ್ತ್ರ' ಸಿನಿಮಾ ಸಂಪೂರ್ಣವಾಗಿ ನಾಯಕ ಪ್ರಧಾನವಾಗಿದ್ದು ರಣ್ಬೀರ್ ಪಾತ್ರ ಶಿವನ ಸುತ್ತಲೇ ಇಡೀ ಸಿನಿಮಾ ಸುತ್ತುತ್ತದೆ. ನಾಯಕಿಯಾಗಿ ಆಲಿಯಾ ಭಟ್ ಇದ್ದರೂ ಸಹ ನೆಪಮಾತ್ರಕ್ಕೆ ಅಷ್ಟೆ. ನಾಯಕನ ಪಾತ್ರದ ಜೊತೆಗೆ ಕಾಣಿಸಿಕೊಳ್ಳುವುದು ಬಿಟ್ಟು ಹೆಚ್ಚೇನೂ ಕೆಲಸವಿಲ್ಲ. ಹಾಂ ಅಂದಹಾಗೆ ಎರಡು ಹಾಡಿನಲ್ಲಿ ಕುಣಿದಿದ್ದಾರೆ.

  ನೆಟ್ಟಿಗರೊಬ್ಬರು ಬರೆದುಕೊಂಡಿರುವಂತೆ ಆಲಿಯಾ ಭಟ್, 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ 849 ಬಾರಿ ಶಿವ ಎಂದು ಹೇಳುತ್ತಾರಂತೆ. 'ಶಿವ ನಿನಗೇನಾಯ್ತು?', 'ನಿನಗೇನಾಯ್ತು ಶಿವ', 'ಏನಾಯ್ತು ನಿನಗೆ ಶಿವ', ಹೀಗೆ ಒಂದೇ ಡೈಲಾಗ್ ಅನ್ನು ತಿರುಗಿಸಿ ತಿರುಗಿಸಿ ಹೇಳಿದ್ದಾರಂತೆ ಆಲಿಯಾ! ಇದೇ ಕಾರಣಕ್ಕೆ ಕೇವಲ ಶಿವ ಎನ್ನಲು ಆಲಿಯಾ ಭಟ್ 12 ಕೋಟಿ ಪಡೆದಿದ್ದಾರೆ ಎಂದು ನೆಟ್ಟಿಗರು ಆಲಿಯಾರ ಕಾಲೆಳೆದಿದ್ದಾರೆ.

  ಟೀಕೆ, ವಿಮರ್ಶೆಗಳೇನೇ ಇದ್ದರು 'ಬ್ರಹ್ಮಾಸ್ತ್ರ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿದೆ. ಐದು ದಿನದಲ್ಲಿ 250 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. ಆಲಿಯಾ-ರಣ್ಬೀರ್ ಸೇರಿದಂತೆ ಇಡೀ ಚಿತ್ರತಂಡ ಖುಷಿಯಾಗಿದ್ದಾರೆ. 'ಬ್ರಹ್ಮಾಸ್ತ್ರ 2' ಗೆ ನಿರ್ದೇಶಕ ಅಯಾನ್ ಮುಖರ್ಜಿ ತಯಾರಿಯನ್ನೂ ಆರಂಭಿಸಿದ್ದಾರೆ.

  English summary
  Actress Alia Bhatt trolled heavily for her role in Brahmastra movie. Netizen said Alia took 12 crore remuneration just to say Shiva.
  Wednesday, September 14, 2022, 19:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X