ಟ್ರೋಲ್ ನಿಂದ ತಪ್ಪಿಸಿಕೊಳ್ಳಲು ಕಾಮೆಂಟ್ಸ್ ಹೈಡ್ ಮಾಡಿ ಪೋಸ್ಟ್ ಮಾಡುತ್ತಿರುವ ಅಲಿಯಾ ಭಟ್

ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ಸುಶಾಂತ್ ಸಿಂಗ್ ಸಾವಿನ ನಂತರ ಸ್ವಜನಪಕ್ಷಪಾತದ ವಿರುದ್ಧ ಅನೇಕರು ಸಿಡಿದೆದಿದ್ದಾರೆ. ನಟಿ ಅಲಿಯಾ ಭಟ್ ಸೇರಿದ್ದಂತೆ ಬಾಲಿವುಡ್ ನ ಅನೇಕ ಸ್ಟಾರ್ ಮಕ್ಕಳು ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅಲಿಯಾ ಭಟ್ ಸೇರಿದ್ದಂತೆ ಅನೇಕರನ್ನು ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ. ಅಲ್ಲದೆ ಸ್ಟಾರ್ ಮಕ್ಕಳನ್ನು ಸಾಕಷ್ಟು ಮಂದಿ ಅನ್ ಫಾಲೋ ಮಾಡುತ್ತಿದ್ದಾರೆ.

Recommended Video

Hrithik and Alia invited for Oscars 2020 , ಆಸ್ಕರ್ ಅಕಾಡೆಮಿಯಿಂದ ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಆಹ್ವಾನ

ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದೆ ಪೋಸ್ಟ್ ಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ನಟಿ ಅಲಿಯಾ ಭಟ್ ಅಭಿನಯದ ಸಡಾಕ್-2 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಹಾಗಾಗಿ ಪ್ರಮೋಷನ್ ಅನಿವಾರ್ಯವಾಗಿದೆ. ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕವೆ ಪ್ರಮೋಷನ್ ಮಾಡಬೇಕಿದೆ.

ಸಡಕ್-2 ಸಿನಿಮಾದ ಪೋಸ್ಟರ್ ಅನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಕಾಮೆಂಟ್ ಅನ್ನು ಹೈಡ್ ಮಾಡಿದ್ದಾರೆ. ಟ್ರೋಲ್ ಮತ್ತು ನೆಟ್ಟಿಗರ ತರಾಟೆಯನ್ನು ತಪ್ಪಿಸಿಕೊಳ್ಳಲು ಅಲಿಯಾ ಹೊಸ ಉಪಾಯ ಕಂಡುಕೊಂಡಿದ್ದಾರೆ. ಆದರೂ ಅಲಿಯಾ ಸಿನಿಮಾ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ. ಸಿನಿಮಾ ಬಾಯ್ ಕಟ್ ಮಾಡುವಂತೆ ಟ್ರೆಂಡ್ ಮಾಡಲಾಗುತ್ತಿದೆ.

Alia Bhatt Turn Off Comments On Twitter Post

ಸದ್ಯ ಅಲಿಯಾ ಸಡಕ್-2 ಸಿನಿಮಾದ ರಿಲೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ, ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗುತ್ತಿದೆ. ಚಿತ್ರಕ್ಕೆ ಅಲಿಯಾ ಭಟ್ ತಂದೆ ಮಹೇಶ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ಸಂಜಯ್ ದತ್, ಅದಿತ್ಯಾ ರಾಯ್ ಕಪೂರ್, ಪೂಜಾ ಭಟ್ ಸೇರಿದ್ದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

More from Filmibeat

English summary
Actress Alia Bhatt turn off comments on twitter post. she shared the poster of Sadak-2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X