Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಭಾಸ್ ಬಗ್ಗೆ ಆಲಿಯಾ ಭಟ್ ಗೆ ಶುರುವಾಗಿದೆ ಕನಸು!
ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸಿನಿಮಾ ನೋಡಿ ದೇಶದ ದೊಡ್ಡ ದೊಡ್ಡ ಸಿನಿಮಾ ತಾರೆಯರೆಲ್ಲಾ ಮೆಚ್ಚಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ನಟಿಸಿರುವ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಗೆ ವಿಶ್ವದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.[90ರ ದಶಕದ ಬ್ಲಾಕ್ ಬಸ್ಟರ್ ಸಿನಿಮಾ ಸೀಕ್ವೆಲ್ ನಲ್ಲಿ ಆಲಿಯಾ ಭಟ್?]
'ಬಾಹುಬಲಿ-2' ಚಿತ್ರ ನೋಡಿ ಬಾಲಿವುಡ್ ನಟಿ ಆಲಿಯಾ ಬಟ್, "ಈ ದೈತ್ಯ ಮಹಾಕಾವ್ಯಕ್ಕೆ ಹೊಸ ಪದವನ್ನು ನೀಡಬೇಕು... ರಾಕ್ ಬಸ್ಟರ್? :)" ಎಂದು ಟ್ವೀಟ್ ಮಾಡಿದ್ದರು. ಚಿತ್ರದ ನಿರ್ದೇಶನಕ್ಕೆ ಎಸ್.ಎಸ್.ರಾಜಮೌಳಿಯನ್ನು ಹೊಗಳಿದ್ದ ಆಲಿಯಾ ಭಟ್, ಈಗ ನಟ ಪ್ರಭಾಸ್ ಕುರಿತಂತೆ ಕುತೂಹಲಕಾರಿ ಮಾಹಿತಿಯೊಂದನ್ನು ಹೇಳಿದ್ದಾರೆ.
'ಡಾರ್ಲಿಂಗ್' ಪ್ರಭಾಸ್ ಬಾಲಿವುಡ್ ಬೆಡಗಿ ಆಲಿಯಾ ಭಟ್ ರವರ ದಕ್ಷಿಣ ಭಾರತದ ಅಚ್ಚುಮೆಚ್ಚಿನ ನಟನಂತೆ. ಅಲ್ಲದೇ ಆಲಿಯಾ ಪ್ರಭಾಸ್ ಅಭಿಮಾನಿಯಂತೆ. 'ಬಾಹುಬಲಿ' ಚಿತ್ರದಲ್ಲಿ ಪ್ರಭಾಸ್ ಅಭಿನಯ ನೋಡಿ ಪ್ರೇರಣೆ ಗೊಂಡಿರುವ ಆಲಿಯಾ ಅವರೊಂದಿಗೆ ನಟಿಸಬೇಕೆಂಬ ಆಸೆಯನ್ನು ಹೊರಹಾಕಿದ್ದಾರೆ. ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರು 'ಪ್ರಭಾಸ್ ಜೊತೆ ನಟಿಸುವ ಆಸೆ ಇದೆಯಾ?' ಎಂಬ ಪ್ರಶ್ನೆಗೆ ಆಲಿಯ ಭಟ್ ರವರು ಪ್ರಭಾಸ್ ಜೊತೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
24 ವರ್ಷದ ಆಲಿಯಾ ಭಟ್ ಪ್ರಸ್ತುತ 'ಡ್ರ್ಯಾಗನ್' ಮತ್ತು 'Gully Boy' ಚಿತ್ರಗಳಲ್ಲಿ ಬಿಜಿ ಆಗಿದ್ದಾರೆ. 'ಡ್ರ್ಯಾಗನ್' ಚಿತ್ರದಲ್ಲಿ ರಣಬೀರ್ ಕಪೂರ್ ಅಭಿನಯಿಸುತ್ತಿದ್ದು ಈ ಚಿತ್ರದ ಬಗ್ಗೆ ಆಲಿಯಾ ಭಟ್ ಹೆಚ್ಚು ಕುತೂಹಲ ಹೊಂದಿದ್ದಾರೆ.