Alia Bhatt Wedding Saree: ಮದುವೆಗೆ 50 ಲಕ್ಷದ ಸೀರೆಯುಟ್ಟ ಆಲಿಯಾ ಭಟ್! ಒಡೆವೆಗಳ ಬೆಲೆ ಗೊತ್ತೆ?

ಬಾಲಿವುಡ್‌ನಲ್ಲಿ ಸದ್ಯ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಮದುವೆಯದ್ದೇ ಸುದ್ದಿ. ಗುಟ್ಟಾಗಿಯೇ ಮದುವೆ ತಯಾರಿ ನಡೆಸಿದ ಈ ಜೋಡಿ ಇದೀಗ ವೈವಾಹಿಕ ಬಾಳಿಗೆ ಕಾಲಿಟ್ಟಿದೆ ಏಪ್ರಿಲ್ 14ರಂದು ಆಲಿಯಾ ಮತ್ತು ರಣ್ಬೀರ್ ಕಪೂರ್ ಮದುವೆ ನೆರವೇರಿದೆ. ಸರಳವಾಗಿ ಮನೆಯಲ್ಲಿಯೇ ಮದುವೆಯಾಗಿದ್ದಾರೆ ಈ ಜೋಡಿ. ಮದುವೆಯಲ್ಲಿ ಆಪ್ತರು ಕುಟುಂಬಸ್ಥರು ಸೇರಿದಂತೆ ಕೆಲವು, ಸೀಮಿತ ವ್ಯಕ್ತಿಗಳಿಗೆ ಮಾತ್ರ ಪ್ರವೇಶವಿತ್ತು.

Recommended Video

ಬಾಲಿವುಡ್ ರೂಲ್ ಮಾಡೋ ಮುನ್ಸೂಚನೆಕೊಟ್ಟ Rashmika Mandanna | Animal | Ranbir Kapoor

ಡೆಸ್ಟಿನೇಶನ್ ವೆಡ್ಡಿಂಗ್ ಅಂತ ಹೋಗದೆ ಮನೆಯಲ್ಲಿ ಮದುವೆ ಮಾಡಿಕೊಂಡು ಮಾದರಿಯಾಗಿದೆ ಈ ಜೋಡಿ. ಮದುವೆ ಎಂದ ಮೇಲೆ ಮದುಮಕ್ಕಳ ಕಾಸ್ಟ್ಯೂಮ್ ಹೆಚ್ಚಾಗಿ ಗಮನ ಸೆಳೆಯುತ್ತದೆ. ಅದರಲ್ಲೂ ಬಾಲಿವುಡ್ ತಾರೆಯರ ಮದುವೆಯೆಂದರೆ ಮುಖ್ಯವಾಗಿ ಅವರು ತೊಡುವ ಕಾಸ್ಟ್ಯೂಮ್ ಹೆಚ್ಚಿನ ಗಮನ ಸೆಳೆಯುತ್ತವೆ. ಸಿನಿಮಾ ತಾರೆಯರ ಮದುವೆಯಲ್ಲಿ ಅವರು ತೊಡುವಂತಹ ಉಡುಗೆಗಳು ಭಿನ್ನ ವಿಭಿನ್ನವಾಗಿರುತ್ತದೆ ಅತ್ಯಂತ ದುಬಾರಿ ಬೆಲೆ ಉಳ್ಳವು ಸಹ ಆಗಿರುತ್ತವೆ.

ಮದುವೆಯಾದ ಬಳಿಕ ಆಲಿಯಾ ಮತ್ತು ರಣಬೀರ್ ಇಬ್ಬರೂ ಕೂಡ ಮನೆಯಿಂದ ಹೊರಬಂದು ಮದುಮಕ್ಕಳಾಗಿ ಕ್ಯಾಮರಾಗೆ ಪೋಸ್ ಕೊಟ್ಟರು. ಇವರ ಮದುವೆಯ ಥೀಮ್ ಕ್ರೀಂ ಬಣ್ಣ, ಅಂದರೆ ಅರೆ ಬಿಳಿ ಬಣ್ಣದಿಂದ ಕೂಡಿತ್ತು. ಹಾಗಾಗಿ ಇಬ್ಬರು ತೊಟ್ಟಿದ್ದ ಉಡುಗೆಗಳು ಕೂಡ ಬಿಳಿಯ ಬಣ್ಣದಿಂದ ಕೂಡಿದ್ದವು. ಅದರಲ್ಲೂ ಆಲಿಯಾ ಭಟ್ ಉಟ್ಟಿದ್ದ ಅರೆ ಬಿಳಿ ಬಣ್ಣದ ಸೀರೆ ಹೆಚ್ಚಾಗಿ ಗಮನ ಸೆಳೆದಿದೆ.

Alia Bhatt Wedding Saree Cost Is 50 Lakhs, know About Jewellery

50 ಲಕ್ಷದ ಸೀರೆಯಲ್ಲಿ ಆಲಿಯಾ ಮಿಂಚು!

ಬಾಲಿವುಡ್‌ನ ಹೆಸರಾಂತ ವಸ್ತ್ರ ವಿನ್ಯಾಸ ಸಂಸ್ಥೆ ಸಬ್ಯಸಾಚಿ ಇಂದ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ವಸ್ತ್ರಗಳನ್ನು ವಿನ್ಯಾಸ ಮಾಡಿಸಲಾಗಿತ್ತು. ಆಲಿಯಾ ಭಟ್ ತೊಟ್ಟಿದ್ದಂತಹ ಕ್ರೀಮ್ ಬಣ್ಣದ ಸೀರೆ ಹಲವು ವಿಶೇಷತೆಗಳಿಂದ ಕೂಡಿದೆ. ಇದು 'ಐವರಿ ಆರ್ಗೆನ್ಸಾ ಎಂಬ್ರಾಯ್ಡರಿ' ಸೀರೆ. ಈ ಆರ್ಗೆನ್ಸಾ ಸೀರಿಗೆ ಗೋಲ್ಡನ್ ಟಿಲ್ಲ ಮತ್ತು ಎಂಬ್ರಾಯ್ಡರಿ ವರ್ಕ್ ಮಾಡಲಾಗಿದೆ. ಈ ಸೀರೆಯ ಬೆಲೆ ಬರೋಬ್ಬರಿ 50 ಲಕ್ಷ. ಸೀರೆಗೆ ಹೊಂದಾಣಿಕೆಯಾಗುವಂತೆ ಸಬ್ಯ ಸಾಚಿ ಹೆರಿಟೇಜ್ ಆಭರಣಗಳನ್ನು ತೊಟ್ಟಿದ್ದರು ಆಲಿಯ ಭಟ್. ಆಲಿಯಾ ಧರಿಸಿದ್ದ ಆಭರಣಗಳ ಬೆಲೆ ಸುಮಾರು 1 ಕೋಟಿಗೂ ಹೆಚ್ಚು ಎನ್ನಲಾಗಿದೆ.

Alia Bhatt Wedding Saree Cost Is 50 Lakhs, know About Jewellery

ರಣ್ಬೀರ್ ಕಪೂರ್ ಕೂಡ ಸಬ್ಯಸಾಚಿ ವಿನ್ಯಾಸ ಮಾಡಿರುವಂತಹ ಶೇರ್ವಾನಿ ಧರಿಸಿದ್ದರು. ಬಿಳಿ ಶೇರ್ವಾನಿ ಅನ್‌ಕಟ್ ಡೈಮಂಡ್ ಬಟನ್‌ಗಳನ್ನು ಹೊಂದಿದ್ದು ವಿಶೇಷವಾಗಿತ್ತು. ಇದರ ಜೊತೆಗೆ ಸಿಲ್ಕ್ ಶಾಲನ್ನು ಧರಿಸಿದ್ದರು.

More from Filmibeat

English summary
Alia Bhatt Wedding Saree Cost Is 50 Lakhs, know About Jewellery
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X