Alia Bhatt Saree: ಆಲಿಯಾ ಭಟ್ ಮದುವೆಗೆ ಸೋನಂ, ಕಂಗನಾ ಸ್ಟೈಲ್ ಕಾಪಿ!

ಬಾಲಿವುಡ್‌ನಲ್ಲಿ ಆಲಿಯಾ ಮತ್ತು ರಣ್ಬೀರ್ ಕಪೂರ್ ಮದುವೆ ನೆರವೇರಿದೆ. ಬಾಲಿವುಡ್ ತಾರೆಯರ ಮದುವೆಯೆಂದರೆ ಮುಖ್ಯವಾಗಿ ಅವರು ತೊಡುವ ಕಾಸ್ಟ್ಯೂಮ್ ಹೆಚ್ಚಿನ ಗಮನ ಸೆಳೆಯುತ್ತವೆ. ಸಿನಿಮಾ ತಾರೆಯರ ಮದುವೆಯಲ್ಲಿ ಅವರು ತೊಡುವಂತಹ ಉಡುಗೆಗಳು ಭಿನ್ನ ವಿಭಿನ್ನವಾಗಿರುತ್ತದೆ ಅತ್ಯಂತ ದುಬಾರಿ ಬೆಲೆಯುಳ್ಳವು ಆಗಿರುತ್ತವೆ.

ಆಲಿಯಾ ಮತ್ತು ರಣ್ಬೀರ್ ಕಪೂರ್ ಮದುವೆಯಲ್ಲೂ ಕೂಡ ಅವರ ಕಾಸ್ಟ್ಯೂಮ್ ಹೆಚ್ಚಿನ ಗಮನ ಸೆಳೆದಿತ್ತು. ಅದರಲ್ಲೂ ನಟಿ ಆಲಿಯಾ ಭಟ್ ತೊಟ್ಟ ಡಿಸೈನರ್ ಸೀರೆ ಹೆಚ್ಚಾಗಿ ಗಮನ ಸೆಳೆದಿದೆ. ಬಾಲಿವುಡ್‌ನ ಹೆಸರಾಂತ ವಸ್ತ್ರ ವಿನ್ಯಾಸಕ ಸಬ್ಯಾಸಾಚಿಯಿಂದ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ವಸ್ತ್ರಗಳನ್ನು ವಿನ್ಯಾಸ ಮಾಡಿಸಲಾಗಿದೆ.

ಆಲಿಯಾ ಭಟ್ ಕೊಟ್ಟಿದ್ದಂತಹ ಕ್ರೀಮ್ ಬಣ್ಣದ ಸೀರೆ ಹಲವು ವಿಶೇಷತೆಗಳಿಂದ ಕೂಡಿದೆ. ಇದು 'ಐವರಿ ಆರ್ಗೆನ್ಸಾ ಎಂಬ್ರಾಯ್ಡರಿ' ಸೀರೆ. ಈ ಆರ್ಗೆನ್ಸಾ ಸೀರಿಗೆ ಗೋಲ್ಡನ್ ಟಿಲ್ಲು ಮತ್ತು ಎಂಬ್ರಾಯ್ಡರಿ ವರ್ಕ್ ಮಾಡಲಾಗಿದೆ. ಈ ಸೀರೆಯ ಬೆಲೆ ಬರೋಬ್ಬರಿ 50 ಲಕ್ಷ. ಇನ್ನು ಸೀರೆಗೆ ಹೊಂದಾಣಿಕೆಯಾಗುವಂತೆ ಸಬ್ಯಾಸಾಚಿ ಹೆರಿಟೇಜ್ ಆಭರಣಗಳನ್ನು ತೊಟ್ಟಿದ್ದರು ಆಲಿಯ ಭಟ್.

Alia Bhatt Wedding Saree Design Copy From Kangana Ranaut And Sonam Kapoor

ಆದರೆ ಇವರ ಮದುವೆಯ ನಂತರ, ಆಲಿಯಾ ಭಟ್ ಸೀರೆ ಬಗ್ಗೆ ಹೆಚ್ಚಿನ ಚರ್ಚೆ ಆಗುತ್ತಾ ಇದೆ. ಆಲಿಯಾ ಭಟ್ ತೊಟ್ಟಿದ್ದ ಇದೆ ರೀತಿಯ ಡಿಸೈನರ್ ಸೀರೆಯನ್ನ, ಈ ಮೊದಲು ಬಾಲಿವುಡ್‌ನ ಇಬ್ಬರು ನಟಿಯರು ತೊಟ್ಟಿದ್ದರು. ಹಾಗಾಗಿ ಈಗ ಆಲಿಯಾ ಸೀರೆ ಡಿಸೈನ್ ಕಾಪಿ ಎನ್ನಲಾಗುತ್ತಿದೆ.

Alia Bhatt Wedding Saree Design Copy From Kangana Ranaut And Sonam Kapoor

ಈ ಹಿಂದೆ ಇದೇ ರೀತಿಯ ಸೀರೆಯನ್ನು ನಟಿ ಸೋನಂ ಕಪೂರ್ ಮತ್ತು ಕಂಗನಾ ತೊಟ್ಟಿದ್ದಾರೆ. ಹಾಗಾಗಿ ಈಗ ಈ ಮೂವರು ನಟಿಯರು ತೊಟ್ಟ ಸೀರೆಗಳ ಬಗ್ಗೆ ಹೋಲಿಕೆ ಮಾಡಲಾಗುತ್ತಿದೆ. ಇನ್ನು ಆಲಿಯಾ ಮತ್ತೇನಾದರೂ ವಿಭಿನ್ನ ರೀತಿಯ ಸೀರೆಯನ್ನು ಟ್ರೈ ಮಾಡಬಹುದಿತ್ತು. ಎನ್ನಲಾಗುತ್ತಿದೆ.

More from Filmibeat

English summary
Alia Bhatt Wedding Saree Design Copy From Kangana Ranaut And Sonam Kapoor Know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X