Alia Bhatt Ranbir Wedding: ಆಲಿಯಾ, ರಣ್ಬೀರ್ ಮದುವೆ ಆಗೇ ಹೋಯ್ತು, ಸಪ್ತಪದಿ ತುಳಿದ ತಾರಾ ಜೋಡಿ!
ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಲವ್, ಡೇಟಿಂಗ್ ಬಗ್ಗೆ ಹಲವು ದಿನಗಳಿಂದ ಸುದ್ದಿ ಇತ್ತು. ಜೊತೆಗೆ ಈ ಜೋಡಿ ಮದುವೆ ಆಗಲು ತಯಾರಿ ನಡೆಸಿದೆ ಎನ್ನುವ ಸುದ್ದಿಯೂ ಹಲವು ದಿನಗಳಿಂದ ಸದ್ದು ಮಾಡುತ್ತಿತ್ತು. ಈಗ ಈ ಎಲ್ಲಾ ಸುದ್ದಿಗಳಿಗೂ ಬ್ರೇಕ್ ಬಿದ್ದಿದೆ. ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Recommended Video

ಹೌದು, ರಣ್ಬೀರ್ ಮತ್ತು ಆಲಿಯಾ ಈಗ ಅಧಿಕೃತವಾಗಿ ಸತಿ, ಪತಿಯಾಗಿದ್ದಾರೆ. ಕುಟುಂಬದ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ರಣ್ಬೀರ್ ಕಪೂರ್ ನಿವಾಸದಲ್ಲಿ ಈ ತಾರಾ ಜೋಡಿ ಮದುವೆ ನೆರವೇರಿದೆ. ಮದುವೆ ಕಾರ್ಯಕ್ರಮದಲ್ಲಿ ದಂಪತಿಗಳ ಆಪ್ತರು ಮತ್ತು ಕುಟುಂಬದವರು ಭಾಗವಹಿಸಿದ್ದರು.
ಗಮನಿಸಬೇಕಾದ ಸಂಗತಿಯೆಂದರೆ, ರಣ್ಬೀರ್ ಮತ್ತು ಆಲಿಯಾ ಮದುವೆಯ ಬಗ್ಗೆ ವರದಿಗಳು ಬಹಳ ಸಮಯದಿಂದ ಹರಿದಾಡುತ್ತಿದ್ದವು. ಆದರೆ ಈ ವಿಚಾರವನ್ನು ಎರಡೂ ಕುಟುಂಬದವರೂ ಗೌಪ್ಯವಾಗಿ ಇಟ್ಟಿದ್ದರು. ಮಾಧ್ಯಮಗಳು ಎಷ್ಟೇ ಸುದ್ದಿ ಮಾಡಿದರು, ಮದುವೆಯ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಈಗ ಅಷ್ಟೇ ಗೌಪ್ಯವಾಗಿ ಮದುವೆ ನಡೆದು ಹೋಗಿದೆ.

ರಣ್ಬೀರ್ ಮತ್ತು ಆಲಿಯಾ ಭಟ್ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ದಂಪತಿಗಳು ಪೀಚ್ ಥೀಮ್‌ನಲ್ಲಿ ಮದುವೆ ವಸ್ತ್ರ ಮತ್ತು ಮನೆಯನ್ನು ಅಲಂಕರಿಸಲಾಗಿತ್ತು ಎಂದು ತಿಳಿದು ಬಂದಿದೆ. ಆಲಿಯಾ ಭಟ್ ಮನೀಶ್ ಮಲ್ಹೋತ್ರಾ ಮತ್ತು ಸಬ್ಯಾಸಾಚಿ ವಿನ್ಯಾಸದ ವಸ್ತ್ರಗಳನ್ನು ಧರಿಸಿದ್ದರು ಎಂದು ವರದಿಯಾಗಿವೆ.

ಈ ವಾರದ ಆರಂಭದಲ್ಲಿ ರಣ್ಬೀರ್ ಮತ್ತು ಆಲಿಯಾ ವಿವಾಹ ಪೂರ್ವದ ಕಾರ್ಯಗಳು ಪ್ರಾರಂಭವಾಗಿದ್ದವು. ಏತನ್ಮಧ್ಯೆ, ಮದುವೆಯ ವಿಚಾರ ಮತ್ತು ವಿವರವನ್ನು ಮುಚ್ಚಿಡಲು ಸಾಕಷ್ಟು ಪ್ರಯತ್ನ ಮಾಡಲಾಗಿತ್ತು.ಇನ್ನು ಮದುವೆ ಮನೆಯಿಂದ ಫೋಟೊಗಳು ಸೋರಿಕೆ ಆಗದಂತೆ ನಿಗಾವಹಿಸಲಾಗಿದ್ದು, ಮತ್ತೊಂದು ವಿಶೇಷ ಸಂಗತಿ ಎಂದರೆ ವಿಕಿಪೀಡಿಯಾದಲ್ಲಿ ಆಲಿಯಾ ಮತ್ತು ರಣ್ಬೀರ್ ಸತಿ, ಪತಿ ಎಂದು ಅದಾಗಲೇ ಅವರ ಹೆಸರುಗಳಲ್ಲಿ ಅಪ್ಡೇಟ್ ಮಾಡಲಾಗಿದೆ.
ಇನ್ನು ಮದುವೆ ಬಿಟ್ಟು, ಇವರ ಸಿನಿಮಾ ಬಗ್ಗೆ ಮಾತನಾಡುವುದಾದರೆ ಅಯಾನ್ ಮುಖರ್ಜಿಯ ಬಹುನಿರೀಕ್ಷಿತ ಫ್ಯಾಂಟಸಿ ಸಿನಿಮಾ' ಬ್ರಹ್ಮಾಸ್ತ್ರ'ದಲ್ಲಿ ಮೊದಲ ಬಾರಿಗೆ ಆಲಿಯಾ ಮತ್ತು ರಣ್ಬೀರ್ ಪರದೆ ಹಂಚಿಕೊಳ್ಳುತ್ತಾ ಇದ್ದಾರೆ. ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ಅಕ್ಕಿನೇನಿ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications










