ಶ್ಯಾಂಪೂ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಆಲಿಯಾ ಭಟ್ ತಲೆಯಲ್ಲಿಯೇ ಕೂದಲಿಲ್ಲ...!

ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು.ಈ ಕಾರಣಕ್ಕೆ ಸಮಾಜಕ್ಕೆ ಉಪಕಾರಿಯಾಗದ ಅನೇಕರು, ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ. ಯಾರಾದರೂ ಹಾಳಾಗಿ ಹೋಗಲಿ ನಾವು ನಮ್ಮ ಮನೆಯವರು ಚೆನ್ನಾಗಿದ್ದರೆ ಸಾಕು ಎಂದು ತಪ್ಪು ಸಂದೇಶವನ್ನ ನೀಡಿ ಕೈ ತೊಳೆದುಕೊಳ್ಳುತ್ತಾರೆ.

ಆದರೆ ಇವರ ಈ ಜಾಹೀರಾತುಗಳಿಂದ ಆಗುವ ಪರಿಣಾಮ ದೊಡ್ಡದು ಮತ್ತು ಗಾಢವಾದದ್ದು. ಯಾಕೆಂದರೆ ಸಿನಿಮಾ ತಾರೆಯರನ್ನ ದೇವರೆಂದು ಪೂಜಿಸುವವರ ಸಂಖ್ಯೆ ನಮ್ಮಲ್ಲಿ ತುಸು ಹೆಚ್ಚೇ ಇದೆ. ಇನ್ನೂ.. ತಮ್ಮ ನೆಚ್ಚಿನ ತಾರೆಯರ ಹಾವ-ಭಾವ ಅವರ ಜೀವನ ಶೈಲಿಯನ್ನ ಅನುಸರಿಸುವವರು ಕೂಡ ಇದ್ದಾರೆ. ಬೆಳ್ಳಗಿರುವುದೆಲ್ಲ ಹಾಲಲ್ಲ ಎನ್ನುವುದನ್ನು ಮರೆತು ತಮ್ಮ ನೆಚ್ಚಿನ ನಾಯಕ-ನಾಯಕಿ ದುಡ್ಡು ಪಡೆದು ಮಾರುವ ಪ್ರಾಡಕ್ಟ್‌ನಿಂದ ಎಲ್ಲ ಸಮಸ್ಯೆ ಮಂಗಮಾಯವಾಗುತ್ತೆ ಎಂದು ತಿಳಿದುಕೊಳ್ಳುತ್ತಾರೆ. ತೆಳ್ಳಗೆ ಬೆಳ್ಳಗೆ ಸುಂದರವಾಗಿ ಕಾಣಲು ನಾನಾ ತರಹದ ಕ್ರೀಮ್‌ಗಳನ್ನು ಹಚ್ಚಿಕೊಳ್ಳುತ್ತಾರೆ. ಎಷ್ಟೇ ದುಡ್ಡು ಖರ್ಚಾದರೂ ಸೋಪು, ಶ್ಯಾಂಪೂ, ಪರ್ಪ್ಯೂಮ್‌ನೆಲ್ಲ ಮನೆಗೆ ತೆಗೆದುಕೊಂಡು ಬರುತ್ತಾರೆ. ಆದರೆ ಹೀಗೆ ತೆಗೆದುಕೊಂಡು ಬಂದ ವಸ್ತುಗಳೆಲ್ಲವೂ ಪರಿಣಾಮಕಾರಿಯಾ ? ತಾರೆಯರು ಹೇಳಿದ್ದಾರೆ ಎಂದ ಮಾತ್ರಕ್ಕೆ ಸೌಂದರ್ಯದ ಸಮಸ್ಯೆ ದೂರವಾಗುತ್ತಾ ? ಈ ತರಹದ ಪ್ರಶ್ನೆಗಳನ್ನು ಆಲಿಯಾ ಭಟ್ ಅವರ ಹೊಸ ವಿಡಿಯೋವೊಂದು ಎಲ್ಲರಲ್ಲಿ ಈಗ ಹುಟ್ಟು ಹಾಕಿದೆ.

Alia Bhatt s Hair Falls at 31 Video Goes Viral as Netizens Compare Celebrities in Ads vs Reality

ಹೌದು, ಅಸಲಿಗೆ ಆಲಿಯಾ ಭಟ್ ಕಳೆದ ಎರಡು ಮೂರು ವರ್ಷಗಳಿಂದ ಶ್ಯಾಂಪೂ ಕಂಪನಿಯ ರಾಯಭಾರಿಯಾಗಿದ್ದಾರೆ. ಆ ಶ್ಯಾಂಪೂದ ಪ್ರಚಾರವನ್ನು ಕೂಡ ಮಾಡಿದ್ದಾರೆ. ತಲೆ ಕೂದಲು ಉದರುವಿಕೆಗೆ ಇದು ಸುಲಭವಾದ ಪರಿಹಾರ ಎಂದು ಕೂಡ ಹೇಳುತ್ತಾ ಬಂದಿದ್ದಾರೆ. ಆದರೆ ದುರಾದೃಷ್ಟ ಇಷ್ಟೆಲ್ಲ ಹೇಳಿದರೂ ಕೂಡ ಆಲಿಯಾ ಭಟ್ ಅವರಿಗೆ ಖುದ್ದು ಕೂದಲು ಉದರುವಿಕೆ ಸಮಸ್ಯೆಯಿಂದ ಪಾರಾಗಲು ಸಾಧ್ಯವಾಗಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಸದ್ಯಕ್ಕೆ ಆಲಿಯಾ ಭಟ್ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಲಿಯಾ ಭಟ್ ಅವರ ರೇಷ್ಮೆಯಂತಹ ಕೂದಲಿನ ರಹಸ್ಯ ಕೂಡ ಬಯಲಾಗಿದೆ. ನೆತ್ತಿಯ ಮೇಲಿನ ಕೂದಲು ಇಲ್ಲದಿರುವುದು ಕಂಡು ಬಂದಿದೆ.

ಹೀಗಾಗಿಯೇ ಅನೇಕರು ಈಗ ಆಲಿಯಾ ಭಟ್ ಅವರನ್ನು ಟ್ರೋಲ್ ಮಾಡಲು ಶುರುಮಾಡಿದ್ದಾರೆ. ನಿಮ್ಮ ಮಾತನ್ನು ನಂಬಿ ನೀವು ಪ್ರಚಾರ ಮಾಡಿದ್ದ ಶ್ಯಾಂಪೂವನ್ನೇ ನಾವು ಉಪಯೋಗಿಸುತ್ತಿದ್ವಿ ಆದರೆ ಈಗ ನೋಡಿದರೆ ನಿಮಗೆ ಬೊಕ್ಕ ತಲೆ ಸಮಸ್ಯೆ ಕಾಡುತ್ತಿದೆ ಎಂದಿದ್ದಾರೆ. ಆತ್ಮಸಾಕ್ಷಿಯನ್ನು ಮಾರಿಕೊಂಡು ಹಣದಾಸೆಗೆ ಸೆಲೆಬ್ರಿಟಿಗಳು ಕಂಡ ಕಂಡಿದ್ದನ್ನೆಲ್ಲ ಪ್ರಚಾರ ಮಾಡುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನೀವು ಪ್ರಚಾರ ಮಾಡುವ ಶ್ಯಾಂಪೂವನ್ನು ಉಪಯೋಗಿಸಿ ಆಗ ನಿಮ್ಮ ಕೂದಲು ಉದರುವಿಕೆ ಸಮಸ್ಯೆ ದೂರವಾಗಬಹುದು ಎಂದು ಕಾಲೆಳೆಯುತ್ತಿದ್ದಾರೆ.

ಇನ್ನು ಇದೇ ಸಮಯದಲ್ಲಿ ಕೆಲವರು ಆಲಿಯಾ ಭಟ್ ಪರ ವಾದವನ್ನು ಮಾಡುತ್ತಿದ್ದಾರೆ. ಹೆರಿಗೆಯ ನಂತರ ಕೂದಲು ಉದುರುವುದು ಸರ್ವೆ ಸಾಮಾನ್ಯವೆನ್ನುತ್ತಿದ್ದಾರೆ.ಗರ್ಭಾವಸ್ಥೆಯಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ನಂತಹ ಹಾರ್ಮೋನುಗಳ ಮಟ್ಟವು ಬದಲಾಗುತ್ತೆ ಇದರಿಮದ ಕೂದಲಿನ ಬೆಳವಣಿಗೆಯ ಚಕ್ರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ ಎನ್ನುತ್ತಿದ್ದಾರೆ. ಸದ್ಯ ಆಲಿಯಾ ಭಟ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

More from Filmibeat

Read more about: alia bhatt viral video bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X