ಆಲಿಯಾ ಭಟ್ ತಾಯಿಯ ಮೇಲೆ ಅತ್ಯಾಚಾರ ಪ್ರಯತ್ನ ಆಗಿತ್ತಂತೆ.!

ದೇಶಾದ್ಯಂತ ಮೀಟೂ ಅಭಿಯಾನ ಸದ್ದು ಮಾಡುತ್ತಿದ್ದು, ಅನೇಕ ಮಹಿಳೆಯರು ತಮ್ಮ ಮೇಲಾದ ದೌರ್ಜನ್ಯ, ಕಿರುಕುಗಳನ್ನ ಬಹಿರಂಗಪಡಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಈಗಾಗಲೇ ಹಲವು ನಟಿಯರು ತಮಗಾದ ಕೆಟ್ಟ ಅನುಭವವನ್ನ ಹೊರಹಾಕಿದ್ದಾರೆ.

ಇದೀಗ, ಆಲಿಯಾ ಭಟ್ ತಾಯಿಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಿದ್ದ ಘಟನೆಯನ್ನ ಹೇಳಿಕೊಂಡಿದ್ದಾರೆ. ಹೌದು, ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ಅವರು ಅಭಿನಯಿಸುತ್ತಿದ್ದ ಸಿನಿಮಾದ ಚಿತ್ರೀಕರಣದ ವೇಳೆ ವ್ಯಕ್ತಿಯೊಬ್ಬ ಅತ್ಯಾಚಾರವೆಸೆಯಲು ಪ್ರಯತ್ನ ಪಟ್ಟಿದ್ದನಂತೆ. ಆತನ ಹೆಸರು ಬಹಿರಂಗಪಡಿಸಲು ಇಷ್ಟಪಡದ ಸೋನಿ ಇಂಗ್ಲೀಷ್ ಪತ್ರಿಕೆಯೊಂದಿಗೆ ಈ ಘಟನೆಯನ್ನ ಹಂಚಿಕೊಂಡಿದ್ದಾರೆ.

ಸಿನಿಮಾ ಇಂಡಸ್ಟ್ರಿಗೆ ಬಂದಾಗ ನನಗೆ ಯಾವುದೇ ರೀತಿ ಕಿರುಕುಳ ಎದುರಾಗಿಲ್ಲ. ಆದ್ರೆ, ಸಿನಿಮಾ ಶೂಟಿಂಗ್ ವೇಳೆ ವ್ಯಕ್ತಿಯೊಬ್ಬ ನನ್ನ ಮೇಲೆ ಬಲತ್ಕಾರಕ್ಕೆ ಪ್ರಯತ್ನ ಪಟ್ಟ. ಆದ್ರೆ, ಅದು ಸಕ್ಸಸ್ ಆಗಲಿಲ್ಲ. ನಾನು ಹೇಗೋ ತಪ್ಪಿಸಿಕೊಂಡೆ. ಆ ಸಮಯದಲ್ಲಿ ನಾನು ಆತನ ಹೆಸರು ಹೇಳಲಿಲ್ಲ. ಯಾಕಂದ್ರೆ, ಆ ವ್ಯಕ್ತಿಗೆ ಮದುವೆ ಆಗಿತ್ತು. ಆತನಿಗೊಂದು ಫ್ಯಾಮಿಲಿ ಇತ್ತು. ಚಿಕ್ಕ ಮಕ್ಕಳಿದ್ದರು. ಆ ಘಟನೆಯನ್ನ ಹೊರಗೆ ಹೇಳಿ ಆತನ ಕುಟುಂಬವನ್ನ ಬೀದಿಗೆ ತರುವುದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಸುಮ್ಮನಾದೆ ಎಂದು ಸೋನಿ ರಜ್ದಾನ್ ತಿಳಿಸಿದ್ದಾರೆ.

Alia Bhatts mother Soni Razdan reveals how somebody had tried to rape her

ಆ ವ್ಯಕ್ತಿ ಯಾಕೆ ಹಾಗೆ ಮಾಡಿದ ಎಂದು ನನಗೆ ಗೊತ್ತಿಲ್ಲ. ಆದ್ರೆ, ಅದನ್ನ ನಾನು ನಿಯಂತ್ರಿಸುವಲ್ಲಿ ಯಶಸ್ಸು ಕಂಡಿದ್ದೆ. ಈಗ ಮೀಟೂ ಅಭಿಯಾನ ನಡೆಯುತ್ತಿರುವುದರಿಂದ ಈ ಘಟನೆ ಹೇಳಿಕೊಂಡಿದ್ದೇನೆ ಎಂದರು.

ಆಲಿಯಾ ಭಟ್ ತಾಯಿ ಸೋನಿ ರಜ್ದಾನ್ ಹಿಂದಿ ಚಿತ್ರರಂಗದ ಹಿರಿಯ ನಟಿ. 1981 ರಿಂದ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದ ಸೋನಿ, ನಿರ್ದೇಶಕ ಮಹೇಶ್ ಭಟ್ ಅವರನ್ನ ಮದುವೆಯಾಗಿದ್ದಾರೆ. ಕೆಲವು ಚಿತ್ರಗಳನ್ನ ಕೂಡ ನಿರ್ದೇಶನ ಮಾಡಿದ್ದಾರೆ.

More from Filmibeat

English summary
In the wake of the MeToo movement, Alia Bhatt's mother Soni Razdan reveals how she escaped getting raped on a film shoot and why she decided to stay mum.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X