twitter
    For Quick Alerts
    ALLOW NOTIFICATIONS  
    For Daily Alerts

    ಆಲಿಯಾ ಭಟ್ ತಾಯಿಯ ಮೇಲೆ ಅತ್ಯಾಚಾರ ಪ್ರಯತ್ನ ಆಗಿತ್ತಂತೆ.!

    |

    ದೇಶಾದ್ಯಂತ ಮೀಟೂ ಅಭಿಯಾನ ಸದ್ದು ಮಾಡುತ್ತಿದ್ದು, ಅನೇಕ ಮಹಿಳೆಯರು ತಮ್ಮ ಮೇಲಾದ ದೌರ್ಜನ್ಯ, ಕಿರುಕುಗಳನ್ನ ಬಹಿರಂಗಪಡಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಈಗಾಗಲೇ ಹಲವು ನಟಿಯರು ತಮಗಾದ ಕೆಟ್ಟ ಅನುಭವವನ್ನ ಹೊರಹಾಕಿದ್ದಾರೆ.

    ಇದೀಗ, ಆಲಿಯಾ ಭಟ್ ತಾಯಿಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಿದ್ದ ಘಟನೆಯನ್ನ ಹೇಳಿಕೊಂಡಿದ್ದಾರೆ. ಹೌದು, ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ಅವರು ಅಭಿನಯಿಸುತ್ತಿದ್ದ ಸಿನಿಮಾದ ಚಿತ್ರೀಕರಣದ ವೇಳೆ ವ್ಯಕ್ತಿಯೊಬ್ಬ ಅತ್ಯಾಚಾರವೆಸೆಯಲು ಪ್ರಯತ್ನ ಪಟ್ಟಿದ್ದನಂತೆ. ಆತನ ಹೆಸರು ಬಹಿರಂಗಪಡಿಸಲು ಇಷ್ಟಪಡದ ಸೋನಿ ಇಂಗ್ಲೀಷ್ ಪತ್ರಿಕೆಯೊಂದಿಗೆ ಈ ಘಟನೆಯನ್ನ ಹಂಚಿಕೊಂಡಿದ್ದಾರೆ.

    ಸಂಜನಾ ವಿಷ್ಯದಲ್ಲಿ ಶ್ರುತಿ ಎಂಟ್ರಿಯಾಗಿದ್ದಕ್ಕೆ 'ಡೆಡ್ಲಿ' ಡೈರೆಕ್ಟರ್ ಫುಲ್ ಗರಂ.! ಸಂಜನಾ ವಿಷ್ಯದಲ್ಲಿ ಶ್ರುತಿ ಎಂಟ್ರಿಯಾಗಿದ್ದಕ್ಕೆ 'ಡೆಡ್ಲಿ' ಡೈರೆಕ್ಟರ್ ಫುಲ್ ಗರಂ.!

    ಸಿನಿಮಾ ಇಂಡಸ್ಟ್ರಿಗೆ ಬಂದಾಗ ನನಗೆ ಯಾವುದೇ ರೀತಿ ಕಿರುಕುಳ ಎದುರಾಗಿಲ್ಲ. ಆದ್ರೆ, ಸಿನಿಮಾ ಶೂಟಿಂಗ್ ವೇಳೆ ವ್ಯಕ್ತಿಯೊಬ್ಬ ನನ್ನ ಮೇಲೆ ಬಲತ್ಕಾರಕ್ಕೆ ಪ್ರಯತ್ನ ಪಟ್ಟ. ಆದ್ರೆ, ಅದು ಸಕ್ಸಸ್ ಆಗಲಿಲ್ಲ. ನಾನು ಹೇಗೋ ತಪ್ಪಿಸಿಕೊಂಡೆ. ಆ ಸಮಯದಲ್ಲಿ ನಾನು ಆತನ ಹೆಸರು ಹೇಳಲಿಲ್ಲ. ಯಾಕಂದ್ರೆ, ಆ ವ್ಯಕ್ತಿಗೆ ಮದುವೆ ಆಗಿತ್ತು. ಆತನಿಗೊಂದು ಫ್ಯಾಮಿಲಿ ಇತ್ತು. ಚಿಕ್ಕ ಮಕ್ಕಳಿದ್ದರು. ಆ ಘಟನೆಯನ್ನ ಹೊರಗೆ ಹೇಳಿ ಆತನ ಕುಟುಂಬವನ್ನ ಬೀದಿಗೆ ತರುವುದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಸುಮ್ಮನಾದೆ ಎಂದು ಸೋನಿ ರಜ್ದಾನ್ ತಿಳಿಸಿದ್ದಾರೆ.

    Alia Bhatts mother Soni Razdan reveals how somebody had tried to rape her

    ಕನಸು ಹೊತ್ತು ಬಂದಿದ್ದ ಯುವತಿಗೆ 'ತಿಥಿ' ಈರೇಗೌಡ ಹೀಗೆಲ್ಲಾ ಕಿರುಕುಳ ಕೊಟ್ರಾ.? ಕನಸು ಹೊತ್ತು ಬಂದಿದ್ದ ಯುವತಿಗೆ 'ತಿಥಿ' ಈರೇಗೌಡ ಹೀಗೆಲ್ಲಾ ಕಿರುಕುಳ ಕೊಟ್ರಾ.?

    ಆ ವ್ಯಕ್ತಿ ಯಾಕೆ ಹಾಗೆ ಮಾಡಿದ ಎಂದು ನನಗೆ ಗೊತ್ತಿಲ್ಲ. ಆದ್ರೆ, ಅದನ್ನ ನಾನು ನಿಯಂತ್ರಿಸುವಲ್ಲಿ ಯಶಸ್ಸು ಕಂಡಿದ್ದೆ. ಈಗ ಮೀಟೂ ಅಭಿಯಾನ ನಡೆಯುತ್ತಿರುವುದರಿಂದ ಈ ಘಟನೆ ಹೇಳಿಕೊಂಡಿದ್ದೇನೆ ಎಂದರು.

    'ಕಾವೇರಿ' ವಿಚಾರದಲ್ಲಿ ಸುದ್ದಿಯಾಗಿದ್ದ ಸಿಂಬು ಮೇಲೆ MeToo ಬಾಂಬ್ ಸಿಡಿಸಿದ ನಟಿ.! 'ಕಾವೇರಿ' ವಿಚಾರದಲ್ಲಿ ಸುದ್ದಿಯಾಗಿದ್ದ ಸಿಂಬು ಮೇಲೆ MeToo ಬಾಂಬ್ ಸಿಡಿಸಿದ ನಟಿ.!

    ಆಲಿಯಾ ಭಟ್ ತಾಯಿ ಸೋನಿ ರಜ್ದಾನ್ ಹಿಂದಿ ಚಿತ್ರರಂಗದ ಹಿರಿಯ ನಟಿ. 1981 ರಿಂದ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದ ಸೋನಿ, ನಿರ್ದೇಶಕ ಮಹೇಶ್ ಭಟ್ ಅವರನ್ನ ಮದುವೆಯಾಗಿದ್ದಾರೆ. ಕೆಲವು ಚಿತ್ರಗಳನ್ನ ಕೂಡ ನಿರ್ದೇಶನ ಮಾಡಿದ್ದಾರೆ.

    English summary
    In the wake of the MeToo movement, Alia Bhatt's mother Soni Razdan reveals how she escaped getting raped on a film shoot and why she decided to stay mum.
    Wednesday, October 24, 2018, 19:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X