ಆಲಿಯಾ ಭಟ್ ಗೆ ಆ ಕಡೆಯೂ ಖುಷಿ, ಈ ಕಡೆಯೂ ಖುಷಿ

By Bharath Kumar

ಬಾಲಿವುಡ್ ನಟಿ ಆಲಿಯಾ ಭಟ್ ಗೆ ಸದ್ಯಕ್ಕೆ ಡಬಲ್ ಧಮಾಕ. ಆ ಕಡೆ ಖಾಸಗಿ ಜೀವನದಲ್ಲೂ ಖುಷಿ, ಈ ಕಡೆ ವೃತ್ತಿ ಜೀವನದಲ್ಲೂ ಖುಷಿ. ಹೌದು, ಬಿಟೌನ್ ನಲ್ಲಿ ಯಶಸ್ವಿಯಾಗಿ ಮುನ್ನಗ್ಗುತ್ತಿರುವ ಆಲಿಯಾ ದಾಂಪತ್ಯ ಜೀವನಕ್ಕೆ ಅಣಿಯಾಗುತ್ತಿದ್ದಾರೆ.

ನಟ ರಣ್ಬೀರ್ ಕಪೂರ್ ಜೊತೆ ಲವ್ವಲ್ಲಿ ಇರುವ ಆಲಿಯಾ ಇನ್ನೆರಡು ವರ್ಷಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗ್ತಿದೆ. ಪದೇ ಪದೇ ರಣ್ಬೀರ್ ಜೊತೆಯಲ್ಲಿ ಪಾರ್ಟಿ, ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಆಲಿಯಾ ತಮ್ಮ ಪ್ರೀತಿಯ ವಿಚಾರವನ್ನ ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ಆದ್ರೆ, ಪರೋಕ್ಷವಾಗಿ ಹಲವು ಬಾರಿ ಸುಳಿವು ನೀಡಿದ್ದಾರೆ.

ಎಲ್ಲ ಅಂದುಕೊಂಡಂತೆ ಆದ್ರೆ, 2020 ರಲ್ಲಿ ಆಲಿಯಾ ಮತ್ತು ರಣ್ಬೀರ್ ಮದುವೆ ನಡೆಯೋದು ನಿಶ್ಚಿಯವಂತೆ.

Alia Bhatts Raazi crossed 200 Crore Worldwide

ಇನ್ನು ಮತ್ತೊಂದೆಡೆ ಆಲಿಯಾ ಭಟ್ ಅಭಿನಯದ 'ರಾಝಿ' ಸಿನಿಮಾ ಗೆಲುವಿನ ಕೇಕೆ ಹಾಕುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ. ವರ್ಲ್ಡ್ ವೈಡ್ ಸುಮಾರು 200 ಕೋಟಿ ಗಳಿಸುವ ಮೂಲಕ 'ರಾಝಿ' ಸಿನಿಮಾ ಹೊಸ ದಾಖಲೆ ಮಾಡಿದೆ.

ಭಾರತದಲ್ಲಿ ಇಲ್ಲಿಯವರೆಗೂ 121 ಕೋಟಿ ಕಲೆಕ್ಷನ್ ಮಾಡಿದೆ. ಈ ವಿಷ್ಯವನ್ನ ಖುದ್ದು ನಿರ್ಮಾಪಕ ಕರಣ್ ಜೋಹರ್ ಅವರೇ ಬಹಿರಂಗಪಡಿಸಿದ್ದಾರೆ.

Alia Bhatts Raazi crossed 200 Crore Worldwide

ಮೇ 11 ರಂದು ಬಿಡುಗಡೆಯಾಗಿದ್ದ 'ರಾಝಿ' ಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆಲಿಯಾ ಭಟ್‌ಗೆ ಜೋಡಿಯಾಗಿ ವಿಕಿ ಕೌಶಾಲ್ ಅಭಿನಯಿಸಿದ್ದಾರೆ. ಭಾರತದ ಗೂಢಚಾರಿಣಿಯಾಗಿ ಪಾಕಿಸ್ತಾನಕ್ಕೆ ಹೋಗುವ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ.

More from Filmibeat

English summary
Alia Bhatt-starrer Raazi has minted over Rs 200 crore worldwide, announced filmmaker Karan Johar, who has co-produced the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X