ನೂರು ಕೋಟಿ ಕ್ಲಬ್ ಸೇರಿದ ಆಲಿಯಾ ಭಟ್ ಸಿನಿಮಾ

By Bharath Kumar

ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ 'ರಾಝಿ' ಚಿತ್ರಕ್ಕೆ ಅದ್ಭುತ ಯಶಸ್ಸು ಸಿಕ್ಕಿದ್ದು, ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಬಿಡುಗಡೆಯಾದ ಮೊದಲ ವಾರದಲ್ಲೇ 50 ಕೋಟಿ ಗಳಿಕೆ ಕಂಡಿದ್ದ 'ರಾಝಿ' ಸಿನಿಮಾ ಈಗ ನೂರು ಕೋಟಿಯ ಕ್ಲಬ್ ಸೇರಿದೆ.

ಹೌದು, ಮೊದಲ ವಾರ 56.5 ಕೋಟಿ, ಎರಡನೇ ವಾರ 35 ಕೋಟಿ, ಮೂರನೇ ವಾರ 10.8 ಕೋಟಿ ಗಳಿಸುವ ಮೂಲಕ ಮೂರು ವಾರದಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿದೆ ದಾಖಲೆ ಬರೆದಿದೆ. ಈ ಅಂಕಿ ಅಂಶಗಳನ್ನ ಬಾಲಿವುಡ್ ನ ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್ ಬಹಿರಂಗಪಡಿಸಿದ್ದಾರೆ.

ಮೇಘನಾ ಗುಲ್ಜಾರ್ 'ರಾಝಿ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆಲಿಯಾ ಭಟ್‌ಗೆ ಜೋಡಿಯಾಗಿ ವಿಕಿ ಕೌಶಾಲ್ ಅಭಿನಯಿಸಿದ್ದಾರೆ. ಭಾರತದ ಗೂಢಚಾರಿಣಿಯಾಗಿ ಪಾಕಿಸ್ತಾನಕ್ಕೆ ಹೋಗುವ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ.

Alia Bhatts Raazi has crossed the 100 crore

1971ರ ಭಾರತ-ಪಾಕ್ ಯುದ್ಧದ ಮಹತ್ವದ ಮಾಹಿತಿ ಕಲೆಹಾಕಲು ಆಲಿಯಾ ಭಟ್‍ ರನ್ನು ಗೂಢಚಾರಿಣಿಯನ್ನಾಗಿ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಯ ವ್ಯಕ್ತಿಯನ್ನ ಮದುವೆ ಆಗುವ ಆಲಿಯಾ, ದೇಶಕ್ಕಾಗಿ ತನ್ನ ಜೀವನನ್ನೇ ಮುಡಿಪಾಗಿಡುತ್ತಾಳೆ. ನಂತರ ಏನಾಗುತ್ತೆ ಎಂಬುದು ಬಹಳ ರೋಚಕವಾಗಿ ಕಥೆ ಮಾಡಲಾಗಿದೆ.

ಇನ್ನು 'ರಾಝಿ' ಚಿತ್ರದಲ್ಲಿ ಆಲಿಯಾ ಭಟ್ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆಯನ್ನ ವ್ಯಕ್ತ ಪಡಿಸುತ್ತಿದ್ದಾರೆ. ಮಹಿಳಾ ಪ್ರೇಕ್ಷಕರಿಗಂತು ರಾಝೀ ಸಿನಿಮಾ ಹಾಟ್ ಫೇವರೆಟ್ ಆಗಿದೆ. ಮೇ 11 ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಇನ್ನು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

More from Filmibeat

English summary
Alia Bhatt's Raazi has crossed the 100 crore-mark at the box office, within just weeks of its release. Trade analyst Taran Adarsh reports that Raazi has earned Rs. 102.50 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X