»   » ರಣವೀರ್-ದೀಪಿಕಾ ನಡುವೆ ಏನಿಲ್ಲ, ಏನೇನಿಲ್ಲ!

ರಣವೀರ್-ದೀಪಿಕಾ ನಡುವೆ ಏನಿಲ್ಲ, ಏನೇನಿಲ್ಲ!

Posted By: ಸೋನು ಗೌಡ
Subscribe to Filmibeat Kannada

ಓ ಮೈ ಗಾಡ್ ಬಿಟೌನ್ ನ ಬ್ಯೂಟಿಫುಲ್ ಕಪಲ್ ರಣವೀರ್ ಸಿಂಗ್ ಹಾಗು ದೀಪಿಕಾ ಪಡುಕೋಣೆ ನಡುವೆ ಏನೋ ಸರಿ ಇಲ್ಲ ಅಂತೆ. ಅವರಿಬ್ಬರ ನಡುವೆ ಏನೋ ಜಗಳ ಆಗಿದೆಯಂತೆ ಹಾಗೆ ಹೀಗೆ ಅಂತ ಇಡೀ ಬಿಟೌನ್ ನಲ್ಲಿ ಸುದ್ದಿಯಾಗಿದೆ.

ರಾಮ್ ಲೀಲಾ ಚಿತ್ರದಲ್ಲಿ ತೆರೆ ಮೇಲೆ ವರ್ಕೌಟ್ ಆದ ಕೆಮಿಸ್ಟ್ರಿ ಡಿಪ್ಪಿ ಹಾಗೂ ರಣವೀರ್ ಅವರ ರಿಯಲ್ ಲೈಫ್ ಸ್ಟೈಲ್ ನಲ್ಲಿ ವರ್ಕ್ ಆಗುತ್ತಿಲ್ಲ ಎಂದು 9ಎಕ್ಸ್ ಇ ಡಾಟ್ ಕಾಮ್ ನ ಮೂಲಗಳು ಮಾಹಿತಿ ನೀಡಿವೆ. ಈಗಾಗಲೇ ಇವರಿಬ್ಬರ ನಡುವೆ ಕೆಲವಾರು ಫೈಟ್ ಸೀನ್ ಗಳು ನಡೆದು ಹೋಗಿವೆಯಂತೆ.[ರಜಿನಿಕಾಂತ್ ಗೆ ಮತ್ತೆ ದೀಪಿಕಾ ಪಡುಕೋಣೆ ನಾಯಕಿ?]

ಕೆಲವು ಬಲ್ಲ ಮೂಲಗಳ ಮಾಹಿತಿ ಪ್ರಕಾರ ರಣವೀರ್ ಅವರಿಗೆ ದೀಪಿಕಾ ಪಡುಕೋಣೆ ಜೊತೆ ಹೆಚ್ಚಿನ ಸಂಬಂಧ ಬೆಳೆಸುವ ಇಚ್ಛೆ ಇತ್ತು ಆದರೆ ಡಿಪ್ಪಿ ಇಂತಹ ಕಮಿಟ್ ಮೆಂಟ್ಸ್ ಗಳನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲವಂತೆ.

ಜೊತೆಗೆ 'ಬಾಜಿರಾವ್ ಮಸ್ತಾನಿ' ಚಿತ್ರದ ಶೂಟಿಂಗ್ ಬಿಟ್ಟು ದೀಪಿಕಾ ಪಡುಕೋಣೆ ಅವರು ರಣಬೀರ್ ಕಪೂರ್ ಅವರ ಜೊತೆ 'ತಮಾಶ' ಚಿತ್ರದ ಶೂಟಿಂಗ್ ಗೆ ತೆರಳಿದರಂತೆ. ಜೊತೆಗೆ ಇವರಿಬ್ಬರೂ ಮಾಜಿ ಪ್ರೇಮಿಗಳಾಗಿರುವುದರಿಂದ ಕೆಲ ದಿನಗಳ ಹಿಂದೆ 'ತಮಾಶ' ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ಬಹಳ ಎಮೋಷನಲ್ ಆಗಿದ್ರಂತೆ. ['ಬಾಜಿರಾವ್ ಮಸ್ತಾನಿ' ಟ್ರೈಲರ್: 10 ಕಣ್ಸೆಳೆಯುವ ಅಂಶಗಳು]

ಆದರೆ ರಣವೀರ್ ಸಿಂಗ್ ಹಾಗು ದೀಪಿಕಾ ಜಗಳಕ್ಕೆ ಇದು ಕಾರಣವಾಗಿರಲಾರದು ಅನ್ನೋದು ನಮ್ಮ ಅನಿಸಿಕೆ, ಮುಂದೆ ಓದಿ...

ರಣವೀರ್ ಸಿಂಗ್-ದೀಪಿಕಾ ಪಡುಕೋಣೆ

ದೀಪಿಕಾ-ರಣವೀರ್ ಸಿಂಗ್ ಹ್ಯಾಪಿ ಟೈಮಲ್ಲಿ ಕ್ಲಿಕ್ಕಿಸಿಕೊಂಡ ಫೊಟೋ

ರಣವೀರ್ ಸಿಂಗ್-ಡಿಪ್ಪಿ-ಕಪಿಲ್

ಕಾಮಿಡಿ ನೈಟ್ಸ್ ವಿತ್ ಕಪಿಲ್ ರಿಯಾಲಿಟಿ ಶೋನಲ್ಲಿ ರಣವೀರ್ ಸಿಂಗ್. ದೀಪಿಕಾ ಪಡುಕೋಣೆ, ಕಪಿಲ್ ಶರ್ಮಾ ಅವರ ಸಖತ್ ಫೋಸ್

ಡಿಪ್ಸ್ ಜೊತೆ ರಣವೀರ್ ಕ್ಯೂಟ್ ನಗು

ರಣವೀರ್ ಸಿಂಗ್ ಜೊತೆ ದೀಪಿಕಾ ಅವರ ಕ್ಯೂಟ್ ಫೊಟೋ ಶೂಟ್

ಚಿತ್ರದ ಪ್ರೋಮೋಷನ್

ದೀಪಿಕಾ, ರಣವೀರ್ ಸಿಂಗ್ ಅವರು ಚಿತ್ರ ಒಂದರ ಪ್ರೋಮೊಷನ್ ಕಾರ್ಯಕ್ರಮದಲ್ಲಿ ಮಾಧ್ಯಮದ ಕ್ಯಾಮರಾ ಕಣ್ಣಲ್ಲಿ

ಪ್ರೆಸ್ ಮೀಟ್ ವಿತ್ ಡಿಪ್ಪಿ-ರಣವೀರ್

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಪ್ರೆಸ್ ಮೀಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭ

ರೇರ್ ಫೊಟೋಗ್ರಾಫಿ

ಸಂತಸದ ಕ್ಷಣಗಳಲ್ಲಿ ರಣವೀರ್ ಸಿಂಗ್ ಅವರು ದೀಪಿಕಾ ಪಡುಕೋಣೆ ಅವರನ್ನ ಬಿಗಿದಪ್ಪಿದ ಸಂದರ್ಭ

ರೇಡಿಯೋ ಕಾರ್ಯಕ್ರಮವೊಂದರಲ್ಲಿ

ತಮ್ಮಿಬ್ಬರ ಅಭಿನಯದ ಸಿನಿಮಾದ ಪ್ರೊಮೋಷನ್ ಗೆ ರೇಡಿಯೋ ಮಿರ್ಚಿ ಗೆ ಆಗಮಿಸಿದ್ದ ಸಂದರ್ಭದಲ್ಲಿ ಡಿಪ್ಪಿ-ರಣವೀರ್ ಭಾವ ಭಂಗಿ

ಚಿತ್ರದ ಸ್ಕ್ರೀನಿಂಗ್ ಸಂದರ್ಭದಲ್ಲಿ

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ಸಿನಿಮಾದ ಸ್ಕ್ರೀನಿಂಗ್ ಸಂದರ್ಭದಲ್ಲಿ ಕಂಡುಬಂದಿದ್ದು ಹೀಗೆ.

ಡಿಪ್ಪಿಗೆ ರಣವೀರ್ ಸಿಹಿಮುತ್ತು

ಸಾರ್ವಜನಿಕ ಸ್ಥಳದಲ್ಲಿ ಡಿಪ್ಪಿಗೆ ಸಿಹಿಮುತ್ತು ನೀಡಿ ಸಂಭ್ರಮಿಸಿದ ರಣವೀರ್ ಸಿಂಗ್

English summary
According to recent rumours all is not well between Bollywood's most loved couple Ranveer Singh and Deepika Padukone. Reportedly, the two are having several fights over petty issues.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada