ಬಾಲಿವುಡ್ ಭರ್ಜರಿ ಆಫರ್ ತಿರಸ್ಕರಿಸಿದ ಅಲ್ಲು ಅರ್ಜುನ್ ತಂದೆ
ಅಲ್ಲು ಅರ್ಜುನ್ ಮತ್ತು ಪೂಜಾ ಹೆಗಡೆ ನಟಿಸಿರುವ ಅಲಾ ವೈಕುಂಠಪುರಂಲೋ ಚಿತ್ರ ಸೌತ್ ಇಂಡಸ್ಟ್ರಿಯಲ್ಲಿ ಆಲ್ ಟೈಂ ಹಿಟ್ ಚಿತ್ರದ ಪಟ್ಟಿ ಸೇರಿದೆ. ಇನ್ನು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದ್ದು ನಿರ್ಮಾಪಕ ಅಲ್ಲು ಅರವಿಂದ್ ಸಂತಸದಲ್ಲಿದ್ದಾರೆ.
ಸೌತ್ನಲ್ಲಿ ಸೂಪರ್ ಹಿಟ್ ಆದ ಅಲಾ ವೈಕುಂಠಪುರಂಲೋ ಚಿತ್ರದ ರೀಮೇಕ್ ಗಾಗಿ ಬಾಲಿವುಡ್ ನಿಂದ ಅಫರ್ ಬಂದಿದೆ. ದೊಡ್ಡ ಬೆಲೆಗೆ ರೀಮೇಕ್ ಹಕ್ಕು ಖರೀದಿಸಲು ಖ್ಯಾತ ಸಿನಿಮಾ ಸಂಸ್ಥೆಯೊಂದು ಮುಂದಾಗಿದೆಯಂತೆ.
ಅರ್ಜುನ್ ರೆಡ್ಡಿ ಚಿತ್ರದ ರೀಮೇಕ್ ಹಕ್ಕು ಖರೀದಿಸಿದ್ದ ಸಂಸ್ಥೆಯೇ ಅಲಾ ವೈಕುಂಠಪುರಂಲೋ ಚಿತ್ರದ ರೀಮೇಕ್ ಹಕ್ಕಿಗಾಗಿ ಬೇಡಿಕೆಯಿಟ್ಟಿದೆ. ಮೂಲಗಳ ಪ್ರಕಾರ, ಸುಮಾರು 8 ಕೋಟಿ ನೀಡಲು ಮುಂದಾಗಿದೆ ಎನ್ನಲಾಗಿದೆ.

ಆದರೆ, 8 ಕೋಟಿ ಆಫರ್ ಬೇಡ ಎಂದು ನಿರಾಕರಿಸಿದ್ದಾರಂತೆ ನಿರ್ಮಾಪಕ ಅಲ್ಲು ಅರವಿಂದ್. ಹೌದು, ರಾಧಾಕೃಷ್ಣ ಅವರೊಂದಿಗೆ ಅಲ್ಲು ಅರವಿಂದ್ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದು, ಹಿಂದಿಗೆ ರೀಮೇಕ್ ಹಕ್ಕು ಮಾರಾಟ ಮಾಡಲು ಒಪ್ಪಲಿಲ್ಲ.
ಟಾಲಿವುಡ್ ಟಾಕ್ ಪ್ರಕಾರ, ಸ್ವತಃ ಅಲ್ಲು ಅರವಿಂದ್ ಅವರೇ ಈ ಚಿತ್ರವನ್ನು ಹಿಂದಿಯಲ್ಲಿ ನಿರ್ಮಿಸಲು ಪ್ಲಾನ್ ಮಾಡಿದ್ದಾರಂತೆ. ಸದ್ಯ ತೆಲುಗಿನ ಜೆರ್ಸಿ ಚಿತ್ರವನ್ನು ಹಿಂದಿಯಲ್ಲಿ ಅಲ್ಲು ಅರವಿಂದ್ ನಿರ್ಮಸುತ್ತಿದ್ದಾರೆ. ಇದಾದ ಬಳಿಕ ಅಲಾ ವೈಕುಂಠಪುರಂಲೋ ಚಿತ್ರವನ್ನು ತಾವೇ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರಂತೆ.
ಇನ್ನು ತ್ರಿವಿಕ್ರಮ್ ಶ್ರೀನಿವಾಸ್ ಈ ಚಿತ್ರ ನಿರ್ದೇಶಿಸಿದ್ದು, ಅಲ್ಲು ಅರ್ಜುನ್, ಪೂಜಾ ಹೆಗಡೆ, ಟಬು, ಜಯರಾಂ, ನವದೀಪ್, ಸುಶಾಂತ್, ಸಮುದ್ರಕಣಿ, ಮುರಳಿ ಶರ್ಮಾ ಸೇರಿದಂತೆ ಹಲವರು ನಟಿಸಿದ್ದಾರೆ.


Click it and Unblock the Notifications











