ಬಾಲಿವುಡ್ ಗೆ ರಿಮೇಕ್ ಆಗ್ತಿದೆ 'ಅಲಾ ವೈಕುಂಠಪುರಂಲೋ': ಅಲ್ಲು ಪಾತ್ರದಲ್ಲಿ ಸ್ಟಾರ್ ನಟ
ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅಭಿನಯದ "ಅಲಾ ವೈಕುಂಠಪುರಂಲೋ" ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಅಲ್ಲದೆ ಬಾಕ್ಸ್ ಆಫೀಸ್ ನಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡಿದೆ. ದೇಶ ವಿದೇಶದಲ್ಲಿ ಸದ್ದು ಮಾಡಿದ್ದ ಅಲಾ ವಕುಂಠಪುರಂಲೋ ಈ ವರ್ಷದ ತೆಲುಗು ಚಿತ್ರರಂಗದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ.
ಕೊರೊನಾ ಲಾಕ್ ಡೌನ್ ಆಗುವವರೆಗೂ ಅಲಾ ವೈಕುಂಠಪುರಂಲೋ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿತ್ತು. ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾ ಈಗ ಬಾಲಿವುಡ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ. ಟಾಲಿವುಡ್ ವುಡ್ ನಲ್ಲಿ ಸಕ್ಸಸ್ ಕಂಡ ಸಿನಿಮಾದ ಬಾಲಿವುಡ್ ನಲ್ಲಿ ರಿಮೇಕ್ ಆಗುತ್ತಿದ್ದು, ನಾಯಕ ಸಹ ಫಿಕ್ಸ್ ಆಗಿದ್ದಾರೆ. ಮುಂದೆ ಓದಿ..

2020 ಜನವರಿಯಲ್ಲಿ ರಿಲೀಸ್ ಆದ ಸಿನಿಮಾ
ಅಲಾ ವೈಕುಂಠಪುರಂಲೋ ಈ ಪ್ರಾರಂಭದಲ್ಲಿ ತೆರೆಗೆ ಬಂದ ಸಿನಿಮಾ. ತೆಲುಗಿನ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಸಾರಥ್ಯದಲ್ಲಿ ಮೂಡಿಬಂದ ಅಲಾ ವೈಕುಂಠಪುರಂಲೋ ಚಿತ್ರದಲ್ಲಿ ಅಲ್ಲುಗೆ ನಾಯಕಿಯಾಗಿ ಪೂಜಾ ಹೆಗಡೆ ಕಾಣಿಸಿಕೊಂಡಿದ್ದರು. ಅಲ್ಲು ಅರ್ಜುನ್ ಮತ್ತು ಪೂಜಾ ಕಾಂಬಿನೇಷನ್ ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಜೊತೆಗೆ ಚಿತ್ರದ ಹಾಡುಗಳು ಸಹ ಪ್ರೇಕ್ಷಕರ ಮನಗೆದ್ದಿವೆ.

ತಮಿಳುಗೂ ರಿಮೇಕ್ ಆಗುತ್ತಿದೆ ಸಿನಿಮಾ
ಅಲಾ ವೈಕುಂಠಪುರಂಲೋ ಸಿನಿಮಾ ತಮಿಳಿಗೂ ರಿಮೇಕ್ ಆಗುತ್ತಿದೆ. ತಮಿಳು ರಿಮೇಕ್ ನಲ್ಲಿ ನಟ ಶಿವಕಾರ್ತಿಕೇಯನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಚಿತ್ರದ ರಿಮೇಕ್ ರೈಟ್ಸ್ ಅನ್ನು ಅವರೆ ಕೊಂಡುಕೊಂಡಿದ್ದಾರಂತೆ. ಆದರೆ ಈ ಬಗ್ಗೆ ಶಿವಕಾರ್ತಿಕೇಯನ್ ಆಗಲಿ ಅಥವಾ ತೆಲುಗು ಸಿನಿಮಾತಂಡವಾಗಲಿ ಅಧಿಕೃತವಾಗಿ ಎಲ್ಲಿಯೂ ಬಹಿರಂಗಪಡಿಸಿಲ್ಲ.

ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ ಸಿನಿಮಾ
ದಕ್ಷಿಣ ಭಾರತೀಯ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳು ಬಾಲಿವುಡ್ ಗೆ ರಿಮೇಕ್ ಆಗುತ್ತಿವೆ. ಸದ್ಯ ಅಲ್ಲ ಅರ್ಜುನ್ ಅಭಿನಯದ ಅಲಾ ವೈಕುಂಠಪುರಂಲೋ ಸಿನಿಮಾ ಸಹ ರಿಮೇಕ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ನಿರ್ಮಾಪಕ ರಾಧ ಕೃಷ್ಣ ಮತ್ತು ಅಲ್ಲು ಅರ್ಜುನ್ ಇಬ್ಬರು ಬಾಲಿವುಡ್ ನಲ್ಲಿ ರಿಮೇಕ್ ಮಾಡುವ ತಯಾರಿ ನಡೆಸುತ್ತಿದ್ದು ಈಗಾಗಲೆ ಮಾತುಕತೆ ಕೂಡ ಮಾಡಿದ್ದಾರಂತೆ.

ಅಲ್ಲು ಪಾತ್ರದಲ್ಲಿ ಕಾರ್ತಿಕ್ ಆರ್ಯನ್
ಅಲ್ಲು ಅರ್ಜುನ್ ಪಾತ್ರದಲ್ಲಿ ನಟ ಕಾರ್ತಿಕ್ ಆರ್ಯನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೆ ಅಲ್ಲು ಅರ್ಜುನ್ ಮತ್ತು ರಾಧ ಕೃಷ್ಣ ಇಬ್ಬರು ಕಾರ್ತಿಕ್ ಆರ್ಯನ್ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿ ಚಿತ್ರದ ಕಥೆಯ ಬಗ್ಗೆ ಮಾತನಾಡಿದ್ದಾರಂತೆ. ಅಲ್ಲದೆ ಕಾರ್ತಿಕ್ ಕೂಡ ಸಿನಿಮಾ ಮಾಡಲು ಉತ್ಸುಕರಾಗಿದ್ದಾರಂತೆ.

ರೋಹಿತ್ ಧವನ್ ನಿರ್ದೇಶಕ
ಹಿಂದಿಯ ಅಲಾ ವೈಕುಂಠಪುರಂಲೋ ಸಿನಿಮಾಗೆ ರೋಹಿತ್ ಧವನ್ ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ. ಆದರೆ ರೋಹಿತ್ ಸಹೋದರ ವರುಣ್ ಧವನ್ ಅವರನ್ನು ನಾಯಕನನ್ನಾಗಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ರಾಧಕೃಷ್ಣ ಮತ್ತು ಅಲ್ಲುಗೆ ಕಾರ್ತಿಕ್ ನಾಯಕನಾಗಬೇನ್ನುವ ಆಸೆ. ಹಾಗಾಗಿ ಸಿನಿಮಾ ಯಾರ ಪಾಲಾಗುತ್ತೆ ಎನ್ನುವುದು ಕುತೂಹಲ ಮೂಡಿಸಿದೆ.


Click it and Unblock the Notifications











