For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಜೊತೆಗೆ ವೇದಿಕೆ ಹಂಚಿಕೊಳ್ಳಲಿರುವ ಅಲ್ಲು ಅರ್ಜುನ್!

  |

  ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಬಾಲಿವುಡ್ ಟಾಪ್ ನಟ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಸದ್ಯದಲ್ಲಿಯೇ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳಿದೆ. ಈ ಸುದ್ದಿ ಕುತೂಹಲಕ್ಕೆ ಕಾರಣ ಆಗಿದೆ.

  ಬಾಲಿವುಡ್‌ ನಟ ಸಲ್ಮಾನ್‌ ಖಾನ್ ಮತ್ತು ಅಲ್ಲು ಅರ್ಜುನ್‌ ನಡುವೆ ಉತ್ತಮ ಬಾಂಧವ್ಯ ಇದೆ. ಅಲ್ಲು ಅರ್ಜುನ್ ಚಿತ್ರದ ದುವ್ವಾಡ ಜಗನ್ನಾಥಂ ಚಿತ್ರದಲ್ಲಿನ ಸೀಟಿ ಮಾರ್‌ ಹಾಡಿನ ಟ್ಯೂನ್ ಬಳಸಿ ಸಲ್ಲು ಚಿತ್ರಕ್ಕಾಗಿಸ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಬಳಸಿದ್ದರು.

  ಈಗ ಸಲ್ಲು ಮತ್ತು ಅಲ್ಲು ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ಕುತೂಹಲಕ್ಕೆ ಕಾರಣ ಆಗಿದೆ. ಅಷ್ಟಕ್ಕೂ ಈ ಜೋಡಿಯನ್ನು ಒಂದು ಮಾಡುತ್ತಾ ಇರುವುದು 'ಪುಷ್ಪ' ಚಿತ್ರ. ಹೌದು ಪುಷ್ಪ ಚಿತ್ರ ಪ್ಯಾನ್ ಇಂಡಿಯ ಸಿನಿಮಾ. ಬಹು ಭಾಷೆಗಳಲ್ಲಿ 'ಪುಷ್ಪ' ತೆರೆಗೆ ಬರುತ್ತಿದೆ. ಹಾಗಾಗಿ ಪುಷ್ಪ ಸಿನಿಮಾದ ಮೂಲಕ ಅಲ್ಲು ಅರ್ಜುನ್ ಬಾಲಿವುಡ್‌ಗೂ ಎಂಟ್ರಿ ಕೊಡ್ತಿದ್ದಾರೆ.

  ಸುಕುಮಾರ್ ನಿರ್ದೇಶನದ 'ಪುಷ್ಪ: ದಿ ರೈಸ್' ಎರಡು ಭಾಗಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಮೊದಲ ಭಾಗವಾದ 'ಪುಷ್ಪ: ದಿ ರೈಸ್' ಇದೇ ವರ್ಷ ಡಿಸೆಂಬರ್ 17 ರಂದು ಬಿಡುಗಡೆಯಾಗಲಿದೆ. 'ಪುಷ್ಪಾ: ದಿ ರೈಸ್' ಚಿತ್ರವನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡಲು ಚಿತ್ರ ತಂಡ ಸಜ್ಜಾಗುತ್ತಿದೆ.

  Allu Arjun to share stage with Salman Khan

  ಹಾಗಾಗಿ ಸದ್ಯ ಬಾಲಿವುಡ್‌ನಲ್ಲಿ ಪುಷ್ಪ ಸಿನಿಮಾದ ಪ್ರಚಾರ ಮಾಡಲು ಚಿತ್ರ ತಂಡ ಸಜ್ಜಾಗಿದೆ. ಇದೇ ಕಾರಣಕ್ಕೆ ನಟ ಅಲ್ಲು ಅರ್ಜುನ್ ಸಲ್ಮಾನ್ ಖಾನ್ ಜೊತೆಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

  ಹಿಂದಿ ಬಿಗ್‌ ಬಾಸ್‌ ಮನೆಗೆ ಅಲ್ಲು ಅರ್ಜುನ್ ಎಂಟ್ರಿ ಕೊಡ್ತಿದ್ದಾರೆ. ಬಿಗ್ ಬಾಸ್ ಮನೆಗೆಯಲ್ಲಿ ಪುಷ್ಪ ಸಿನಿಮಾದ ಪ್ರಚಾರವನ್ನು ಮಾಡಲಿದ್ದಾರೆ. ಸಲ್ಮಾನ್ ಖಾನ್ ಬಿಗ್ ಬಾಸ್‌ ಶೋ ನಿರೂಪಣೆ ಮಾಡುತ್ತಲಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್‌ ಕೂಡ ಅಪ್ಪು ಅರ್ಜುನ್ ಜೊತೆಗೆ ಪುಷ್ಪ ಸಿನಿಮಾದ ಬಗ್ಗೆ ಮಾತನಾಡಲಿದ್ದಾರೆ. ಈ ಇಬ್ಬರು ಸ್ಟಾರ್‌ಗಳು ಬಿಗ್‌ಬಾಸ್‌ ವೇದಿಯಲ್ಲಿ ಒಂದಾಗುತ್ತಿದ್ದಾರೆ.

  ಪುಷ್ಪ ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಎಂಟರ್‌ಟೈನರ್ ಆಗಿದ್ದು, ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್‌ನ ಈ ಚಿತ್ರವನ್ನು ತೆರೆ ಮೇಲೆ ನೋಡು ಸಿನಿಪ್ರಿಯರು ಕಾಯುತ್ತಿದ್ದಾರೆ.

  English summary
  Allu Arjun to share stage with Salman Khan, know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X