ಅಲ್ಲು ಅರ್ಜುನ್ ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸುತ್ತಿರುವ ಸ್ವಂತ ಅಪ್ಪ!

'ಪುಷ್ಪ' ಸಿನಿಮಾ ಮೂಲಕ ಅಲ್ಲು ಅರ್ಜುನ್ ಒಮ್ಮೆಲೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಅದರಲ್ಲಿಯೂ ಹಿಂದಿ ಭಾಷಿಕ ರಾಜ್ಯಗಳಲ್ಲಿ ಅಲ್ಲು ಅರ್ಜುನ್‌ ಸಿನಿಮಾಕ್ಕೆ ದೊಡ್ಡ ಮಾರುಕಟ್ಟೆ ಕುದುರಿದೆ.

ಈ ಹಿಂದೆಯೂ ಅಲ್ಲು ಅರ್ಜುನ್ ನಟನೆಯ ಸಿನಿಮಾಗಳು ಹಿಂದಿ ಭಾಷೆಗೆ ಡಬ್ ಆಗಿ ಬಿಡುಗಡೆ ಆಗುತ್ತಿದ್ದವು. ಆದರೆ ಅವು ಹೆಚ್ಚು ಜನಪ್ರಿಯತೆ ಪಡೆದಿರಲಿಲ್ಲ. ಅಲ್ಲು ಅರ್ಜುನ್‌ರ ಈ ಹಿಂದಿನ ಸಿನಿಮಾಗಳ ಹಿಂದಿ ಡಬ್‌ ಕೇವಲ ಟಿವಿಗಳಲ್ಲಿ ಅಥವಾ ಯೂಟ್ಯೂಬ್‌ನಲ್ಲಿ ಮಾತ್ರವೇ ಬಿಡುಗಡೆ ಆಗುತ್ತಿತ್ತು.

ಆದರೆ 'ಪುಷ್ಪ' ಸಿನಿಮಾದ ಹಿಂದಿ ಅವತರಣಿಕೆ ದೊಡ್ಡ ಹಿಟ್ ಆಗಿದ್ದು, ಆ ಮೂಲಕ ಅಲ್ಲು ಅರ್ಜುನ್‌ ನಟನೆಯ ಈ ಹಿಂದಿನ ಸಿನಿಮಾಗಳಿಗೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಈ ಬೇಡಿಕೆಯನ್ನು ಲಾಭವನ್ನಾಗಿ ಪರಿವರ್ತಿಸಿಕೊಳ್ಳಲು ನಿರ್ಮಾಪಕರು ಮುಂದಾಗಿದ್ದು, ಅಲ್ಲು ಅರ್ಜುನ್ ನಟನೆಯ ಈ ಹಿಂದಿನ ಹಿಟ್ ಸಿನಿಮಾ 'ಅಲಾ ವೈಕುಂಟಪುರಂಲೋ' ಸಿನಿಮಾವನ್ನು ಹಿಂದಿಗೆ ಡಬ್ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧಮಾಡಿದ್ದಾರೆ. ಆದರೆ ಆ ಸಿನಿಮಾ ಬಿಡುಗಡೆ ಆಗದಂತೆ ಸ್ವತಃ ಅಲ್ಲು ಅರ್ಜುನ್‌ರ ತಂದೆ ಅಲ್ಲು ಅರವಿಂದ್ ಅಡ್ಡಗಾಲು ಹಾಕುತ್ತಿದ್ದಾರೆ.

ಜನವರಿ 26ಕ್ಕೆ ಬಿಡುಗಡೆ ಆಗಲಿದೆ

ಜನವರಿ 26ಕ್ಕೆ ಬಿಡುಗಡೆ ಆಗಲಿದೆ

'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ಡಬ್ ಅನ್ನು ಜನವರಿ 26 ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಆ ಸಿನಿಮಾದ ಡಬ್ಬಿಂಗ್ ಹಕ್ಕು ಖರೀದಿ ಮಾಡಿರುವವರು ಸಿದ್ಧತೆ ನಡೆಸಿದೆ. ಆದರೆ ಇದಕ್ಕೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ, 'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ರೀಮೇಕ್‌ಗೆ ಅಲ್ಲು ಅರವಿಂದ್ ಬಂಡವಾಳ ಹೂಡಿದ್ದಾರೆ. ಒಂದೊಮ್ಮೆ 'ಅಲಾ ವೈಕುಂಟಪುರಂಲೋ' ಸಿನಿಮಾ ಹಿಂದಿಯಲ್ಲಿ ಬಿಡುಗಡೆ ಆದರೆ ತಮ್ಮ ಸಿನಿಮಾಕ್ಕೆ ಹೊಡೆತ ಬೀಳುತ್ತದೆ ಎಂಬುದು ಅವರ ಆತಂಕ.

ರೀಮೇಕ್ ಸಿನಿಮಾ ಚಿತ್ರೀಕರಣ ಅಂತಿಮ ಹಂತದಲ್ಲಿ

ರೀಮೇಕ್ ಸಿನಿಮಾ ಚಿತ್ರೀಕರಣ ಅಂತಿಮ ಹಂತದಲ್ಲಿ

'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ರೀಮೇಕ್‌ನ ಚಿತ್ರೀಕರಣ ಈಗಾಗಲೇ ಕೊನೆಯ ಹಂತದಲ್ಲಿದೆ. ತೆಲುಗು ಸಿನಿಮಾದಲ್ಲಿ ಅಲ್ಲು ಅರ್ಜುನ್ ನಿರ್ವಹಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ನಿರ್ವಹಿಸುತ್ತಿದ್ದಾರೆ. ಪೂಜಾ ಹೆಗ್ಡೆ ಪಾತ್ರವನ್ನು ಕೃತಿ ಸೆನನ್ ನಿರ್ವಹಿಸುತ್ತಿದ್ದಾರೆ. ಸಿನಿಮಾಕ್ಕೆ 'ಶೆಹಜಾದಾ' ಎಂದು ಹೆಸರಿಟ್ಟಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಆದರೆ ಒಂದೊಮ್ಮೆ 'ಅಲಾ ವೈಕುಂಟಪುರಂಲೋ' ಸಿನಿಮಾ ಹಿಂದಿಯಲ್ಲಿ ಬಿಡುಗಡೆ ಆದರೆ, 'ಶೆಹ್ಜಾದೆ' ಸಿನಿಮಾಕ್ಕೆ ದೊಡ್ಡ ಪೆಟ್ಟು ಬೀಳಲಿದೆ.

'ಅಲಾ ವೈಕುಂಟಪುರಂಲೋ' ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್

'ಅಲಾ ವೈಕುಂಟಪುರಂಲೋ' ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್

'ಅಲಾ ವೈಕುಂಟಪುರಂಲೋ' ಸಿನಿಮಾದ ನಿರ್ಮಾಣವನ್ನು ಅಲ್ಲು ಅರವಿಂದ್ ಅವರೇ ಮಾಡಿದ್ದರು. ಆಗ ಅಲ್ಲು ಅರ್ಜುನ್‌ರ ಹಿಂದಿ ಮಾರುಕಟ್ಟೆ ಈಗಿನಷ್ಟು ಗಟ್ಟಿ ಇರದಿದ್ದ ಕಾರಣಕ್ಕೆ ಹಿಂದಿ ಡಬ್ಬಿಂಗ್ ಹಕ್ಕನ್ನು ಬಹಳ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿತ್ತು. ಡಬ್ಬಿಂಗ್ ಹಕ್ಕು ಪಡೆದವರು, ಟಿವಿ ಹಾಗೂ ಯೂಟ್ಯೂಬ್‌ನಲ್ಲಿ ಸಿನಿಮಾ ಮಾರಾಟ ಮಾಡಿದ್ದರು. ಆದರೆ ಈಗ 'ಪುಷ್ಪ' ಬಳಿಕ ಅಲ್ಲು ಅರ್ಜುನ್ ಮಾರುಕಟ್ಟೆ ಹೆಚ್ಚಾದ ಕಾರಣ ಅದೇ ಸಿನಿಮಾವನ್ನು ಹಿಂದಿಯಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

'ಪುಷ್ಪ' ಸಿನಿಮಾದ ಹಿಂದಿ ಡಬ್ಬಿಂಗ್‌ ಸಹ ಸಮಸ್ಯೆ ಆಗಿತ್ತು

'ಪುಷ್ಪ' ಸಿನಿಮಾದ ಹಿಂದಿ ಡಬ್ಬಿಂಗ್‌ ಸಹ ಸಮಸ್ಯೆ ಆಗಿತ್ತು

'ಪುಷ್ಪ' ಸಿನಿಮಾದ ಹಿಂದಿ ಡಬ್ಬಿಂಗ್‌ ಹಕ್ಕುಗಳದ್ದೂ ಸಹ ಸಮಸ್ಯೆಯಾಗಿತ್ತು. ಆರಂಭದಲ್ಲಿ ಕಡಿಮೆ ಮೊತ್ತಕ್ಕೆ ಡಬ್ಬಿಂಗ್ ಹಕ್ಕನ್ನು ಮಾರಾಟ ಮಾಡಲಾಗಿತ್ತು. ಆದರೆ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಿದ ಬಳಿಕ ಮೊದಲು ಡಬ್ಬಿಂಗ್ ಹಕ್ಕು ಖರೀದಿ ಮಾಡಿದ ಸಂಸ್ಥೆಯು ಹೆಚ್ಚು ಹಣ ನೀಡಲು ಒಪ್ಪಲಿಲ್ಲ, ಆಗ ಸ್ವತಃ ಮಧ್ಯಸ್ಥಿಕೆ ವಹಿಸಿದ ಅಲ್ಲು ಅರ್ಜುನ್ ಮಾತುಕತೆ ನಡೆಸಿ 'ಪುಷ್ಪ' ಸಿನಿಮಾದ ಹಿಂದಿ ಡಬ್ಬಿಂಗ್ ಬಿಡುಗಡೆ ಹಕ್ಕನ್ನು ಅನಿಲ್ ಟಂಡನ್ (ರವೀನಾ ಟಂಡನ್ ಪತಿ)ಗೆ ನೀಡಿದರು. ದೊಡ್ಡ ಮೊತ್ತ ಕೊಟ್ಟು ಡಬ್ಬಿಂಗ್ ಹಕ್ಕು ಖರೀದಿಸಿದ ಅನಿಲ್ ಟಂಡನ್, ದುಪ್ಪಟ್ಟು ಲಾಭವನ್ನೇ ಮಾಡಿಕೊಂಡಿದ್ದಾರೆ.

More from Filmibeat

English summary
Allu Arjun's previous movie Ala Vaikuntapurmloo Hindi dubbed version releasing in theater soon. But Allu Arjuns father Allu Arvind trying stop this release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X