ಹೊಸ ಚಿಗುರು ಹಳೆ ಬೇರು-ಹಗೆತನದ ಕಿಡಿ ; ಆಲಿಯಾ ಭಟ್-ಬಾಬಿ ಡಿಯೋಲ್ ನಡುವೆ ಭಾರೀ ಜಗಳ-ರಾಣಿ ಮುಖರ್ಜಿ ಗಂಡ ಹೈರಾಣು

ಹೊಸ ನೀರು ಬಂದಾಗ ಹಳೆಯ ನೀರು ಕೊಚ್ಚಿಕೊಂಡು ಹೋಗಬೇಕು, ಹೊಸ ಎಲೆ ಬಂದಾಗ ಹಳೆಯ ಎಲೆ ಉದುರಲೇಬೇಕು.. ಇದು ನೈಸರ್ಗಿಕ ಪ್ರಕ್ರಿಯೆ. ಆದರೆ ಮನುಷ್ಯನ ಅಹಂಕಾರ ಮತ್ತು ಪ್ರತಿಷ್ಠೆ ಈ ಬದಲಾವಣೆಯನ್ನು ಸುಲಭವಾಗಿ ಸ್ವೀಕರಿಸುವುದಿಲ್ಲ. ಬದಲಿಗೆ ಉಳಿದವರ ಭಾವನೆ ಮತ್ತು ಧೋರಣೆಯನ್ನು ಇಲ್ಲಿ ಹಲವರು ಕೀಳಾಗಿ ಕಾಣುತ್ತಾರೆ.

ನಾನು ಹೇಳಿದ ಹಾಗೇ ಕೇಳಿಕೊಂಡು ಇರಬೇಕು, ಎಲ್ಲವೂ ನನ್ನ ಅಧೀನದಲ್ಲಿರಬೇಕು ಎಂದು ಬೇರೆಯವರ ಅಸ್ತಿತ್ವವನ್ನು ಅಲ್ಲಗೆಳೆಯುತ್ತಾರೆ. ಹೀಗಾದಾಗ ಅಲ್ಲಿ ಸಂಘರ್ಷ ನಡೆಯುತ್ತೆ. ಸಂಬಂಧ ಮಣ್ಣು ಪಾಲಾಗುತ್ತೆ. ಆಲಿಯಾ ಭಟ್ ಮತ್ತು ಬಾಬಿ ಡಿಯೋಲ್ ಅವರ ವಿಚಾರ ಇದಕ್ಕೆ ಸದ್ಯದ ಉದಾಹರಣೆ.

Alpha Under Fire The Alia Bhatt-Bobby Deol On-Set Feud That Required Aditya Chopra s Intervention

ಹೌದು, ಆಲಿಯಾ ಭಟ್ ಮತ್ತು ಬಾಬಿ ಡಿಯೋಲ್ ಸದ್ಯ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಆ ಚಿತ್ರದ ಹೆಸರು ''ಆಲ್ಪಾ''. ರಾಣಿ ಮುಖರ್ಜಿ ಅವರ ಪತಿ ಆದಿತ್ಯ ಚೋಪ್ರಾ ನಿರ್ಮಾಣದ ಈ ಚಿತ್ರದಲ್ಲಿ ಆಲಿಯಾ ಭಟ್ ಅವರ ಪಾತ್ರವೇ ಆಕರ್ಷಣೆ. ಇಡೀ ಚಿತ್ರ ಇವರ ಪಾತ್ರ ಸುತ್ತುತ್ತೆ. ಬಾಬಿ ಡಿಯೋಲ್ ಅವರದ್ದು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ. ಇವರೇ ಚಿತ್ರದ ವಿಲನ್. ಶಾರ್ವರಿ ವಾಘ್.. ಅನಿಲ್ ಕಪೂರ್ ಕೂಡ ಚಿತ್ರದಲ್ಲಿದ್ದಾರೆ.

ಆದರೆ, ಇಂತಹ ಸ್ಟಾರ್ ಕಾಸ್ಟ್ ಹೊಂದಿರುವ ಈ ಚಿತ್ರದ ಬಿಡುಗಡೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳಿವೆ. ಯಾಕೆಂದರೆ, ಆದಿತ್ಯ ಚೋಪ್ರಾ ನಿರ್ಮಾಣದ ಈ ಹಿಂದಿನ ಚಿತ್ರಗಳಾದ ''ವಾರ್ 2'' ಮಕಾಡೆ ಮಲಗಿದ್ದರೆ, ''ಮರ್ದಾನಿ 3'' ಸದ್ಯ ತೆವಳುತ್ತಾ ಬಾಕ್ಸಾಫೀಸ್‌ನಲ್ಲಿ ಸಾಗುತ್ತಿದೆ. ಅಂದುಕೊಂಡ ಗೆಲುವನ್ನು ''ಮರ್ದಾನಿ 3'' ಕಾಣಲಿಲ್ಲ.

ಹೀಗಾಗಿ ಆದಿತ್ಯ ಚೋಪ್ರಾ ''ಆಲ್ಪಾ'' ಚಿತ್ರವನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದಾರೆ. ಆದರೆ, ಇದಕ್ಕೆ ಆಲಿಯಾ ಭಟ್ ಅವರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ''ಆಲ್ಪಾ'' ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕೆಂದು ಆಲಿಯಾ ಪಟ್ಟು ಹಿಡಿದು ಕುಂತಿದ್ದಾರೆ ಎನ್ನುವ ಮಾತು ಇದೆ. ಹೀಗಿರುವಾಗ ಇದೀಗ ಆಲಿಯಾ ಭಟ್ ಮತ್ತು ಬಾಬಿ ಡಿಯೋಲ್ ನಡುವೆ ಭಾರೀ ಜಗಳ ನಡೆದಿದೆ ಎನ್ನುವ ಸುದ್ದಿ ಪಸರ್ ಆಗಿದೆ.

ಹೌದು, ''123 ತೆಲುಗು'' ವರದಿಯ ಪ್ರಕಾರ, ಬಾಬಿ ಡಿಯೋಲ್ ಅವರ ಪಾತ್ರದ ಪೋಷಣೆಯ ವಿಚಾರದಲ್ಲಿ ಆಲಿಯಾ ಭಟ್ ಮೂಗು ತೂರಿಸಿದ್ದಾರೆ. ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಬಾಬಿ ಡಿಯೋಲ್ ಅವರಿಗೆ ಸಲಹೆ ನೀಡಲು ಮುಂದಾಗಿದ್ದಾರೆ. ಬಾಬಿ ಡಿಯೋಲ್ ಚಿತ್ರರಂಗಕ್ಕೆ ಇಂದು ನಿನ್ನೆ ಬಂದವರಲ್ಲ. ಮೂರು ದಶಕಗಳಿಂದ ಚಿತ್ರರಂಗದಲ್ಲಿ ಇದ್ದವರು ಬಾಬಿ ಡಿಯೋಲ್. ಸಹಜವಾಗಿ ಬಾಬಿ ಡಿಯೋಲ್ ಅವರಿಗೆ ಆಲಿಯಾ ಭಟ್ ಅವರ ಸಲಹೆ ಮತ್ತು ಸೂಚನೆ ಇಷ್ಟ ಆಗಿಲ್ಲ. ಈ ಹಿನ್ನೆಲೆ ಹೊತ್ತಿಕೊಂಡ ಜಗಳ ಆ ನಂತರ ಭುಗಿಲೆದ್ದಿದೆ.

Alpha Under Fire The Alia Bhatt-Bobby Deol On-Set Feud That Required Aditya Chopra s Intervention

''123 ತೆಲುಗು''ವರದಿಯಲ್ಲಿ ಉಲ್ಲೇಖವಾದಂತೆ ಬಾಬಿ ಡಿಯೋಲ್ ಮತ್ತು ಆಲಿಯಾ ಭಟ್ ನಡುವೆ ವಾಕ್ಸಮರ ಎಷ್ಟರ ಮಟ್ಟಿಗೆ ನಡೆದಿದೆ ಅಂದರೆ ನಿರ್ಮಾಪಕ ಆದಿತ್ಯ ಚೋಪ್ರಾ ಖುದ್ದು ಚಿತ್ರೀಕರಣದ ಸ್ಥಳಕ್ಕೆ ಓಡಿ ಬಂದು ವಿವಾದ ಬಗೆ ಹರಿಸಿದ್ದಾರೆ. ಬಾಬಿ ಡಿಯೋಲ್ ಮತ್ತು ಆಲಿಯಾ ಭಟ್ ಅವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಈ ಸುದ್ದಿ ನಿಜಾನಾ..? ಸುಳ್ಳಾ..? ಖುದ್ದು ''ಆಲ್ಪಾ'' ತಂಡವೇ ಸ್ಪಷ್ಟನೆ ನೀಡಬೇಕಾದರೂ ಸದ್ಯ ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಮತ್ತು ವಿವಾದದ ಕುರಿತು ಚರ್ಚೆ ಕೂಡ ನಡೆಯುತ್ತಿದೆ.

More from Filmibeat

English summary
Is the tension between Alia Bhatt and Bobby Deol threatening the Alpha schedule? Dive into the rumors of a cold war brewing in the Spy Universe and find out why the producers are stepping in.
Read more about: alia bhatt bobby deol
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X