₹100 ಕೋಟಿ ಕೊಟ್ಟರೂ ನಾನು ಆ ಕೆಲಸ ಮಾಡಲ್ಲ, ನಿರ್ದೇಶಕನ ಮೇಲೆ ಕೆರಳಿ ಕೆಂಡವಾದ ನಟಿ..!..!

ಸಾಮಾನ್ಯವಾಗಿ ಒಂದೇ ರೀತಿಯ ಪಾತ್ರಗಳಿಗೆ ಜೋತು ಬೀಳಬಾರದು, ಎಲ್ಲ ತರಹದ ಪಾತ್ರಗಳನ್ನು ಮಾಡಬೇಕೆಂಬ ಆಸೆ ಎಲ್ಲ ಕಲಾವಿದರಲ್ಲಿ ಇದ್ದೇ ಇರುತ್ತೆ. ಎದುರಾದ ಸವಾಲನ್ನೂ ಸ್ವೀಕರಿಸಿ ತೀರಾ ಚಿಕ್ಕ ವಯಸ್ಸಿನಲ್ಲಿಯೇ ವಯಸ್ಸಿಗೂ ಮೀರಿದ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು ಕೂಡ ಭಾರತೀಯ ಚಿತ್ರರಂಗದಲ್ಲಿದ್ದಾರೆ. ಆದರೆ ಇನ್ನೂ ಕೆಲವರು ತಮಗೆ ತಾವೇ ಚೌಕಟ್ಟನ್ನು ಹಾಕಿಕೊಂಡಿರುತ್ತಾರೆ. ಈ ಸಾಲಿನಲ್ಲಿ ಸೇರುವ ಕೆಲವರಿಗೆ ವಯಸಾದರೂ ಕೂಡ ನಾಯಕ- ನಾಯಕಿಯಾಗಿಯೇ ಮಿಂಚುವ ಆಸೆ ಇರುತ್ತೆ. ಉದಾಹರಣೆಗೆ ಅಮೀಶಾ ಪಟೇಲ್.

ಹೌದು, ಕಹೋ ನಾ ಪ್ಯಾರ್ ಹೈ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ಅಮೀಶಾ ಪಟೇಲ್ ಚಿತ್ರರಂಗದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುವ ಸಮಯದಲ್ಲಿ ಪ್ರೀತಿ-ಪ್ರೇಮ-ಪ್ರಣಯ ಎಂದು ಕಾಲಹರಣ ಮಾಡಿದರು. ಚಿತ್ರಗಳ ಕಡೆಗೆ ಪಾತ್ರಗಳ ಕಡೆಗೆ ಗಮನ ಕೊಡದೇ ಬಂದ ಅವಕಾಶಗಳನ್ನು ಎಡಗಾಲಿನಲ್ಲಿ ಒದ್ದು ವಿಕ್ರಂ ಭಟ್ ಅವರಿಂದ ಹಿಡಿದು ಪ್ರೀತಿ ಜಿಂಟಾ ಅವರ ಮಾಜಿ ಪ್ರಿಯಕರ ನೆಸ್ ವಾಡಿಯಾ ಜೊತೆ ಓಡಾಡಿದರು.

Ameesha Patel Slams Gadar 2 Director Won t Play Mother-In-Law Even for Rs 100 Cr

ಇಂಥಾ ಅಮೀಷಾ ಪಟೇಲ್ ಕಹೋ ನಾ ಪ್ಯಾರ್ ಹೈ ಹೊರತು ಪಡಿಸಿ ಮಾಡಿದ ಮತ್ತೊಂದು ಸಾಧನೆ ಅಂದರೆ ಅದು ಗದರ್. ಅನಿಲ್ ಶರ್ಮಾ ನಿರ್ದೇಶನದಲ್ಲಿ ಸನ್ನಿ ಡಿಯೋಲ್ ನಾಯಕತ್ವದಲ್ಲಿ ಬಂದ ಈ ಚಿತ್ರ ಅಮೀಷಾ ಪಟೇಲ್‌ಗೆ ಆ ಕಾಲದಲ್ಲಿ ವ್ಯಾಪಕ ಜನಪ್ರಿಯತೆ ತಂದು ಕೊಟ್ಟಿತ್ತು.

ಇನ್ನೂ ಸಕೀನಾ ಪಾತ್ರದಲ್ಲಿ ಅಮೀಷಾ ಪಟೇಲ್ ಅವರನ್ನು ಜನ ಒಪ್ಪಿದ ಕಾರಣ, ಅನಿಲ್ ಶರ್ಮಾ ತಮ್ಮ ಗದರ್ 2 ಚಿತ್ರಕ್ಕೂ ಅಮೀಷಾ ಪಟೇಲ್ ಅವರನ್ನೇ ಆಯ್ಕೆ ಮಾಡಿಕೊಂಡರು. ವಿಶೇಷ ಅಂದರೆ ಈ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಹಣದ ಮಳೆಯನ್ನೇ ಸುರಿಸಿತು. ಅವಕಾಶಗಳಿಂದ ವಂಚಿತಗೊಂಡು ಸಭೆ-ಸಮಾರಂಭ-ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ರಿಬ್ಬನ್ ಕತ್ತರಿಸಲು ದುಡ್ಡು ಪಡೆಯುತ್ತಿದ್ದ ಅಮೀಷಾ ಪಟೇಲ್ ಅವರನ್ನು ಈ ಚಿತ್ರ ಮತ್ತೊಮ್ಮೆ ಮೇಲಕ್ಕೆತ್ತಿತು. ಆದರೆ ಈಗ ತಮಗೆ ಜನಪ್ರಿಯತೆಯನ್ನು ತಂದು ಕೊಟ್ಟ ಗದರ್ ಎಂಬ ಬ್ರ್ಯಾಂಡ್‌ ನನಗೆ ಬೇಡ ಎಂದಿದ್ದಾರೆ. ಚಿತ್ರದ ನಿರ್ದೇಶಕ ಅನಿಲ್ ಶರ್ಮಾ ವಿರುದ್ಧ ಕಿಡಿ ಕಾರಿದ್ದಾರೆ.

Ameesha Patel Slams Gadar 2 Director Won t Play Mother-In-Law Even for Rs 100 Cr

ಹೌದು, ಅಸಲಿಗೆ ಗದರ್ ಚಿತ್ರದ ನಿರ್ದೇಶಕ ಅನಿಲ್ ಶರ್ಮಾ ಇತ್ತೀಚಿಗೆ ಸಿದ್ಧಾರ್ಥ್ ಕಣ್ಣನ್‌ಗೆ ನೀಡಿದ ಸಂದರ್ಶನದಲ್ಲಿ ಅಮೀಶಾ ಪಟೇಲ್ ಅವರನ್ನು ಟೀಕಿಸಿದ್ದರು. ನರ್ಗಿಸ್ ದತ್ ಅವರ ಮದರ್ ಇಂಡಿಯಾ ಚಿತ್ರವನ್ನು ಉದಾಹರಣೆಯನ್ನಾಗಿ ನೀಡಿ ಗದರ್ 2 ಚಿತ್ರದಲ್ಲಿ ಅಮೀಶಾ ಪಟೇಲ್ ತಾಯಿಯ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ತಾಯಿಯ ಪಾತ್ರ ಅಂದ ಮೇಲೆ ಮುಂದೊಂದು ದಿನ ಆ ಪಾತ್ರ ಅತ್ತೆಯ ಪಾತ್ರ ಕೂಡವಾಗುತ್ತೆ. ದುರಾದೃಷ್ಟವಶಾತ್ ಅಮೀಶಾ ಪಟೇಲ್‌ಗೆ ಇದು ಅರ್ಥವೇ ಆಗಲಿಲ್ಲ ಎಂದು ಹೇಳಿದ್ದರು. ಈ ಸ್ವಾಭಾವಿಕ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳದೇ ನಾನು ತಾಯಿಯ ಪಾತ್ರ ಮಾಡಲ್ಲ ಅತ್ತೆಯ ಪಾತ್ರ ಮಾಡಲ್ಲ ಎಂದು ಪಟ್ಟು ಹಿಡಿದು ಕುಳಿತರೆ ಹೇಗೆ ಎಂದು ಪ್ರಶ್ನೆ ಮಾಡಿದ್ದರು.

ಅನಿಲ್ ಶರ್ಮಾ ಅವರ ಈ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆಯನ್ನು ನೀಡಿರುವ ಅಮೀಶಾ ಪಟೇಲ್ ಗದರ್ ಚಿತ್ರವೇ ಮೊದಲು ಮತ್ತು ಕೊನೆ ನನಗೆ ನನ್ನ ಮಿತಿಗಳು ಗೊತ್ತಿವೆ. 100 ಕೋಟಿ ಕೊಟ್ಟರು ಕೂಡ ಗದರ್ ಅಥವಾ ಬೇರೆ ಯಾವ ಚಿತ್ರದಲ್ಲಿ ನಾನು ಅತ್ತೆಯ ಪಾತ್ರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಗದರ್ ಚಿತ್ರದಲ್ಲಿನ ತಾರಾ ಸಿಂಗ್ ಮತ್ತು ಸಕೀನಾ ಪಾತ್ರಗಳನ್ನು ಮುದುಕ ಮುದುಕಿಯನ್ನಾಗಿ ನೋಡಲು ಪ್ರೇಕ್ಷಕರು ಇಷ್ಟ ಪಡುವುದಿಲ್ಲ ಎಂದು ಕೂಡ ಅಮೀಶಾ ಪಟೇಲ್ ಹೇಳಿದ್ಧಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X