ಮದುವೆಯಲ್ಲಿ 4 ಹಾಡುಗಳಿಗೆ ಕುಣಿಯಲು ₹11 ಲಕ್ಷ ಹಣ ಪಡೆದು ಮಕ್ಮಲ್ ಟೋಪಿ ಹಾಕಿದ ಖ್ಯಾತ ನಟಿಗೆ ಶಾಕ್
ಸಿನಿಮಾ ಅಂದ್ರೇನೇ ಮಾಯಾ ಲೋಕ. ಇದಕ್ಕೆ ಎಲ್ಲರೂ ಮಾರಿ ಹೋದವರೇ. ಇಲ್ಲಿ ಅನೇಕರು ಮುಖವಾಡದ ಬದುಕನ್ನು ಬದುಕುತ್ತಿರುತ್ತಾರೆ. ಬಣ್ಣ ಬಣ್ಣದ ಮಾತುಗಳಿಂದ ನಂಬಿಸುತ್ತಾರೆ. ಚೂರು ಯಾಮಾರಿದರೂ ತಲೆಗೆ ಮಕ್ಮಲ್ ಟೋಪಿ ಹಾಕಿ ಹಣೆಗೆ ತುಪ್ಪ ಸವರುತ್ತಾರೆ. ಇದ್ದ ಬದ್ದ ಹಣವನ್ನೆಲ್ಲ ದೋಚಿ ಕೈಗೆ ಸಿಗದೇ ಸತಾಯಿಸುತ್ತಾರೆ. ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುತ್ತಾರೆ. ಹೇಗಾದರೂ ಸರಿ ..
ದುಡ್ಡು ಮಾಡಬೇಕು ಎಂಬ ಉದ್ದೇಶದಿಂದ ಅಡ್ಡದಾರಿ ಹಿಡಿಯುತ್ತಾರೆ. ಮೋಸ, ಸುಲಿಗೆ, ವಂಚನೆಯ ಪ್ರಕರಣದಲ್ಲಿ ಕೂಡ ಸಿಲುಕಿಕೊಳ್ಳುತ್ತಾರೆ. ಇದಕ್ಕೆ ಇತ್ತೀಚೆಎ ಉದಾಹರಣೆ ಎನ್ನುವಂತೆ ಚಿತ್ರರಂಗದ ಹಲವರು ಈ ಮೋಸದ ಜಾಲವನ್ನು ಅಮಾಯಕರ ಮೇಲೆ ಎಸೆದಿದ್ದಾರೆ. ಹಲವರನ್ನು ವಂಚಿಸಿದ್ದಾರೆ. ಅಮೀಷಾ ಪಟೇಲ್ ಸದ್ಯದ ಲೇಟೆಸ್ಟ್ ಉದಾಹರಣೆ.

ಹೌದು, ''ಕಹೋ ನಾ ಪ್ಯಾರ್ ಹೈ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ಅಮೀಷಾ ಪಟೇಲ್ ಚಿತ್ರರಂಗದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುವ ಸಮಯದಲ್ಲಿ ಬಾಲಿವುಡ್‌ನ ಹಿರಿಯ ನಿರ್ದೇಶಕ ವಿಕ್ರಂ ಭಟ್ ಜೊತೆ ಪ್ರೀತಿಯಲ್ಲಿ ಬಿದ್ದರು. ಪ್ರೀತಿ ಇದ್ದಲ್ಲಿ ವಯಸ್ಸಿನ ಹಂಗೆಲ್ಲಿ ಎಂದು ತೇಲಿದರು. ತಮ್ಮ ಚಿತ್ರ ಜೀವನದ ಕಡೆ ಗಮನ ಕೊಡದೇ ಪ್ರೇಮದ ಅಮಲೇರಿಸಿಕೊಂಡರು.
ಆದರೆ ಈ ಅಮಲು ಆ ನಂತರ ಇಳಿಯಿತು. ಸಂಬಂಧವೂ ಮುರಿದು ಬಿತ್ತು. ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಅಮೀಷಾ ಜಾಗಕ್ಕೆ ಹೊಸಬರು ಬಂಧಾಗಿತ್ತು. ಅವಕಾಶಗಳ ಕೊರತೆ ಎದುರಾಯಿತು.
ಇನ್ನೂ ಅಮೀಷಾ ಪಟೇಲ್ ''ಕಹೋ ನಾ ಪ್ಯಾರ್ ಹೈ'' ಹೊರತು ಪಡಿಸಿ ಮಾಡಿದ ಮತ್ತೊಂದು ಸಾಧನೆ ಅಂದರೆ ಅದು ''ಗದರ್''. ಅನಿಲ್ ಶರ್ಮಾ ನಿರ್ದೇಶನದಲ್ಲಿ ಸನ್ನಿ ಡಿಯೋಲ್ ನಾಯಕತ್ವದಲ್ಲಿ ಬಂದ ಈ ಚಿತ್ರ ಅಮೀಷಾ ಪಟೇಲ್‌ಗೆ ಆ ಕಾಲದಲ್ಲಿ ವ್ಯಾಪಕ ಜನಪ್ರಿಯತೆ ತಂದು ಕೊಟ್ಟಿತ್ತು.''ಗದರ್ 2'' ಕೂಡ ಗೆದ್ದಿತು.
ಇಂಥಾ ಅಮೀಷಾ ಪಟೇಲ್..ಚಿತ್ರರಂಗಕ್ಕಿಂತ ಆಗಾಗ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ತಾರೆ. ರಿಬ್ಬನ್ ಕಟಿಂಗ್ ಕಾರ್ಯಕ್ರಮದಲ್ಲಿ ಮಿಂಚ್ತಾರೆ. ದುಡ್ಡು ಸಿಗುತ್ತೆ ಎಂಬ ಆಸೆಯಲ್ಲಿ ಕಂಡ ಕಂಡವರ ಮದುವೆಗಳಲ್ಲಿ.. ಪಾರ್ಟಿಗಳಲ್ಲಿ ಕೂಡ ಹೋಗಿ ಮೈ ಬಳುಕಿಸಿ ಬರುತ್ತಾರೆ.

ಆದರೆ ಹೀಗೆ ಒಪ್ಪಿಕೊಂಡ ಕೆಲಸವನ್ನಾದರೂ ಅಮೀಷಾ ಪಟೇಲ್ ನಿಯತ್ತಾಗಿ ಮಾಡುತ್ತಾರಾ ? ಅಂದರೆ ಅದು ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ 2017ರ ಪ್ರಕರಣವೊಂದು ಸದ್ಯ ಅಮೀಷಾ ಪಟೇಲ್‌ಗೆ ತಲೆ ನೋವಾಗಿದೆ.
ಹೌದು, ಅಸಲಿಗೆ 2017ರ ನವೆಂಬರ್ 16ರಂದು ಅಮೀಷಾ ಪಟೇಲ್.. ದೆಹಲಿ ರಸ್ತೆಯ ಹಾಲಿಡೇ ರೀಜೆನ್ಸಿ ಹೋಟೆಲ್‌ನಲ್ಲಿ ಆಯುಷ್ ಅಗರ್ವಾಲ್ ಅವರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಈ ಅದ್ಧೂರಿ ಮದುವೆಯ ಕಳೆಯನ್ನು ತನ್ನ ನೃತ್ಯದಿಂದ ಅಮೀಷಾ ಪಟೇಲ್ ಇನ್ನೂ ಹೆಚ್ಚಿಸಬೇಕಿತ್ತು.ಮದುವೆಯಲ್ಲಿ ನಾಲ್ಕು ಹಾಡುಗಳಿಗೆ ಕುಣಿಯಲು ಅಮೀಷಾ ಪಟೇಲ್, ಪವನ್ ಕುಮಾರ್ ವರ್ಮಾ ಅವರಿಂದ ₹11 ಲಕ್ಷ ಅಡ್ವಾನ್ಸ್ ಹಣ ಕೂಡ ಪಡೆದಿದ್ದರು.
ಆದರೆ.. ಮದುವೆಯ ಮುಹೂರ್ತ ಸಮಾರಂಭ ಮುಗಿಯಿತೇ ಹೊರತು ದುಡ್ಡು ಪಡೆದಿದ್ದ ಅಮೀಷಾ ಪಟೇಲ್, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕಲು ಬರಲೇ ಇಲ್ಲ. ಈ ಹಿನ್ನೆಲೆ ವಂಚನೆ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿ ಮೊರಾದಾಬಾದ್ ನ್ಯಾಯಾಲಯದಲ್ಲಿ ದೂರು ದಾಖಲಿಸಿಲಾಗಿತ್ತು.
ದೂರು ದಾಖಲಾದ ನಂತರ ರಾಜಿ ಸಂಧಾನಕ್ಕೆ ಬಂದಿದ್ದ ಅಮೀಷಾ ಆ ನಂತರ ₹14 ಲಕ್ಷ ಹಣವನ್ನು ಮರಳಿ ನೀಡುವುದಾಗಿ ಹೇಳಿದ್ದರು. ಆ ಪೈಕಿ ₹8 ಲಕ್ಷ ಹಣವನ್ನು ಮರಳಿ ನೀಡಿದರು. ₹2 ಲಕ್ಷಕ್ಕೆ ಚೆಕ್ ನೀಡಿದ್ದರು. ಆದರೆ.. ಆ ಚೆಕ್ ಬೌನ್ಸ್ ಆಗಿತ್ತು.
ಹೀಗಾಗಿ ಎರಡು ವರ್ಷದ ಹಿಂದೆ ಅಮೀಷಾ ಪಟೇಲ್ ಅವರಿಗೆ ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ಸಮನ್ಸ್ ನೀಡಿತ್ತು. ಅವರು ಹಾಜರಾಗದಿದ್ದಾಗ, ನ್ಯಾಯಾಲಯವು ಅರೆಸ್ಟ್ ವಾರಂಟ್ ಜಾರಿ ಮಾಡಿತ್ತು. ನಂತರ, ಅಮೀಷಾ 2024ರ ಜನವರಿ 23ರಂದು ಮೊರಾದಾಬಾದ್‌ಗೆ ಆಗಮಿಸಿ, ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ನಿರೀಕ್ಷಣಾ ಜಾಮೀನು ಪಡೆದಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನ್ಯಾಯಾಲಯ, ಮತ್ತೊಮ್ಮೆ ಅಮೀಷಾ ಪಟೇಲ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. 2026ರ ಜನವರಿ 9ರಂದು ರಾಂಚಿಯ ಸಿವಿಲ್ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಧೀಶ ಡಿ.ಎನ್. ಶುಕ್ಲಾ ಅವರು ಆದೇಶಿಸಿದ್ದಾರೆ. ಅಮೀಷಾ ಪಟೇಲ್ ಹಾಜರಾಗುತ್ತಾರಾ..? ಈ ವಿವಾದವನ್ನು ಬಗೆಹರಿಸಿಕೊಳ್ಳುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











