twitter
    For Quick Alerts
    ALLOW NOTIFICATIONS  
    For Daily Alerts

    ಶಾರೂಖ್ ಖಾನ್ ಸಿನಿಮಾ ಹೆಸರು ಉಲ್ಲೇಖಿಸಿದ ಡೊನಾಲ್ಡ್ ಟ್ರಂಪ್

    |

    ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಬೆಳಿಗ್ಗೆ ಭಾರತಕ್ಕೆ ಆಗಮಿಸಿದರು. ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಟ್ರಂಪ್ ನಂತರ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಮೊಟೆರಾದ ನೂತನ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

    Recommended Video

    ಭಾರತದ ಸಿನಿಮಾಗಳ ಬಗ್ಗೆ ಟ್ರಂಪ್ ಮೆಚ್ಚುಗೆ | Oneindia Kannada

    ಮೊಟೆರಾ ಸ್ಟೇಡಿಯಂನಲ್ಲಿ ಭಾರತದ ಕುರಿತು ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್ ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ನಟನೆಯ ಸಿನಿಮಾ ಹೆಸರು ಉಲ್ಲೇಖಿಸಿದ್ದಾರೆ.

    Donald Trump India Visit Live: ಟ್ರಂಪ್ ಮೇಲೆ ಹೊಗಳಿಕೆಯ ಹೂ ಸುರಿದ ಮೋದಿ

    ''ವರ್ಷಕ್ಕೆ 2000 ಸಿನಿಮಾಗಳನ್ನು ನಿರ್ಮಿಸುವ ದೇಶ ಭಾರತ. ಮ್ಯೂಸಿಕ್, ಡ್ಯಾನ್ಸ್, ರೋಮ್ಯಾನ್ಸ್ ಹೀಗೆ ಎಲ್ಲ ರೀತಿಯ ಖುಷಿ ಸಿನಿಮಾಗಳಿಂದ ಸಿಗುತ್ತೆ. ಡಿ ಡಿ ಎಲ್ ಜೆ ಹಾಗೂ ಶೋಲೆ ಅಂತಹ ಕ್ಲಾಸಿಕ್ ಚಿತ್ರಗಳನ್ನು ಎಲ್ಲ ಜನರು ಇಷ್ಟ ಪಡುತ್ತಾರೆ.'' ಎಂದು ಸಿನಿಮಾ ಇಂಡಸ್ಟ್ರಿಯ ಬಗ್ಗೆ ಟ್ರಂಪ್ ಮಾತನಾಡಿದರು. ಈ ಹಿಂದೆ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಮಾ ಭಾರತಕ್ಕೆ ಬಂದಿದ್ದ ವೇಳೆಯೂ ಡಿಡಿಎಲ್ ಜೆ ಸಿನಿಮಾವನ್ನು ಸ್ಮರಿಸಿಕೊಂಡಿದ್ದರು ಎನ್ನುವುದು ವಿಶೇಷ.

    America President Donald Trump Mentions DDLJ Name In Speech

    ಅಮೆರಿಕಾ ಅಧ್ಯಕ್ಷ ಟ್ರಂಪ್ ಬದುಕಿನ 10 ಇಂಟರೆಸ್ಟಿಂಗ್ ಅಂಶಗಳು

    ಶಾರೂಖ್ ನಟನೆಯ ಡಿಡಿಎಲ್ ಜೆ ಹಾಗೂ ಶೋಲೆ ಸಿನಿಮಾ ಹೆಸರು ಹೇಳುತ್ತಿದ್ದಂತೆ ಸ್ಟೇಡಿಯಂನಲ್ಲಿ ನೆರೆದಿದ್ದ ಜನರು ಜೋರಾಗಿ ಕೂಗುತ್ತಾ ಚಪ್ಪಾಳೆ ತಟ್ಟಿದರು.

    ಟ್ರಂಪ್ ಅವರ ಈ ಮಾತು ಕೇಳಿದ ನಂತರ ವೇದಿಕೆ ಮೇಲೆ ಕೂತಿದ್ದ ನರೇಂದ್ರ ಮೋದಿ ಹಾಗೂ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಅಮಿತಾ ಶಾ ಸೇರಿದಂತೆ ರಾಷ್ಟ್ರ ನಾಯಕರು, ಸಚಿವರು ಎಲ್ಲರ ಮುಖದಲ್ಲೂ ನಗು ಮೂಡಿತ್ತು.

    1995ರಲ್ಲಿ ತೆರೆಕಂಡಿದ್ದ 'ಡಿಡಿಎಲ್ ಜೆ' ಸಿನಿಮಾ ಬಾಲಿವುಡ್ ನ ಎವರ್ ಗ್ರೀನ್ ಹಿಟ್ ಸಿನಿಮಾ. ಶಾರೂಖ್ ಖಾನ್ ಮತ್ತು ಕಾಜೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಚಿತ್ರ. ಹಿಂದಿ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಕಾಲ ಪ್ರದರ್ಶನ ಕಂಡ ಸಿನಿಮಾ.

    English summary
    United states President Donald Trump mentions Shahrukh Khan's DDLJ and Sholey movie name in his speech at motera stadium.
    Tuesday, February 25, 2020, 13:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X