ಗಂಡ-ಹೆಂಡ್ತಿಯ ಜಗಳದಲ್ಲಿ ಕೂಸು ಬಡವಾಯಿತು, ಮುದ್ದಿನ ಮಗಳ ಹುಟ್ಟುಹಬ್ಬವನ್ನೇ ಮರೆತರಾ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್..?

ಗಂಡ-ಹೆಂಡ್ತಿಯ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯ ಜೀವನದಲ್ಲಿನ ಕಲಹ, ಭಿನ್ನಾಭಿಪ್ರಾಯಗಳಿಂದ ಇವರ ಮಗಳ ಆರಾಧ್ಯ ನರಳುತ್ತಿದ್ದಾರಾ ಎನ್ನುವ ಅನುಮಾನ ಈಗ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಆರಾಧ್ಯ ಬಚ್ಚನ್ ಅವರ ಹುಟ್ಟುಹಬ್ಬ.

ಹೌದು, ಅಸಲಿಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವೆ ಸಂಬಂಧ ಹಳಸಿದೆ ಎನ್ನುವ ಮಾತು ಇಂದು ನಿನ್ನೆಯದಲ್ಲ. ಅನೇಕ ದಿನಗಳಿಂದ ಇವರಿಬ್ಬರ ಸಾಂಸಾರಿಕ ಜೀವನದ ಕುರಿತು ಭಾರತದೆಲ್ಲೆಡೆ ಚರ್ಚೆಯಾಗುತ್ತಿದೆ. ಹಾಗಂತೆ, ಹೀಗಂತೆ ಎನ್ನುವ ಮಾತು ಕೇಳಿ ಬರುತ್ತಾನೇ ಇದೆ. ಇನ್ನೂ.. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಂಸಾರ ಮುರಿದು ಬೀಳಲು ನಿಮ್ರತ್ ಕೌರ್ ಕಾರಣವೆನ್ನುವ ಮಾತು ಕೂಡ ಇದೆ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವರ್ಗ ನಿಮ್ರತ್ ಕೌರ್ ಅವರನ್ನು ನಿರಂತರ ಟ್ರೋಲ್ ಮಾಡುತ್ತಿದೆ. ನಿಮ್ರತ್ ಕೌರ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದೆ.

Amid Abhishek Bachchan and Aishwarya Rai s divorce rumours both avoided daughter Aaradhya s birthday

ಆದರೆ, ಇಷ್ಟೆಲ್ಲ ಆದರೂ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಮೌನ ಮುರಿದಿಲ್ಲ. ಗಂಡ-ಹೆಂಡ್ತಿಯ ನಡುವೆ ತನ್ನ ಹೆಸರು ಥಳುಕು ಹಾಕಿಕೊಂಡಿದ್ದಕ್ಕೆ ನಿಮ್ರತ್ ಕೌರ್ ಕೂಡ ಸ್ಪಷ್ಟನೆಯನ್ನು ನೀಡಿಲ್ಲ. ಹೀಗಾಗಿ ಇವರ ಈ ಮೌನವನ್ನು ಅನೇಕರು ಸಮ್ಮತಿ ಲಕ್ಷಣವೆಂದು ಅಂದುಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ತಮ್ಮ ಮುದ್ದಿನ ಮಗಳಾದ ಆರಾಧ್ಯ ಅವರ ಹುಟ್ಟುಹಬ್ಬವನ್ನು ಆಚರಿಸದೇ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಟ್ರೋಲಿಗರ ಬಾಯಿಗೆ ಇನ್ನೊಮ್ಮೆ ಆಹಾರವಾಗಿದ್ಧಾರೆ.

ಹೌದು, ಪ್ರತಿ ವರ್ಷ ತಮ್ಮ ಮಗಳು ಆರಾಧ್ಯ ಬರ್ತ್‌ಡೇಯನ್ನು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅದ್ಧೂರಿಯಾಗಿ ಆಚರಿಸುತ್ತಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಕೂಡ ಇಬ್ಬರು ತಮ್ಮ ಮಗಳಿಗೆ ಶುಭಾಶಯವನ್ನು ಕೋರುತ್ತಿದ್ದರು. ಮೂವರು ಜೊತೆಯಲ್ಲಿರುವ ಫೋಟೊ ಹಂಚಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ಮಗಳಿಗೆ ಜನುಮದಿನದ ಶುಭಾಶಯವನ್ನು ಕೋರಿಲ್ಲ. ಅದ್ಧೂರಿಯಾಗಿ ಅಲ್ಲದಿದ್ದರೂ ಸರಳವಾಗಿ ಕೂಡ ಇಬ್ಬರು ಸೇರಿ ತಮ್ಮ ಮಗಳ ಹುಟ್ಟುಹಬ್ಬವನ್ನೂ ಆಚರಿಸಿಲ್ಲ.

Amid Abhishek Bachchan and Aishwarya Rai s divorce rumours both avoided daughter Aaradhya s birthday

ಇಬ್ಬರ ಈ ನಡೆ ಇವರ ದಾಂಪತ್ಯ ಜೀವನದ ಕುರಿತು ಅನೇಕರಲ್ಲಿ ಇರುವ ಅನುಮಾನವನ್ನು ಇನ್ನೂ ಹೆಚ್ಚಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಇನ್ನೊಮ್ಮೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಸಾಂಸಾರಿಕ ಜೀವನ ಚರ್ಚೆಗೀಡಾಗುತ್ತಿದೆ. ಅಂದ್ಹಾಗೇ ಪ್ರತಿ ವರ್ಷ ಆರಾಧ್ಯಗೆ ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಬಚ್ಚನ್ ಶುಭಾಶಯವನ್ನು ಕೋರುತ್ತಿದ್ದರು. ಶ್ವೇತಾ ಅವರ ಮಕ್ಕಳಾದ ಅಗಸ್ತ್ಯಾ ನಂದ ಮತ್ತು ನವ್ಯಾ ನವೇಲಿ ನಂದ ಕೂಡ ವಿಷ್ ಮಾಡುತ್ತಿದ್ದರು. ಆದರೆ ಈ ಬಾರಿ ಇವರು ಯಾರು ಕೂಡ ಆರಾಧ್ಯಗೆ ಶುಭಾಶಯವನ್ನು ಕೋರಿಲ್ಲ. ಇದಕ್ಕೆ ಅಭಿಷೇಕ್ ಬಚ್ಚನ್ ಕುಟುಂಬಕ್ಕೆ ಐಶ್ವರ್ಯ ರೈ ಮೇಲಿರುವ ಅಸಮಾಧಾನ, ಕೋಪ ಕಾರಣನಾ ಗೊತ್ತಿಲ್ಲ. ಆದರೆ ಸದ್ಯಕ್ಕೆ ಇಂತಹದ್ದೊಂದು ಚರ್ಚೆ ನಡೆಯುತ್ತಿದೆ.

ಇನ್ನೂ ಇವರು ಯಾರು ಆರಾಧ್ಯಗೆ ಶುಭ ಕೋರದಿದ್ದರೂ ಕೂಡ ಅಮಿತಾಬ್ ಬಚ್ಚನ್ ತಮ್ಮ ಮೊಮ್ಮಗಳಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಮೊಮ್ಮಗಳ ಕುರಿತು ವಿಶೇಷವಾಗಿ ಏನು ಬರಿಯದ ಅಮಿತಾಬ್, ಅಭಿಷೇಕ್ ಬಚ್ಚನ್ ಅಭಿಮಾನಿಗಳು ಹಂಚಿಕೊಂಡಿದ್ದ ಬರಹ ಮತ್ತು ವಿಡಿಯೋವನ್ನು ರೀಪೋಸ್ಟ್ ಮಾಡಿದ್ದಾರೆ. ಅಮಿತಾಬ್ ಹಂಚಿಕೊಂಡ ಈ ಫೋಸ್ಟ್ ನೋಡಿದ ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ಜೋಡಿಯನ್ನು ಇಷ್ಟಪಡುವ ಅನೇಕರು ನೀವಾದರೂ ಶುಭಾಶಯ ಕೋರಿದರಲ್ಲ ಸಾಕು ಬಿಡಿ ಎನ್ನುತ್ತಿದ್ದಾರೆ.

ಇನ್ನುಳಿದಂತೆ ಈ ಚರ್ಚೆಯ ನಡುವೆ ಹಿಂದೊಮ್ಮೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ಮಗಳು ಆರಾಧ್ಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಈ ವಿಡಿಯೋದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಜಯಾ ಬಚ್ಚನ್ ಇಬ್ಬರನ್ನೂ ಕಾಣಬಹುದು. ಸದ್ಯ ವೈರಲ್ ಆದ ಈ ವಿಡಿಯೋವನ್ನು ಅನೇಕರು ಈ ವರ್ಷದ ವಿಡಿಯೋ ಎಂದು ನಂಬಿದ್ಧಾರೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ಧಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X