ಅರ್ಜುನ್ ಕಪೂರ್ ತೆಕ್ಕೆಯಿಂದ ಜಾರಿದ ಮಲೈಕಾ ಬಾಳಲ್ಲಿ ಬಂದ ಈ ಅನಾಮಿಕ ವ್ಯಕ್ತಿ ಯಾರು..?

ಚಿತ್ರರಂಗದಲ್ಲಿ ಲವ್ವು ಮತ್ತು ಬ್ರೇಕಪ್ಪು ತುಂಬಾನೇ ಕಾಮನ್ನು. ಇವತ್ತು ಅಂಟಿಕೊಂಡು ತಿರುಗೋರು, ನಾಳೆ ದಿನ ಮುಖ ಗಂಟಾಕಿಕೊಂಡು ಓಡಾಡುತ್ತಾರೆ. ಅದರ ಮಾರನೇ ದಿನ ಮತ್ತೊಬ್ಬರ ಸಾಂಗತ್ಯವನ್ನೂ ಬೆಳಿಸಿಕೊಳ್ಳುತ್ತಾರೆ. ಈ ಸಾಲಿಗೆ ಈಗ ಮಲೈಕಾ ಅರೋರಾ ಸೇರಿಕೊಂಡಿದ್ದಾರೆ ಅನ್ನುವುದು ಸದ್ಯಕ್ಕೆ ನಡೆಯುತ್ತಿರುವ ವಾದ.

ಹೌದು, ಅರ್ಜುನ್ ಕಪೂರ್‌ಗಾಗಿ ಅರ್ಬಾಜ್ ಖಾನ್‌ಗೆ ತಲಾಖ್ ನೀಡಿದ್ದ ಮಲೈಕಾ, ಈಗ ಅರ್ಜುನ್ ಕಪೂರ್ ಜೊತೆಯೂ ಇಲ್ಲ. ಇದು ಎಲ್ಲರಿಗೆ ಗೊತ್ತಿರುವಂಥದ್ದೇ. ಸದ್ಯದ ಸಮಾಚಾರ ಏನೆಂದರೆ ಅರ್ಜುನ್ ಕಪೂರ್ ತೆಕ್ಕೆಯಿಂದ ಜಾರಿದ ಬಳಿಕ ಮಲೈಕಾ ಈಗ ಇನ್ನೊಬ್ಬ ವ್ಯಕ್ತಿಯ ಜೊತೆ ಸಪ್ತಸಾಗರದಾಚೆ ಪ್ರೇಮ ಪುಸ್ತಕವನ್ನು ಓದಲು ಶುರು ಮಾಡಿದ್ದಾರೆ. ದೂರದ ಸ್ಪೇನ್‌ನಿಂದ ಸಾಕ್ಷಾತ್ ಮಲೈಕಾ ಅರೋರಾ ಅವರೇ ಇಂತಹದ್ದೊಂದು ಬ್ರೇಕಿಂಗ್ ನ್ಯೂಸನ್ನೂ ಫೋಟೋ ಹಂಚಿಕೊಳ್ಳುವ ಮೂಲಕ ನೀಡಿದ್ಧಾರೆ.

amid-break-up-rumours-with-arjun-kapoor-malaika-arora-shares-pic-of-mystery-man-sparks-dating-rumour

ಹೌದು, ಅಸಲಿಗೆ ಅಂಬಾನಿ ಮಗನ ಮದುವೆಗೂ ಬಾರದ ಮಲೈಕಾ, ಸ್ಪೇನ್‌ನಲ್ಲಿ ಮಜಾ ಮಾಡುತ್ತಿದ್ದಾರೆ. ತಮ್ಮನ್ನು ಇಷ್ಟ ಪಡುವ ಅಭಿಮಾನಿಗಳಿಗೆ ಅಲ್ಲಿಂದ ಫೋಟೋಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಎಲ್ಲರ ಕಣ್ಣು ಕುಕ್ಕಿದ್ದು ಮಾತ್ರ ನಿನ್ನೆ ಮಲೈಕಾ ಹಂಚಿಕೊಂಡ ಭಾವ ಚಿತ್ರ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ನಾಲ್ಕು ಚಿತ್ರಗಳ ಕೊಲಾಜ್ ಹಂಚಿಕೊಂಡಿದ್ದ ಮಲೈಕಾ, ಆ ಕೊಲಾಜ್‌ನಲ್ಲಿ ವ್ಯಕ್ತಿಯೊಬ್ಬ ನಿಂತ ಫೋಟೋವೊಂದನ್ನು ಸೇರಿಸಿದ್ದರು. ಮಂಜು ಮಂಜಾದ ಆ ವ್ಯಕ್ತಿಯ ಫೋಟೋ ಈಗ ಅನೇಕರ ನಿದ್ದೆಯನ್ನು ಕೆಡಿಸಿದೆ. ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅರ್ಜುನ್ ಕಪೂರ್ ಅವರಿಂದ ದೂರವಾಗಿ JUST ಆರೇ ಆರು ತಿಂಗಳಿನಲ್ಲಿ ಮಲೈಕಾ ಆಗಲೇ ಮತ್ತೊಬ್ಬ ವ್ಯಕ್ತಿಯ ಪ್ರೇಮಪಾಶದಲ್ಲಿ ಸಿಲುಕಿದ್ದಾರಾ ಅನ್ನುವ ಅನುಮಾನ ಕೂಡ ಈಗ ಅನೇಕರನ್ನು ಕಾಡುತ್ತಿದೆ.

amid-break-up-rumours-with-arjun-kapoor-malaika-arora-shares-pic-of-mystery-man-sparks-dating-rumour

ಹೀಗಾಗಿಯೇ ಎದೆಯೊಡೆದುಕೊಂಡ ಅನೇಕರು ಈಗ ಬ್ಲರ್ ಆದ ಫೋಟೋದಲ್ಲಿರುವ ವ್ಯಕ್ತಿಯ ಕುಲ, ಗೋತ್ರ , ಹುಡುಕಾಡಲು ಶುರು ಮಾಡಿದ್ದಾರೆ. ಆರು ವರ್ಷಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ್ದ ಅರ್ಜುನ್ ಕಪೂರ್ ಪ್ರೀತಿಗೆ ಬೆಲೆನೇ ಇಲ್ವಾ ಎಂಬ ಪ್ರಶ್ನೆಯನ್ನು ತಮ್ಮ ತಮ್ಮಲ್ಲಿಯೇ ಕೇಳಿಕೊಳ್ಳುತ್ತಿದ್ದಾರೆ.

ಇನ್ನೂ ಮಲೈಕಾ ಅರೋರಾ ಹಂಚಿಕೊಂಡ ಈ ಕೊಲಾಜ್ ಫೋಟೋ ಸಾಮಾಜಿಕ ಜಾಲತಾಣದ ಸಹಾಯದ ಮೂಲಕ, ಮಲೈಕಾ ಅರೋರಾ ಅವರ ಮಾಜಿ ಪ್ರಿಯಕರ ಅರ್ಜುನ್ ಕಪೂರ್ ಕಣ್ಣಿಗೂ ಬಿದ್ದಿರಬೇಕು. ಮಲೈಕಾ ಜೊತೆ ತಮ್ಮ ಹೆಸರು ಇನ್ನೊಮ್ಮೆ ಟ್ರೆಂಡಿಂಗ್‌ನಲ್ಲಿರುವುದನ್ನು ನೋಡಿ, ಎದೆ ಧಸಕ್ ಎಂದಿರಬೇಕು. ಹೀಗಾಗಿಯೇ ಏನೋ ಅರ್ಜುನ್ ಕಪೂರ್ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಶಾಂತಿ ಬೇಕಾಗಿದೆ ಎಂದು ಫೋಸ್ಟ್ ಮಾಡಿದ್ದಾರೆ. ನೊಂದ ಜೀವ ಮತ್ತಷ್ಟು ನೋಯಿಸಬೇಡಿ ಎಂಬರ್ಥದಲ್ಲಿ ಅರ್ಜುನ್ ಈ ಸಾಲುಗಳನ್ನು ಬರೆದುಕೊಂಡಿದ್ದಾರಾ ಗೊತ್ತ್ ಇಲ್ಲ.

amid-break-up-rumours-with-arjun-kapoor-malaika-arora-shares-pic-of-mystery-man-sparks-dating-rumour

ಸದ್ಯಕ್ಕೆ ಮಲೈಕಾ ಅವರ ಜೊತೆ ಇರುವ ಈ ಅನಾಮಿಕ ವ್ಯಕ್ತಿ ಯಾರು ಎನ್ನುವ ಚರ್ಚೆ ಶುರುವಾಗಿದೆ. ಮಲೈಕಾ ಇನ್‌ಸ್ಟಾಗ್ರಾಮ್ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ಯಾರು ಎನ್ನುವುದಕ್ಕೆ ಉತ್ತರವನ್ನು ಖುದ್ದು 50ರ ಪ್ರಾಯದ ಮಲೈಕಾ ಅವರೇ ನೀಡುತ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X