ಜಾಲಿ, ಜಾಲಿ, ಎಲ್ಲ ಜಾಲಿ.. ಈಜುಕೊಳದಲ್ಲಿ ಪರಪುರುಷನ ಜೊತೆ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಮೋಜು ಮಸ್ತಿ...!

ಲವ್ ಮಾಡೋಕೆ ನಾನಾ ವಿಧ. ಯಾರು ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೋ ಅದು ಅವರ ಅವರಿಗಷ್ಟೇ ಗೊತ್ತಿರುತ್ತೆ. ಆದರೆ.. ರೀಲ್‌ನಲ್ಲಿ ಚಿಗುರೊಡೆಯುವ ಪ್ರೀತಿ ಬಹುತೇಕ ರಿಯಲ್ ಆಗಿರುತ್ತೆ. ಇದಕ್ಕೆ.. ಉದಾಹರಣೆ ಎಂಬಂತೆ ಹೃದಯದಿಂದ ಮದುವೆಯಾಗಿ ಇಂದು ಸುಖ ಸಂಸಾರ ನಡೆಸುತ್ತಿರುವ ಅನೇಕರು ಈ ಬಣ್ಣದ ಪ್ರಪಂಚದಲ್ಲಿದ್ದಾರೆ.

ಆದರೆ.. ಇವರೆಲ್ಲರ ನಡುವೆ ಈಗೀಗ ಅದ್ಯಾಕೋ ಕೆಲವರ ಬದುಕಿನಲ್ಲಿ ಅನ್ಯೋನ್ಯತೆಯ ಕೊರತೆ ಕಾಡುತ್ತಿದೆ. ಸಣ್ಣ ಸಣ್ಣ ವಿಚಾರಕ್ಕೆ ದಾಂಪತ್ಯ ಮುರಿದು ಬೀಳುತ್ತಿದೆ. ಇನ್ನೂ ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಆ ನೋವು ಅನೇಕರಿಗೆ ವರ್ಷಾನುವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ.. ಪ್ರೀತಿ ಮರೆಯಲಾಗದೆ.. ಅನೇಕರು ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ಇದೆ. ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಇವತ್ತು ದೂರವಾದಷ್ಟೇ ಬೇಗ ಬೇರೆಯವರಿಗೆ ಅನೇಕರು ಹತ್ತಿರವಾಗುತ್ತಾರೆ. ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಮುಖದಲ್ಲಿ ಈ ಯಾವ ಲವಲೇಶವೂ ಕಾಣಿಸುವುದಿಲ್ಲ. ಇದಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಮತ್ತೊಂದು ಉದಾಹರಣೆ.

Amid dating rumors Hardik Pandya s ex-wife Natasa Stankovic having fun with Aleksandar Ilic in pool

ಹೌದು, ನಿಮಗೆ ಗೊತ್ತು .. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಈಗ ದೂರವಾಗಿದ್ದಾರೆ. ಮೊದಲ ನೋಟ, ಮೊದಲ ಭೇಟಿ, ಮೊದಲ ಸ್ಪರ್ಶ ಮರೆತು ಅವರ ಅವರ ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ಎರಡೆರಡು ಬಾರಿ ಮದುವೆಯಾಗಿದ್ದನ್ನೂ ಕೂಡ ಇಬ್ಬರು ಮರೆತು ಖುಷಿಯಾಗಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ನತಾಶಾ ಅವರ ವಿಡಿಯೋವೊಂದು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರ ಆಕ್ರೋಶಕ್ಕೆ ಕೂಡ ಈ ವಿಡಿಯೋ ಗುರಿಯಾಗಿದೆ.

ಅಸಲಿಗೆ ಹಾರ್ದಿಕ್ ಪಾಂಡ್ಯ ಅವರಿಂದ ನತಾಶಾ ದೂರವಾದ ನಂತರ ನತಾಶಾ ಹೆಸರು ಒಂದ್ಕಾಲದಲ್ಲಿ ಬಾಲಿವುಡ್ ನಾಯಕಿ ದಿಶಾ ಪಠಾಣಿ ಜೊತೆ ಸುತ್ತಾಡಿದ್ದ ಅಲೆಕ್ಸಾಂಡರ್ ಅಲೆಕ್ಸ್ ಜೊತೆ ಥಳುಕು ಹಾಕಿಕೊಂಡಿತ್ತು. ಇದಕ್ಕೆ ಪೂರಕವಾಗಿ ಇಬ್ಬರು ಜೊತೆ ಜೊತೆಯಾಗಿ ಓಡಾಡುವ ದೃಶ್ಯಗಳು ಕೂಡ ವೈರಲ್ ಆಗಿದ್ದವು. ಈಗ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಇದೇ ಅಲೆಕ್ಸಾಂಡರ್ ಜೊತೆ ಸ್ವಿಮಿಂಗ್‌ ಪೂಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಲಿ ಮೂಡ್‌ನಲ್ಲಿ ಗೋವಾದಲ್ಲಿ ಕಾಲ ಕಳೆದಿದ್ದಾರೆ. ತೇಲುವ ಗೊಂಬೆಯ ಮೇಲೆ ನತಾಶಾ ಕುಳಿತು ವಿರ್ಶರಾಂತಿ ಪಡೆಯುತ್ತಿರುವ ಸಮಯದಲ್ಲಿ ಅಲೆಕ್ಸಾಂಡರ್ ಹಿಂದೆಯಿಂದ ಬಂದು ನತಾಶಾ ಅವರನ್ನು ನೀರಿನಲ್ಲಿ ಕೆಡವಿದ್ದಾರೆ. ಶಾಕ್‌ನಲ್ಲಿಯೇ ಬಿದ್ದ ನತಾಶಾ ನೀರಿನಲ್ಲಿ ಬಿದ್ದು ಮುಳುಗಿ ಎದ್ದಿದ್ದಾರೆ. ನತಾಶಾ ಸ್ಟಾಂಕೋವಿಕ್ ಮತ್ತು ಅಲೆಕ್ಸಾಂಡರ್ ಅಲೆಕ್ಸ್ ಅವರ ಈ ಮೋಜು ಮಸ್ತಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಚರ್ಚೆಯನ್ನು ಹುಟ್ಟು ಹಾಕಿದೆ.

Amid dating rumors Hardik Pandya s ex-wife Natasa Stankovic having fun with Aleksandar Ilic in pool

ನತಾಶಾ ಮತ್ತು ಅಲೆಕ್ಸಾಂಡರ್ ಅವರ ಈ ಈಜುಕೋಳದ ವಿಡಿಯೋವನ್ನು ನೋಡಿದ ಅನೇಕರು, ಹಾರ್ದಿಕ್ ಪಾಂಡ್ಯ ಪರ ಬ್ಯಾಟ್ ಬೀಸಿದ್ದಾರೆ. ನಿಮ್ಮ ನೋವು ನಮಗೆ ಅರ್ಥವಾಗುತ್ತೆ ನಾವು ನಿಮ್ಮ ಪರ ಇದ್ದೇವೆ ಎಂದು ಕಾಮೆಂಟ್ ಮಾಡುವ ಮೂಲಕ ಅನೇಕರು ಸಾಂತ್ವಾನ ಹೇಳಿದ್ದಾರೆ. ಕೆಲವರು ಗಂಡ ಹೆಂಡತಿ ದೂರವಾಗಲು ಈ ಅಲೆಕ್ಸಾಂಡರ್ ಪ್ರಮುಖ ಕಾರಣ ಎಂದಿದ್ದಾರೆ. ಇನ್ನೂ ಕೆಲವರು ನತಾಶಾ ಅವರನ್ನು ಕೆಟ್ಟಾ ಕೊಳಕಾಗಿ ನಿಂದಿಸಿದ್ದಾರೆ. ಮಾತನಾಡಬಾರದ ಮಾತುಗಳನ್ನೆಲ್ಲ ಆಡಿದ್ದಾರೆ. ಮತ್ತೂ ಕೆಲವರು ಹಾರ್ದಿಕ್ ಪಾಂಡ್ಯ ಮೂಲೆಯಲ್ಲಿ ನಿಂತು ಕಣ್ಣೀರು ಹಾಕುತ್ತಿರಬಹುದು ಎಂದು ಹೇಳಿದ್ದಾರೆ.

ಅಂದ್ಹಾಗೇ ಅಲೆಕ್ಸಾಂಡರ್ ಅಲೆಕ್ಸ್ ಮೂಲ ಕೂಡ ಸೆರ್ಬಿಯಾದಲ್ಲಿದೆ. ಇನ್ನೂ ಈ ವ್ಯಕ್ತಿ ನತಾಶಾ ಅವರ ಜಿಮ್ ಟ್ರೇನರ್ ಕೂಡ ಹೌದು. ಈ ಹಿನ್ನೆಲೆ ನತಾಶಾ ಅನೇಕ ಬಾರಿ ಅಲೆಕ್ಸಾಂಡರ್ ನನ್ನ ಸಹೋದರನಂತೆ ಎಂದು ಈ ಹಿಂದೆ ಹೇಳಿದ್ದಾರೆ. ಹೀಗಾಗಿ ನತಾಶಾ ಪರವಾಗಿ ಕೂಡ ಬೆಂಬಲದ ಧ್ವಜವನ್ನು ಹಾರಿಸಿರುವ ಕೆಲವರು ಅವರ ಇಬ್ಬರ ನಡುವೆ ಇರುವುದು ಅಕ್ಕ-ತಮ್ಮನ ಸಂಬಂಧ ಸುಖಾ ಸುಮ್ಮನೆ ವಿಷಯ ಗೊತ್ತಿಲ್ಲದೇ ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X