"ನನ್ನ ತಮನ್ನಾ ಜೊತೆ ನೀನು ಸುತ್ತಾಡುತ್ತಿದ್ದಿಯಾ?" ವಿಜಯ್ ವರ್ಮಾ ಬಗ್ಗೆ ಗುಲ್ಷನ್ ಕಾಮೆಂಟ್ ಫುಲ್ ವೈರಲ್

ನಟಿ ತಮನ್ನಾ ಹಾಗೂ ನಟ ವಿಜಯ್ ವರ್ಮಾ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ ಗಲ್ಲಿಗಳಲ್ಲಿ ಗುಲ್ಲಾಗಿದೆ. ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ಜೋಡಿ ಡಿನ್ನರ್ ಪಾರ್ಟಿಗೆ ಒಂದೇ ಕಾರಿನಲ್ಲಿ ಹೋಗಿದ್ದು ಸುದ್ದಿಯಾಗಿತ್ತು. ಇಬ್ಬರ ಎಂಗೇಜ್‌ಮೆಂಟ್‌ಗೆ ಸಿದ್ದತೆ ನಡೀತಿದೆ ಅನ್ನುವ ಗುಸುಗುಸು ಶುರುವಾಗಿತ್ತು. ಇದೀಗ ಇವರ ರಿಲೇಷನ್‌ಶಿಪ್‌ ಬಗ್ಗೆ ಮತ್ತೊಬ್ಬ ನಟ ಕಾಮೆಂಟ್ ಮಾಡಿದ್ದಾರೆ.

ಹೊಸ ವರ್ಷದ ಸಂಭ್ರಮದ ಪಾರ್ಟಿಯಲ್ಲಿ ವಿಜಯ್- ತಮನ್ನಾ ಲಿಪ್‌ಲಾಕ್‌ ಮಾಡಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿತ್ತು. ಅಲ್ಲಿಂದ ಇಬ್ಬರ ಲವ್ವಿ ಡವ್ವಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು. ಆದರೆ ಇಬ್ಬರು ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ತಮನ್ನಾ ಪರೋಕ್ಷವಾಗಿ ಅದೆಲ್ಲಾ ಸುಳ್ಳು ಎಂದಿದ್ದರು. ಆದರೆ ಮೊನ್ನೆ ಒಟ್ಟಗೆ ಕಾರಿನಲ್ಲಿ ಜೋಡಿ ಸುತ್ತಾಡಿದ ವಿಡಿಯೋ ವೈರಲ್ ಆದಮೇಲೆ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಚರ್ಚೆ ಹೆಚ್ಚಾಯಿತು.

Amid dating rumours, Tamannaah Bhatia and Vijay Varma; actor Gulshan Devaiah hints with his comment

ಇವರಿಬ್ಬರ ರಿಲೇಷನ್‌ಶಿಪ್‌ ಬಗ್ಗೆ ನಟ ಗುಲ್ಷನ್ ದೇವಯ್ಯ ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ ಎನ್ನಲಾಗ್ತಿದೆ. ವಿಜಯ್ ವರ್ಮಾ ನಟನೆಯ 'ದಾಹದ್‌' ವೆಬ್‌ ಸೀರಿಸ್ ಟೀಸರ್ ರಿಲೀಸ್ ಆಗಿದೆ. ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ನಟ ಗುಲ್ಷನ್, "ನನ್ನ ತಮನ್ನಾ ಜೊತೆ ನೀನು, ನನಗೆ ಸರಿಯಾಗಿ ಬುದ್ದಿ ಹೇಳ್ದೆ ಬಿಡು ವಿಜಯ್. ಪುಣ್ಯ ನನ್ನ ಮರ್ಯಾದೆ ತೆಗೆಯಲಿಲ್ಲ ಧನ್ಯವಾದ. ಇಲ್ಲ ಅಂದಿದ್ರೆ ಏನೇನು ಆಗ್ತಿತ್ತೋ, ಹೇ ರಾಮ್' ಎಂದು ಬರೆದುಕೊಂಡಿದ್ದಾರೆ.

ತಮನ್ನಾ ಪದದ ಅರ್ಥ, ಆಸೆ, ಭರವಸೆ ಎಂದಾಗುತ್ತದೆ. 'ದಾಹದ್‌' ವೆಬ್‌ ಸೀರಿಸ್‌ನಲ್ಲಿ ವಿಜಯ್ ವರ್ಮಾ ಜೊತೆ ಗುಲ್ಷನ್ ದೇವಯ್ಯ ಕೂಡ ಬಣ್ಣ ಹಚ್ಚಿದ್ದಾರೆ. ಹಾಗಾಗಿ ಟೀಸರ್ ಬಗ್ಗೆ ಹೇಳುತ್ತಾ? ಈ ರೀತಿ ಫನ್ನಿಯಾಗಿ ವಿಜಯ್ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಇನ್ನು ಈ ಕಾಮೆಂಟ್‌ಗೆ ವಿಜಯ್ ವರ್ಮಾ ಕೂಡ ರಿಪ್ಲೇ ಮಾಡಿದ್ದಾರೆ. 'ಒನ್‌ಸೈಡ್ ಲವ್ ಕೂಡ ಲವ್‌ ಆಗುತ್ತೆ' ಎಂದು ಬರೆದುಕೊಂಡಿದ್ದಾರೆ. ಸದ್ಯ ಇವರಿಬ್ಬರ ಈ ಇನ್‌ಸ್ಟಾ ಸಂಭಾಷಣೆ ಸಖತ್ ವೈರಲ್ ಆಗುತ್ತಿದೆ.

ಗುಲ್ಷನ್ ದೇವಯ್ಯ ಫನ್ನಿಯಾಗಿ ಕಾಮೆಂಟ್ ಮಾಡುವ ಮೂಲಕ ಪರೋಕ್ಷವಾಗಿ ತಮನ್ನಾ- ವಿಜಯ್ ರಿಲೇಷನ್‌ಶಿಪ್‌ ಬಗ್ಗೆ ಹಿಂಟ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದೆ ಎನ್ನುವ ಗುಸುಗುಸು ಶುರುವಾಗಿದೆ. 'ದಾಹದ್‌' ವೆಬ್‌ ಸೀರಿಸ್‌ನಲ್ಲಿ ಸೋನಾಕ್ಷಿ ಸಿನ್ಹಾ ಇನ್ಸ್‌ಪೆಕ್ಟರ್ ಅಂಜಲಿ ಭಾಟಿ ಆಗಿ ಬಣ್ಣಹಚ್ಚಿದ್ದಾರೆ. ಗುಲ್ಷನ್ ಕೂಡ ಪೊಲೀಸ್ ಆಫೀಸರ್‌ ರೋಲ್‌ನಲ್ಲಿ ಮಿಂಚಿದ್ದಾರೆ. ಆದರೆ ವಿಜಯ್ ವರ್ಮಾ ನೆಗೆಟಿವ್ ರೋಲ್‌ನಲ್ಲಿ ನಟಿಸಿರುವಂತೆ ಕಾಣುತ್ತಿದೆ.

ಇದೊಂದು ಇನ್ವೆಸ್ಟಿಗೇಷನ್ ಥ್ರಿಲ್ಲರ್ ವೆಬ್ ಸೀರಿಸ್. ಸಾಲು ಸಾಲು ಮಹಿಳೆಯರ ಶವಗಳು ಪಬ್ಲಿಕ್ ಬಾತ್‌ರೂಮ್‌ನಲ್ಲಿ ಸಿಗಲು ಶುರುವಾಗುತ್ತದೆ. ಮೊದಲಿಗೆ ಇದು ಆತ್ಮಹತ್ಯೆ ಅನಿಸಿದರೂ ನಿಧಾನವಾಗಿ ಇದು ಸೀರಿಯಲ್ ಕಿಲ್ಲರ್ ಕೆಲಸ ಅನ್ನೋದು ಗೊತ್ತಾಗುತ್ತದೆ. ಮುಂದೇನು ಅನ್ನೋದು ಕಥೆ. ಇನ್ನು ತಮನ್ನಾ - ವಿಜಯ್ ವರ್ಮಾ 'ಲಸ್ಟ್ ಸ್ಟೋರಿಸ್- 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಶೂಟಿಂಗ್‌ನಲ್ಲೇ ಇಬ್ಬರ ಪರಿಚಯ, ಸ್ನೇಹ ಶುರುವಾಯಿತು ಎನ್ನಲಾಗ್ತಿದೆ.

ಇನ್ನು ಕೆಲ ದಿನಗಳ ಹಿಂದೆ ತಮನ್ನಾನ ಮುದ್ದಾಗಿ ವಿಜಯ್ 'ಟೊಮೆಟೊ' ಎಂದು ಕರೆದು ಮಾಡಿದ್ದ ಪೋಸ್ಟ್ ವೈರಲ್ ಆಗಿತ್ತು. ಇದೀಗ ಗುಲ್ಷನ್ ದೇವಯ್ಯ ಕಾಮೆಂಟ್ ಇಬ್ಬರ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುಳಿವು ನೀಡುತ್ತಿದೆ. ಇದಕ್ಕೆಲ್ಲಾ ಅವರಿಬ್ಬರೇ ಉತ್ತರ ನೀಡಬೇಕಿದೆ.

More from Filmibeat

English summary
Amid dating rumours, Tamannaah Bhatia and Vijay Varma; actor Gulshan Devaiah hints with his comment. Gulshan Devaiah teased Vijay Varma in instagram. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X