ಐಶ್ವರ್ಯ ರೈಗೋಸ್ಕರ ತಮ್ಮ ಹೆತ್ತವರಿಂದ ದೂರವಾಗುತ್ತಾರಾ ಅಭಿಷೇಕ್ ಬಚ್ಚನ್, ಹೊಸ ಮನೆ ಖರೀದಿಸಿದ್ದೇಕೆ..?

ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ.

ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಕಳೆದ ಕೆಲ ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಸಾಂಸಾರಿಕ ಜೀವನ ಚರ್ಚೆಯಲ್ಲಿದೆ. ಇಬ್ಬರು ದೂರವಾಗುವುದು ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ.

Amid divorce rumors Abhishek and Aishwarya are reportedly considering moving out with Aaradhya

ಯಾವುದು ಸತ್ಯ ಯಾವುದು ಮಿಥ್ಯ ಎನ್ನುವುದು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರಿಗೆ ಗೊತ್ತಾದರೂ, ಐಶ್ವರ್ಯ ರೈ ಜೊತೆ ಬದುಕಲು ಅಭಿಷೇಕ್ ಬಚ್ಚನ್ ತಮ್ಮ ಹೆತ್ತವರಿಂದ ದೂರವಾಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಹಬ್ಬಿದೆ.

ಹೌದು, ಅಸಲಿಗೆ ಅಭಿಷೇಕ್ ಬಚ್ಚನ್ ಇತ್ತೀಚೆಗೆ ಬೊರಿವಿಲ್ಲಿ ಪ್ರದೇಶದಲ್ಲಿ ಇರುವ ಒಬೇರಾಯ್ ಸ್ಕೈ ಪ್ರಾಜೆಕ್ಟ್‌ನಲ್ಲಿ ಆರು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ. ಅದರಲ್ಲಿ ಹೊಸದೇನು ಇಲ್ಲ. ಯಾಕೆಂದರೆ ದುಡ್ಡು ಇರುವ ವ್ಯಕ್ತಿ ತಮಗೆ ಬೇಕಾದಂತೆ ಮನೆಯನ್ನು ತಗೆದುಕೊಂಡಿದ್ದಾರೆ. ಹೀಗಾಗಿ ಅದರಲ್ಲಿ ಅಚ್ಚರಿ ಪಡುವಂತಹದ್ದು ಏನಿಲ್ಲವಾದರೂ ಇತ್ತೀಚೆಗೆ ಅಮಿತಾಬ್ ಬಚ್ಚನ್ ತಮ್ಮ ಇನ್ನೊಂದು ಮನೆ ಪ್ರತೀಕ್ಷಾನ ತಮ್ಮ ಮಗಳಾದ ಶ್ವೇತಾ ಹೆಸರಿಗೆ ಈಗಾಗಲೇ ವರ್ಗಾವಣೆ ಮಾಡಿದ್ದಾರೆ. ಈ ಕಾರಣಕ್ಕೆ ಅಮಿತಾಬ್ ಮತ್ತು ಜಯಾ ಜಲ್ಸಾದಲ್ಲಿನ ತಮ್ಮ ಮನೆಗೆ ಶಿಫ್ಟ್ ಆಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು ಅಭಿಷೇಕ್ ತಮ್ಮ ಮಗಳು ಮತ್ತು ಪತ್ನಿಯ ಜೊತೆ ಇರಲು ಜಲ್ಸಾದಿಂದ ಹೊರ ನಡೆಯಲಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಬಲವಾಗಿ ಕೇಳಿ ಬರುತ್ತಿದೆ.

Amid divorce rumors Abhishek and Aishwarya are reportedly considering moving out with Aaradhya

ಇದಕ್ಕೆ ಪೂರಕವಾಗಿ ಐಶ್ವರ್ಯ ರೈ ಬಚ್ಚನ್ ಅಭಿಷೇಕ್ ಬಚ್ಚನ್ ಅವರ ಜಲ್ಸಾ ಮನೆಯಿಂದ ಹೊರ ಬಂದು ತುಂಬಾ ದಿನಗಳಾಗಿವೆ. ಅಪರೂಪಕ್ಕೆ ಐಶ್ವರ್ಯ ತಮ್ಮ ಮಗಳ ಜೊತೆ ಈ ಮನೆಗೆ ತೆರಳುತ್ತಾರೆ. ಕೆಲ ಹೊತ್ತು ಅಲ್ಲಿದ್ದು ಆ ನಂತರ ಜಲ್ಸಾದ ಆವರಣದಿಂದ ಹೊರ ಬರುತ್ತಾರೆ. ಅಭಿಷೇಕ್ ಮತ್ತು ಐಶ್ವರ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಅನುಮಾನ ಎಲ್ಲರಲ್ಲಿ ಬರಲು ಐಶ್ವರ್ಯ ರೈ ಅವರ ಈ ನಡೆ ಪ್ರಮುಖ ಕಾರಣಗಳಲ್ಲೊಂದು.

ಆದರೆ ಈಗ ಖುದ್ದು ಅಭಿಷೇಕ್ ಬಚ್ಚನ್ ಜಲ್ಸಾ ಮನೆಯಿಂದ ಹೊರ ಬರುವ ತೀರ್ಮಾನವನ್ನು ತೆಗೆದುಕೊಂಡಂತೆ ಇದೆ. ಅಭಿಷೇಕ್ ಬಚ್ಚನ್ ಹೊಚ್ಚ ಹೊಸ ಮನೆಯನ್ನು ಖರೀದಿ ಮಾಡಿದ ಬೆನ್ನಲ್ಲಿಯೇ ಅನುಮಾನ ಕೂಡ ಹೆಚ್ಚಾಗಿದೆ. ತಮ್ಮ ತಂದೆ ಅಮಿತಾಬ್ ಬಚ್ಚನ್ ಮತ್ತು ತಾಯಿ ಜಯಾ ಬಚ್ಚನ್ ಅವರಿಂದ ದೂರವಾಗಿ ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಐಶ್ವರ್ಯ ಜೊತೆ ಪ್ರತೈಕವಾಗಿ ವಾಸ ಮಾಡುತ್ತಾರಾ ಅನ್ನುವ ಪ್ರಶ್ನೆಯನ್ನು ಕೂಡ ಅಭಿಷೇಕ್ ಬಚ್ಚನ್ ಅವರ ಈ ನಡೆ ಹುಟ್ಟು ಹಾಕಿದೆ.

ನಿಜಾ ಏನು ಎನ್ನುವುದು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈಗೆ ಗೊತ್ತಾದರೂ ಸದ್ಯಕ್ಕೆ ಬೆಂಕಿ ಇಲ್ಲದೆ ಹೊಗೆಯಾಡಲ್ಲ ಎಂಬಂತೆ ಇಬ್ಬರ ನಡಾವಳಿ ಕೆಲ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅಭಿಷೇಕ್ ಬಚ್ಚನ್ ಅವರ ಜಲ್ಸಾ ನಿವಾಸದ ಮೇಲೀಗ ಮುಂಬೈನಲ್ಲಿ ಒಂದು ವರ್ಗ ಕಣ್ಣಿಟ್ಟಿದೆ. ನಿಜಕ್ಕೂ ಅಭಿಷೇಕ್ ಬಚ್ಚನ್ ಜಲ್ಸಾದಿಂದ ಹೊರ ಬಂದು ಪತ್ನಿ ಐಶ್ವರ್ಯ ಜೊತೆ ಪ್ರತೈಕವಾಗಿ ಇರುತ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X