ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಬಂದ ಡಾ.ಜಿರಾಕ್ ಮಾರ್ಕರ್ ಯಾರು, ಹೇಗೆ ಪರಿಚಯ..?
ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಕಳೆದ ಕೆಲ ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಸಾಂಸಾರಿಕ ಜೀವನ ಚರ್ಚೆಯಲ್ಲಿದೆ. ಇಬ್ಬರು ದೂರವಾಗುವುದು ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ. ಹರಿದಾಡುತ್ತಿರುವ ಈ ಸುದ್ದಿಯಲ್ಲಿನ ಸತ್ಯಾಸತ್ಯತೆ ಅಭಿಷೇಕ್ ಮತ್ತು ಐಶ್ವರ್ಯ ಅವರಿಗೆ ಗೊತ್ತಾದರೂ ಸದ್ಯಕ್ಕೆ ಈ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಲು ವೈದ್ಯರೊಬ್ಬರು ಕಾರಣ ಎಂಬ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು, ಗಂಡ-ಹೆಂಡ್ತಿಯ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿರುವ ಸಮಯದಲ್ಲಿಯೇ, ಇಬ್ಬರು ದೂರವಾಗಲು ಡಾ. ಜಿರಾಕ್ ಮಾರ್ಕರ್ ಕಾರಣ ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು, ಡಾ.ಜಿರಾಕ್ ಮಾರ್ಕರ್ ಮತ್ತು ಐಶ್ವರ್ಯ ರೈ ಅವರ ಫೋಟೋಗಳನ್ನು ಹೆಕ್ಕಿ ತೆಗೆದು ವೈರಲ್ ಮಾಡುತ್ತಿದ್ದಾರೆ. ಡಾ.ಜಿರಾಕ್ ಮಾರ್ಕರ್ ಅವರ ಜಾತಕ ಜಾಲಾಡುತ್ತಿದ್ದಾರೆ.
ಅದರ ಪ್ರಕಾರ ನೋಡುವುದಾದರೆ ಡಾ.ಜಿರಾಕ್ ಮಾರ್ಕರ್ ಮುಂಬೈನಲ್ಲಿ ಮಕ್ಕಳ ವೈದ್ಯರಾಗಿ ಹೆಸರುವಾಸಿಯಾಗಿರುವ ಡಾ.ಜಿರಾಕ್ ಮಾರ್ಕರ್, ಹದಿಹರೆಯದವರು ಎದುರಿಸುತ್ತಿರುವ ವಿವಿಧ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುತ್ತಾರೆ. ಇದಲ್ಲದೇ ಆದಿತ್ಯ ಬಿರ್ಲಾ ಇಂಟಿಗ್ರೇಟೆಡ್ ಸ್ಕೂಲ್‌ನಲ್ಲಿ ವೈದ್ಯಕೀಯ ನಿರ್ದೇಶಕರಾಗಿದ್ದಾರೆ. ಇಷ್ಟೇ ಅಲ್ಲ ನೀರ್ಜಾ ಮತ್ತು ಅನನ್ಯಾ ಬಿರ್ಲಾ ಪ್ರಾರಂಭ ಮಾಡಿದ ಮಾನಸಿಕ ಯೋಗ ಕ್ಷೇಮ ಉತ್ತೇಜಿಸುವ M POWER ನ ಹಿರಿಯ ವೈದ್ಯ ಮತ್ತು ಸಲಹೆಗಾರರು ಹೌದು ಡಾ.ಜಿರಾಕ್ ಮಾರ್ಕರ್.

ಇನ್ನೂ.. ಐಶ್ವರ್ಯ ರೈ ಅವರಿಗೆ ಡಾ.ಜಿರಾಕ್ ಮಾರ್ಕರ್ ಇಂದು ನಿನ್ನೆ ಆಪ್ತರಾದವರಲ್ಲ. ಇವರ ಇಬ್ಬರ ಸ್ನೇಹಕ್ಕೆ ವರ್ಷಾನುವರ್ಷಗಳ ಕಾಲದ ಇತಿಹಾಸ ಇದೆ. ಕೇವಲ ಡಾ ಜಿರಾಕ್ ಮಾರ್ಕರ್ ಮಾತ್ರ ಅಲ್ಲ ಇವರ ಪತ್ನಿ ಪ್ರಿಯಾ ಕೂಡ ಐಶ್ವರ್ಯ ರೈಗೆ ಅವರಿಗೆ ತುಂಬಾನೇ ಆಪ್ತರು. ಇದಕ್ಕೆ ಕೈಗನ್ನಡಿ ಎಂಬಂತೆ ಡಾ.ಜಿರಾಕ್ ಮಾರ್ಕರ್-ಪ್ರಿಯಾ ಮತ್ತು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಜೊತೆಯಲ್ಲಿಯೇ ಪ್ರವಾಸಕ್ಕೆ ತೆರಳಿದ್ದು ಇದೆ. ರಜಾ ದಿನಗಳನ್ನು ಜೊತೆಯಲ್ಲಿ ಮಜಾ ಮಾಡಿದ್ದು ಇದೆ.
ಇನ್ನೂ.. ಹಿಂದೊಮ್ಮೆ ಡಾ.ಜಿರಾಕ್ ಮಾರ್ಕರ್ 'Parenting In The Age Of Anxiety' ಎಂಬ ಪುಸ್ತಕವನ್ನು ಬರೆದಿದ್ದರು. ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೂ ಅತಿಥಿಯಾಗಿ ಬಂದಿದ್ದ ಐಶ್ವರ್ಯ ರೈ ಇದೇ ಸಮಯದಲ್ಲಿ ವೇದಿಕೆ ಮೇಲೆ ಡಾ.ಜಿರಾಕ್ ಕೆನ್ನೆಗೆ ಮುತ್ತಿಕ್ಕಿದ್ದರು. ಅವತ್ತು ಐಶ್ವರ್ಯ ನೀಡಿದ್ದ ಈ ಮುತ್ತು ಈಗ ಚರ್ಚೆಯ ವಿಷಯವಾಗಿದೆ.


Click it and Unblock the Notifications











