ಐಶ್ವರ್ಯ ರೈಯಿಂದ ದೂರವಾಗುವ ಸುಳಿವು ನೀಡಿದ ಅಭಿಷೇಕ್ ಬಚ್ಚನ್..?
ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು.
ಇನ್ನೂ .. ಮದುವೆಯಾಗಿದ್ದರಂತೂ ಮುಗಿದೇ ಹೋಯ್ತು. ಜೊತೆಯಲ್ಲಿ ಓಡಾಡಿದರೂ .. ಓಡಾಡದೇ ಇದ್ದರೂ .. ಹತ್ತಾರು ಮಾತು ಕೇಳಿ ಬರುತ್ತಾನೇ ಇರ್ತಾವೆ. ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ.ಹೀಗಾಗಿಯೇ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬರಬಹುದು ಎಂದು ಕಾಯುವ ಅನೇಕರು ಈಗ ಅಭಿಷೇಕ್ ಬಚ್ಚನ್ ಅವರ ಒಂದು ನಡೆಯಿಂದ ಚರ್ಚೆಯನ್ನು ಮತ್ತೊಮ್ಮೆ ಶುರು ಮಾಡಿದ್ದಾರೆ.

ಹೌದು, ಅಸಲಿಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಅನುಮಾನ ಅನೇಕರಲ್ಲಿದೆ. ಇದಕ್ಕೆ ಪೂರಕವಾಗಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಪ್ರತೈಕವಾಗಿ ವಾಸ ಮಾಡುತ್ತಿದ್ದಾರೆ ಅನ್ನುವ ಮಾತು ಇದೆ.
ಇನ್ನೂ.. ಮೊನ್ನೆ..ಮೊನ್ನೆ.. ನಡೆದ ಅಂಬಾನಿ ಮಗನ ಮದುವೆಯಲ್ಲಿ ಕೂಡ ಅಭಿಷೇಕ್ ಬಚ್ಚನ್ ತಮ್ಮ ಹೆಂಡತಿ ಐಶ್ವರ್ಯ ರೈ ಅವರ ಜೊತೆ ಕಾಣಿಸಿಕೊಳ್ಳಲಿಲ್ಲ. ಬಚ್ಚನ್ ಫ್ಯಾಮಿಲಿ ಜೊತೆ ಐಶ್ವರ್ಯ ರೈ ಈ ಮದುವೆ ಸಮಾರಂಭಕ್ಕೆ ಬರಲಿಲ್ಲ. ಜೊತೆಯಲ್ಲಿ ಮನೆ ಕಡೆ ಹೆಜ್ಜೆಯನ್ನೂ ಹಾಕಲಿಲ್ಲ.

ಅಭಿಷೇಕ್ ಮತ್ತು ಐಶ್ವರ್ಯ ಅವರ ಈ ಪ್ರತ್ಯೇಕತೆಯ ಭಾವನೆಯಿಂದ, ಮೊನ್ನೆಯೆಲ್ಲ ಇವರ ಅಭಿಮಾನಿಗಳಲ್ಲಿ ಇವರು ಇಬ್ಬರು ಬೇರ್ಪಡುವ ಆತಂಕ ಹೆಚ್ಚಾಗಿತ್ತು. ಅನೇಕರಲ್ಲಿದ್ದ ಅನುಮಾನ ಇನ್ನೂ ಹೆಚ್ಚಾಗಿತ್ತು. ಇದೀಗ ಈ ಅನುಮಾನ ಇನ್ನೂ ಹೆಚ್ಚಾಗುವಂತೆ, ಅಭಿಷೇಕ್ ಬಚ್ಚನ್ ವಿಚ್ಛೇದನದ ಕುರಿತು ಬರೆಯಲಾದ ಬರಹವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಇಷ್ಟ ಪಟ್ಟಿದ್ದಾರೆ.
ಹೌದು. ಲೇಖಕಿ ಹೀನಾ ಖಂಡೇವಾಲ ಡಿವೋರ್ಸ್ಗೆ ಸಂಬಂಧಿಸಿದ ಬರಹವೊಂದನ್ನು ಹಂಚಿಕೊಂಡಿದ್ದಾರೆ. 'ಡಿವೋರ್ಸ್ ಯಾರಿಗೂ ಸುಲಭ ಅಲ್ಲ. ಕೆಲವೊಮ್ಮೆ ನಾವು ನಿರೀಕ್ಷಿಸಿದಂತೆ ಜೀವನ ನಡೆಸಲು ಆಗಲ್ಲ. ಆದರೆ ದಶಕಗಳ ನಂತರ ಜೊತೆ ಇದ್ದವರು ಬೇರ್ಪಟ್ಟಾಗ, ದೊಡ್ಡ ಮತ್ತು ಸಣ್ಣ ವಿಷಯಗಳಿಗೆ ಪರಸ್ಪರ ಅವಲಂಬಿತರಾದವರು ಆ ನಂತರ ತಮ್ಮ ಜೀವನವನ್ನು ಹೇಗೆ ನಿಭಾಯಿಸುತ್ತಾರೆ..? ಯಾವುದರಿಂದ ಪ್ರೇರೆಪಿತಗೊಂಡು ಅವರು ತಮ್ಮ ಸಂಬಂಧಗಳನ್ನು ಕಡಿದುಕೊಳ್ಳಲು ಮುಂದಾಗುತ್ತಾರೆ, ಅವರು ಯಾವ ಸವಾಲುಗಳನ್ನು ಎದುರಿಸುತ್ತಾರೆ..? ಈ ಕಥೆಯು ಈ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ' ಎಂದು ಹೀನಾ ಖಂಡೇವಾಲ ಬರೆದುಕೊಂಡಿದ್ದಾರೆ.

ಹೀನಾ ಖಂಡೇವಾಲ ಅವರ ಈ ಬರಹವನ್ನು ಅಭಿಷೇಕ್ ಬಚ್ಚನ್ ಲೈಕ್ ಮಾಡಿದ್ದಾರೆ. ಹೀಗಾಗಿಯೇ ಕೆಲವರು ಆಶ್ಚರ್ಯಗೊಂಡರೆ, ಮತ್ತು ಕೆಲವರು ಇದು ನಿರೀಕ್ಷಿತ ಬೆಳವಣಿಗೆ ಎನ್ನುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಬದುಕು ಮತ್ತೊಂದು ಮಗ್ಗುಲಿನತ್ತ ಹೊರಳಲಿದೆ ಎಂದು ಕೆಲವರು ಊಹಿಸಿದರೆ, ಇನ್ನೂ ಕೆಲವರು ಈ ಪೋಸ್ಟ್ ನ ಮೆಚ್ಚಿಕೊಳ್ಳುವ ಮೂಲಕ ಅಭಿಷೇಕ್ ಬಚ್ಚನ್ ತಮ್ಮ ವಿಚ್ಛೇದನದ ಸುಳಿವನ್ನು ನೀಡಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ತಮ್ಮ ನಡುವೆ ಅನ್ಯೋನ್ಯತೆಯ ಕೊರತೆ ಇದೆ ಎಂಬ ಸಂದೇಶವನ್ನು ಅಭಿಷೇಕ್ ಬಚ್ಚನ್ ನೀಡುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ಧಾರೆ


Click it and Unblock the Notifications











