ಹಾರ್ದಿಕ್ ಪಾಂಡ್ಯ ಜೊತೆ ವಿಚ್ಛೇದನ ; ಟ್ವಿಸ್ಟ್ ಕೊಟ್ಟ ಸರ್ಬಿಯಾದ ಸುಂದರಿ ನತಾಶ...!
ಹೇಳಿ ಕೇಳಿ ಇದು ಬಣ್ಣದ ಲೋಕ. ಅರ್ಧ ಸತ್ಯ ಉಳಿದಿದ್ದೆಲ್ಲ ಮಿಥ್ಯ. ಇದಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ನತಾಶ ಅವರ ವಿರಸ .. ವಿರಹ .. ವಿಷಾದ .. ಮತ್ತು ವಿಚ್ಛೇದನದ ವದಂತಿ ತಾಜಾ ಉದಾಹರಣೆ.
ಹೌದು. ಕಳೆದ 15-20 ದಿನಗಳಿಂದ ಹಾರ್ದಿಕ್ ಪಾಂಡ್ಯ ಮತ್ತು ನತಾಶ ಸಂಬಂಧದ ಕುರಿತು ಎಲ್ಲರಲ್ಲಿ ಪ್ರಶ್ನಾರ್ಥಕ ಚಿಹ್ನೆ ಇತ್ತು. ಹಾರ್ದಿಕ್ ಪಾಂಡ್ಯಗೆ ನತಾಶ ವಿಚ್ಛೇದನ ಕೊಡಲಿದ್ದಾರೆ ಅನ್ನುವ ಸುದ್ದಿ ದಶದಿಕ್ಕುಗಳಲ್ಲಿ ಕೇಳಿ ಬಂದಿತ್ತು. ಯಾಕೆಂದರೆ .. ಸೆರ್ಬಿಯನ್ ಸುಂದರಿ ನತಾಶ, ಹಾರ್ದಿಕ್ ಪಾಂಡ್ಯ ಜೊತೆ ಕ್ಲಿಕಿಸಿಕೊಂಡ ಭಾವ ಚಿತ್ರಗಳನ್ನೆಲ್ಲ ತಮ್ಮ ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಿದ್ದರು. ಇವರಿಬ್ಬರ ಮದುವೆಯ ಫೋಟೋಗಳು ಕೂಡ ಕಣ್ಮರೆಯಾಗಿದ್ದವು.

ಈ ಕಾರಣಕ್ಕೆ ಗಂಡ-ಹೆಂಡ್ತಿ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದೇ ಎಲ್ಲರೂ ಅಂದುಕೊಂಡರು. ಅಪ್ಪಿ-ತಪ್ಪಿ ನತಾಶ ಅವರಿಂದ ಹಾರ್ದಿಕ್ ಪಾಂಡ್ಯ ದೂರವಾಗಿದ್ದೇ ಆದಲ್ಲಿ ಹಾರ್ದಿಕ್ ಪಾಂಡ್ಯಗೆ ಆಗುವ ನಷ್ಟವನ್ನ ಲೆಕ್ಕ ಹಾಕಿದರು. ಹಾರ್ದಿಕ್ ಪಾಂಡ್ಯ ತನ್ನ ಮುದ್ದಾದ ಪತ್ನಿಗೆ ತಮ್ಮ ಆಸ್ತಿಯಲ್ಲಿ ಶೇಕಡಾ 70 % ರಷ್ಟು ಪಾಲು ನೀಡಬೇಕಾಗುತ್ತೆ ಎಂದು ಚರ್ಚೆಯನ್ನೂ ಮಾಡಿದರು. ಹಾರ್ದಿಕ್ ಪಾಂಡ್ಯ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಅನೇಕರು ಸಾಂತ್ವಾನವನ್ನೂ ಹೇಳಿದರು.
ಆದರೆ .. ಇಷ್ಟೆಲ್ಲ ಮಾಡಿದ್ದು ಈಗ ವ್ಯರ್ಥವಾಗಿದೆ. ಯಾಕೆಂದರೆ ವಿಚ್ಛೇದನದ ವದಂತಿಯ ನಡುವೆ ಹಾರ್ದಿಕ್ ಪಾಂಡ್ಯ ಅವರ ವೈಫ್ ನತಾಶ ತಮ್ಮ ಗಂಡನ ಜೊತೆಯಿರುವ ಎಲ್ಲ ಹಳೆಯ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ರೀಸ್ಟೋರ್ ಮಾಡಿದ್ದಾರೆ. ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿದ್ದ ಆ ಕಾಲದ ಕ್ಷಣಗಳನ್ನೆಲ್ಲ ನತಾಶ ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಮರುಸ್ಥಾಪಿಸಿದ್ದಾರೆ.
ಕೇವಲ ಫೋಟೋಗಳಷ್ಟೇ ಅಲ್ಲ ಹಾರ್ದಿಕ್ ಪಾಂಡ್ಯ ಜೊತೆ ಮಾಡಿದ್ದ ರೀಲ್ಸ್ ಕೂಡ ಮತ್ತೆ ನತಾಶ ಅವರ ಇನ್ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡಿವೆ. ಸದ್ಯಕ್ಕೆ ನತಾಶ ನೀಡಿದ ಈ ಟ್ವಿಸ್ಟ್ ಗೆ ಸೋಶಿಯಲ್ ಮೀಡಿಯಾದಲ್ಲಿ ಥರೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕೆಲವರು ಇದೆಲ್ಲ ಪಬ್ಲಿಸಿಟಿ ಗಿಮಿಕ್ ಎಂದರೆ, ಇನ್ನೂ ಕೆಲವರು ಇಬ್ಬರ ನಡುವೆ ಹಣಕಾಸಿನ ವಿಚಾರ ಇತ್ಯರ್ಥವಾದಂತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ಅಂತೆ-ಕಂತೆಯ ಮಾತು ಕೇಳಿ ಬಂದರೂ ಕೂಡ ಮೌನ ಮುರಿಯದೇ ಇದ್ದಿದ್ದಕ್ಕೆ ಹಾರ್ದಿಕ್ ಮತ್ತು ನತಾಶ ಅವರ ಕಾಲನ್ನೆಳೆಯುತ್ತಿದ್ದಾರೆ. ಇಬ್ಬರನ್ನೂ ಸದ್ಯಕ್ಕೆ ಟ್ರೋಲ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಇನ್ನು ಕೆಲವರು ನಿಮ್ಮ ಇಬ್ಬರ ಮೇಲೆ ಯಾರ ಕಣ್ಣು ಬೀಳದಿರಲಿ ಎಂದು ಇಬ್ಬರನ್ನೂ ಹರಸಿ ಹಾರೈಸುತ್ತಿದ್ದಾರೆ
ಒಟ್ನಲ್ಲಿ ಹಳೆಯ ಫೋಟೋಗಳನ್ನ ರೀಸ್ಟೋರ್ ಮಾಡುವ ಮೂಲಕ ವಿಚ್ಚೇದನದ ವದಂತಿಗೆ ನತಾಶ ಬ್ರೇಕ್ ಹಾಕಿದ್ದಾರೆ.ಈ ಮೂಲಕ ಜೊತೆಯಾಗಿ ಹಿತವಾಗಿ,ಸೇರಿ ನಡೆವ,ಸೇರಿ ನುಡಿವಾ ಎಂಬ ಹಾಡನ್ನ ಹಾಡಿದ್ದಾರೆ. ಮುಂದೆ ತಮ್ಮ ಈ ವಿಚ್ಛೇದನದ ಕಥೆಗೆ ನತಾಶ ಮತ್ತೊಂದು ಟ್ವಿಸ್ಟ್ ಕೊಡ್ತಾರಾ..? ಕಾದು ನೋಡಬೇಕಿದೆ.


Click it and Unblock the Notifications











