ಅವರಾ ? ಇವರಾ ? ಐಶ್ವರ್ಯಾ ರೈ ಬಚ್ಚನ್ ಮೊಬೈಲ್ ವಾಲ್ ​ಪೇಪರ್​ನಲ್ಲಿರುವ ವ್ಯಕ್ತಿ ಯಾರು..?

ಮಣಿರತ್ನಂ ಅವರ ಇರುವರ್ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದವರು ಐಶ್ವರ್ಯ ರೈ. ಆ ನಂತರ ಐಶ್ವರ್ಯ ಹಿಂದೆ ತಿರುಗಿ ನೋಡಲಿಲ್ಲ. ಅತ್ಯಲ್ಫ ಅವಧಿಯಲ್ಲಿಯೇ ಕಾಲಿವುಡ್ ಮತ್ತು ಬಾಲಿವುಡ್‌ ನಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಐಶ್ವರ್ಯ ಹೊರ ಹೊಮ್ಮಿದರು. ನೇಮು, ಫೇಮನ್ನು ಗಳಿಸಿದರು. ಹಿಂದಿ ಉದ್ಯಮವನ್ನು ಅಕ್ಷರಶಃ ಆಳಿದರು.

ಇಂಥಾ ಐಶ್ವರ್ಯ ರೈ ಅವರ ದಾಂಪತ್ಯ ಬದುಕು ಸದ್ಯಕ್ಕೆ ಚರ್ಚೆಯಲ್ಲಿದೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಯಾವ ಕ್ಷಣದಲ್ಲಾದರೂ ದೂರವಾಗಬಹುದು ಎಂಬ ಆತಂಕ ಇವರ ಅಭಿಮಾನಿಗಳನ್ನು ಕಾಡುತ್ತಿದೆ. ಇದರ ನಡುವೆ ಐಶ್ವರ್ಯ ರೈ ಅವರ ಮೊಬೈಲ್‌ನ ವಾಲ್ ಪೇಪರ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ದಿನ ಬೆಳಗಾದರೆ ಐಸೂ ಬೇಬಿ ನೋಡುವುದು ಯಾರ ಮುಖ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.

Amid divorce rumors with Abhishek Bachchan Aishwarya Rai s new phone wallpaper sparks online buzz

ಹೌದು, ಅಸಲಿಗೆ ವಿಚ್ಛೇದನದ ವದಂತಿಗೆ ತಲೆ ಕೆಡಿಸಿಕೊಳ್ಳದ ಐಶ್ವರ್ಯ ರೈ, ಇತ್ತೀಚೆಗೆ ದುಬೈಗೆ ತೆರಳಿದ್ದರು. ಅಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಇನ್ನೂ ಈ ಕಾರ್ಯಕ್ರಮದಲ್ಲಿ ಬೋರ್ಡ್ ಮೇಲೆ ಐಶ್ವರ್ಯ ರೈ ಬಚ್ಚನ್ ಹೆಸರು ಬದಲು ಕೇವಲ ಐಶ್ವರ್ಯ ರೈ ಎಂಬ ನಾಮಪಲಕವನ್ನು ಹಾಕಲಾಗಿತ್ತು. ಹೀಗಾಗಿ ಅನೇಕರು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದೂರವಾಗುವುದು ಗ್ಯಾರೆಂಟಿ ಎಂದು ಅಂದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಶುರು ಮಾಡಿದ್ದರು.

ಈ ಚರ್ಚೆ ಇನ್ನೂ ಮುಕ್ತಾಯವಾಗಿಲ್ಲ. ಅಷ್ಟರಲ್ಲಿಯೇ ಐಶ್ವರ್ಯ ರೈ ಸ್ಟೈಲಿಶ್ ಬ್ಯಾಕ್​ ಕಲರ್​ ಜಾಕೆಟ್‌ಗೆ ಹೊಂದಿಕೆಯಾಗುವ ಜೆಗ್ಗಿಂಗ್ ಮತ್ತು ಸ್ನೀಕರ್‌ಗಳನ್ನು ಧರಿಸಿಕೊಂಡು ದುಬೈದಿಂದ ಮರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಮಯದಲ್ಲಿ ಎಲ್ಲರ ಗಮನಸೆಳೆದಿದ್ದು ಮಾತ್ರ ಐಶ್ವರ್ಯ ರೈ ಅವರ ಮೊಬೈಲ್ ಮತ್ತು ಮೊಬೈಲ್‌ನ ವಾಲ್‌ಪೇಪರ್ ಅನ್ನುವುದು ಇಂದಿನ ಬ್ರೇಕಿಂಗ್ ನ್ಯೂಸ್

ಹೌದು, ದುಬೈನಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬರುವಾಗ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ಕೈಯಲ್ಲಿದ್ದ ಬ್ಲಿಂಕ್ ಆಗಿದೆ. ಕ್ಯಾಮರಾದಲ್ಲಿ ಆ ವಾಲ್ ಪೇಪರ್ ಮಸುಕು ಮಸುಕಾಗಿ ಅಲ್ಲಿದ್ದ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದೆ. ನೋಡ.. ನೋಡುತ್ತಾ ವಿಡಿಯೋ ವೈರಲ್ ಕೂಡ ಆಗಿದೆ. ಐಶ್ವರ್ಯ ರೈ ಅವರ ಮೊಬೈಲ್‌ನಲ್ಲಿರುವ ವಾಲ್‌ಪೇಪರ್ ಯಾರದ್ದು ಎನ್ನುವ ಪ್ರಶ್ನೆ ಕೂಡ ಅನೇಕರನ್ನು ಈಗ ಕಾಡಲು ಶುರುವಾಗಿದೆ.

ಹೀಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ಅನೇಕರು ಐಶ್ವರ್ಯ ರೈ ತಮ್ಮ ಮೊಬೈಲ್‌ನಲ್ಲಿ ಅಮಿತಾಬ್ ಬಚ್ಚನ್ ಅವರ ಫೋಟೊವನ್ನು ವಾಲ್ ಪೇಪರ್ ಆಗಿ ಸೇವ್ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಕೇವಲ ಅಮಿತಾಬ್ ಮಾತ್ರ ಅಲ್ಲ ಆ ಫೋಟೊದಲ್ಲಿ ಐಶ್ವರ್ಯ ಅವರ ಮಗಳು ಆರಾಧ್ಯ ಕೂಡ ಇದ್ದಾರೆ ಎನ್ನುತ್ತಿದ್ದಾರೆ. ಮತ್ತೂ ಕೆಲವರು ಅದು ಅಮಿತಾಬ್ ಬಚ್ಚನ್ ಅಲ್ಲ ಬದಲಿಗೆ ಐಶ್ವರ್ಯಾ ಅವರ ತಂದೆ ಕೃಷ್ಣರಾಜ್ ರೈ ಇರ್ಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಸಂಬಂಧ ಮೊದಲಿನಂತೆ ಇದೆ ಎನ್ನುವುದಕ್ಕೆ ಈ ಮೊಬೈಲ್ ವಾಲ್‌ ಪೇಪರ್ ಸಾಕ್ಷಿ ಎಂದು ಅನೇಕರು ಹೇಳುತ್ತಿದ್ದಾರೆ. ಅಂದು ಮತ್ತು ಇಂದು ಅಮಿತಾಬ್ ಬಚ್ಚನ್ ಮೇಲೆ ಐಶ್ವರ್ಯ ರೈಗೆ ಇರುವ ಗೌರವ ಯಾವತ್ತು ಕಡಿಮೆಯಾಗಿಲ್ಲ ಎಂದು ಮೆಚ್ಚುಗೆಯ ಮಾತುಗಳನ್ನು ಕೂಡ ಆಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X