ವಿಚ್ಛೇದನದ ವದಂತಿಯ ನಡುವೆ ಕಜರಾ ರೇ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಐಶ್ವರ್ಯ ರೈ - ಅಭಿಷೇಕ್ ಬಚ್ಚನ್...!

ಸಂಸಾರ ಅಂದಮೇಲೆ ಜಗಳ ರೋಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಒಂದಾಗಬಹುದು. ಇದಕ್ಕೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಸಾಂಸಾರಿಕ ಜೀವನ ಸದ್ಯದ ಉದಾಹರಣೆ. ಹೌದು, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಇಂದು ನಿನ್ನೆಯದಲ್ಲ. ಅನೇಕ ದಿನಗಳಿಂದ ಈ ಮಾತು ಕೇಳಿ ಬರುತ್ತಾನೇ ಇದೆ.

ಆದರೆ.. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಅಭಿಷೇಕ್ ಬಚ್ಚನ್ ಆಗಲಿ ಐಶ್ವರ್ಯ ರೈ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಕಾರಣಕ್ಕೆ ಅನೇಕರು ಹರಿದಾಡುತ್ತಿರುವ ಈ ವಿಚಾರವನ್ನು ನಿಜಾ ಎಂದುಕೊಂಡಿದ್ದಾರೆ. ಇನ್ನೂ ಕೆಲವರು ಅಭಿಷೇಕ್ ಬಚ್ಚನ್ ಅವರಿಂದ ಐಶ್ವರ್ಯ ರೈ ಯಾವುದೇ ಕಾರಣಕ್ಕೂ ದೂರವಾಗಲ್ಲ ಎನ್ನುವ ವಾದ ಮಾಡುತ್ತಿದ್ದಾರೆ.

Amid divorce rumours Abhishek Bachchan and Aishwarya Rai perform Kajra Re steps at a family wedding

ಇದರ ನಡುವೆ ಈಗ ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯ ಜೊತೆ ಸಂಭ್ರಮದ ಅಲೆಯಲ್ಲಿ ತೇಲುತ್ತಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರ ದಾಂಪತ್ಯ ಜೀವನದ ಕುರಿತು ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದವರ ಬಾಯಿಯನ್ನೂ ಈ ವಿಡಿಯೋ ಮುಚ್ಚಿಸಿದೆ.

ಹೌದು, ತಮ್ಮ ಸೋದರ ಸಂಬಂಧಿ ಶ್ಲೋಕಾ ಶೆಟ್ಟಿ ಮದುವೆಯ ಸಮಾರಂಭದಲ್ಲಿ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಜೊತೆ ಭಾಗಿಯಾಗಿದ್ಧಾರೆ. ಅಭಿಷೇಕ್ ಬಚ್ಚನ್ ಕೂಡ ಮದುವೆಗೆ ಬಂದು ನವ ಜೋಡಿಗೆ ಶುಭ ಹಾರೈಸಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರನ್ನು ವಧು ಮತ್ತು ವರ ವೇದಿಕೆಯ ಮೇಲೆ ಕರೆತರುತ್ತಾರೆ. ಈ ಸಮಯದಲ್ಲಿ ಇಬ್ಬರು ತಮ್ಮ ಬ್ಲಾಕ್ ಬಸ್ಟರ್ ಚಿತ್ರ ಬಂಟಿ ಔರ್ ಬಬ್ಲಿ ಚಿತ್ರದ ಖ್ಯಾತ ಹಾಡು ಕಜರಾ ರೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಗಳು ಆರಾಧ್ಯ ಕೂಡ ತಮ್ಮ ತಂದೆ ತಾಯಿಯ ಜೊತೆ ಹುಕ್ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ನಿಮ್ಮ ಇಬ್ಬರನ್ನು ಇದೇ ರೀತಿ ಜೊತೆಯಾಗಿ ನೋಡುವುದೇ ನಮಗೆ ಖುಷಿ ಕೊಡುತ್ತೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಇವತ್ತು ಕೂಡ ನಿಮ್ಮ ನಡುವೆ ಕೆಮೆಸ್ಟ್ರೀ ತುಂಬಾನೇ ಚೆನ್ನಾಗಿದೆ ಹೀಗೆ ಸದಾ ಕಾಲ ಜೊತೆಯಾಗಿ ನಗು ನಗುತ್ತೀರಿ ಎಂದು ಹೇಳಿದ್ದಾರೆ. ವಿಚ್ಛೇದನದ ವದಂತಿಗಳಿಗೆ ನಿಮ್ಮ ಈ ಡ್ಯಾನ್ಸ್ ಪರ್ಫೆಕ್ಟ್ ಉತ್ತರ ಎಂದು ಕೂಡ ಹೇಳಿದ್ದಾರೆ.

ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದ್ದರೆ ಮದುವೆಗೆ ಇಬ್ಬರು ಜೊತೆಯಾಗಿ ತೆರಳುತ್ತಿರಲಿಲ್ಲ, ಖುಷಿ ಖುಷಿಯಾಗಿ ಹೀಗೆ ಫೋಟೊಗೆ ಪೋಸ್ ಕೊಡುತ್ತಿರಲಿಲ್ಲ ಎಂದಿದ್ದಾರೆ. ಒಂದು ಫೋಟೊ ಅನೇಕರ ಬಾಯಿ ಮುಚ್ಚಿಸಿದೆ ಎಂದಿದ್ದಾರೆ. ಇನ್ನೊಬ್ಬರು ಸಂಸಾರದಲ್ಲಿ ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಗಟ್ಟಿ ಮಹಿಳೆ ಯಾವತ್ತು ಹೆದರುವುದಿಲ್ಲ ಡಿವೋರ್ಸ್‌ ನೀಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಒಟ್ನಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಕಳೆದ ಹಲವಾರು ದಿನಗಳಿಂದ ದಿನವೀಡಿ ಚರ್ಚೆ ಮಾಡುತ್ತಾ ಬಂದ ಅನೇಕರಿಗೆ ಈ ಮದುವೆಯ ವಿಡಿಯೋ ಉತ್ತರ ನೀಡಿದೆ. ಇಬ್ಬರು ತುಂಬಾ ಅನೋನ್ಯವಾಗಿದ್ದಾರೆ ಎನ್ನುವ ಸಂದೇಶವನ್ನು ಕೂಡ ರವಾನೆ ಮಾಡಿವೆ. ಇನ್ನಾದರೂ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಕುರಿತು ತಲೆ ಕೆಡಿಸಿಕೊಂಡಿರುವ ಅನೇಕರು ಸುಮ್ಮನಾಗುತ್ತಾರಾ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್‌ ಅವರಿಗೆ ಇನ್ನಾದರೂ ಮಾನಸಿಕ ನೆಮ್ಮದಿ ಸಿಗುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X