ಡಿವೋರ್ಸ್ ವದಂತಿ ನಡುವೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಡಿಯೋ ವೈರಲ್..!

ಸಂಸಾರ ಅಂದಮೇಲೆ ಜಗಳ ರೋಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಒಂದಾಗಬಹುದು. ಇದಕ್ಕೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಸಾಂಸಾರಿಕ ಜೀವನ ಸದ್ಯದ ಉದಾಹರಣೆ. ಹೌದು, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಇಂದು ನಿನ್ನೆಯದಲ್ಲ.

ಬದಲಿಗೆ ಅನೇಕ ದಿನಗಳಿಂದ ಈ ಮಾತು ಕೇಳಿ ಬರುತ್ತಾನೇ ಇದೆ. ಆದರೆ.. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಅಭಿಷೇಕ್ ಬಚ್ಚನ್ ಆಗಲಿ ಐಶ್ವರ್ಯ ರೈ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಕಾರಣಕ್ಕೆ ಅನೇಕರು ಹರಿದಾಡುತ್ತಿರುವ ಈ ವಿಚಾರವನ್ನು ನಿಜಾ ಎಂದುಕೊಂಡಿದ್ದಾರೆ. ಇನ್ನೂ ಕೆಲವರು ಅಭಿಷೇಕ್ ಬಚ್ಚನ್ ಅವರಿಂದ ಐಶ್ವರ್ಯ ರೈ ಯಾವುದೇ ಕಾರಣಕ್ಕೂ ದೂರವಾಗಲ್ಲ ಎನ್ನುವ ವಾದ ಮಾಡುತ್ತಿದ್ದಾರೆ.

Amid divorce rumours Aishwarya Rai and Abhishek Bachchan s Kajra Re dance video goes viral

ಇದರ ನಡುವೆ ಈಗ ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯ ಜೊತೆ ಸಂಭ್ರಮದ ಅಲೆಯಲ್ಲಿ ತೇಲುತ್ತಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರ ದಾಂಪತ್ಯ ಜೀವನದ ಕುರಿತು ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದವರ ಬಾಯಿಯನ್ನೂ ಈ ವಿಡಿಯೋ ಮುಚ್ಚಿಸಿದೆ.

ಹೌದು, ಅಸಲಿಗೆ ಪ್ರತಿ ವರ್ಷ ಐಶ್ವರ್ಯ ರೈ ಈ ಸಮಯದಲ್ಲಿ ತಮ್ಮ ಪುತ್ರಿ ಆರಾಧ್ಯ ಜೊತೆ ಕಾನ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಫ್ರಾನ್ಸ್‌ಗೆ ತೆರಳುತ್ತಾರೆ. ಹೀಗಾಗಿ ಈ ವರ್ಷ ಕೂಡ ಅನೇಕರು ಐಶ್ವರ್ಯ ರೈ ಅವರನ್ನು ಕಾನ್‌ ಚಿತ್ರೋತ್ಸವದಲ್ಲಿ ಅನೇಕರು ಎದುರು ನೋಡುತ್ತಿದ್ದರು. ಆದರೆ.. ಐಶ್ವರ್ಯ ರೈ ಮಾತ್ರ ಕಾನ್‌ನತ್ತ ಮುಖ ಮಾಡದೇ ಈ ಬಾರಿ ಜಿಯೋ ವರ್ಲ್ಡ್ ಕನೆಕ್ಷನ್ ಸೆಂಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ವಿಶೇಷ ಅಂದರೆ ಐಶ್ವರ್ಯ ಜೊತೆ ಅಪರೂಪಕ್ಕೆ ಕಾಣಸಿಗುವ ಅಭಿಷೇಕ್ ಬಚ್ಚನ್ ಕೂಡ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಇದೇ ಸಮಯದಲ್ಲಿ ವಿರಾಟ್ ಕೊಹ್ಲಿಯನ್ನು ಕೆಣಕಿ, ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ಗಾಯಕ ರಾಹುಲ್ ವೈದ್ಯ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಎದುರು ಅವರದ್ದೇ ಚಿತ್ರ ಬಟಿ ಔರ್ ಬಬ್ಲಿಯ ಖ್ಯಾತ ಹಾಡು ಕಜರಾ ರೇ ಹಾಡನ್ನು ಗುನುಗಿದ್ದಾರೆ.

ಈ ಹಾಡು ಕೇಳುತ್ತಿದ್ದಂತೆಯೇ ಐಶ್ವರ್ಯ ರೈ ಅಲ್ಲಿಯೇ ನಿಂತ ಜಾಗದಲ್ಲಿಯೇ ಕುಣಿಯಲು ಶುರು ಮಾಡಿದ್ದಾರೆ. ಇದನ್ನು ಗಮನಿಸಿದ ಅಭಿಷೇಕ್ ಬಚ್ಚನ್ ಪತ್ನಿಯ ತಾಳಕ್ಕೆ ತಕ್ಕಂತೆ ಚಪ್ಪಾಳೆ ಹೊಡೆದು ಹುರಿದುಂಬಿಸಿದ್ದಾರೆ. ಅಪ್ಪ- ಅಮ್ಮನ ಈ ಸಂಭ್ರಮ ಸಡಗರದಲ್ಲಿ ಮಗಳು ಆರಾಧ್ಯ ಕೂಡ ಭಾಗಿಯಾಗಿದ್ದು ತಾಯಿಯ ಜೊತೆ ಆರಾಧ್ಯ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಹಜವಾಗಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಅಭಿಮಾನಿಗಳು ವಿಡಿಯೋ ನೋಡಿ ಖುಷಿಯಾಗಿದ್ದಾರೆ. ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದ್ದರೆ ಇಬ್ಬರು ಕಾರ್ಯಕ್ರಮಕ್ಕೆ ಹೀಗೆ ಜೊತೆಯಾಗಿ ತೆರಳುತ್ತಿರಲಿಲ್ಲ, ಖುಷಿ ಖುಷಿಯಾಗಿ ಹೀಗೆ ಕುಣಿಯುತ್ತಿರಲಿಲ್ಲ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಒಂದು ವಿಡಿಯೋ ಅನೇಕರ ಬಾಯಿ ಮುಚ್ಚಿಸಿದೆ ಎಂದಿದ್ದಾರೆ. ಇನ್ನೊಬ್ಬರು ಸಂಸಾರದಲ್ಲಿ ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಗಟ್ಟಿ ಮಹಿಳೆ ಯಾವತ್ತು ಹೆದರುವುದಿಲ್ಲ ಡಿವೋರ್ಸ್‌ ನೀಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಒಟ್ನಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಕಳೆದ ಹಲವಾರು ದಿನಗಳಿಂದ ದಿನವೀಡಿ ಚರ್ಚೆ ಮಾಡುತ್ತಾ ಬಂದ ಅನೇಕರಿಗೆ ಈ ವಿಡಿಯೋ ಉತ್ತರ ನೀಡಿದೆ. ಇಬ್ಬರು ತುಂಬಾ ಅನೋನ್ಯವಾಗಿದ್ದಾರೆ ಎನ್ನುವ ಸಂದೇಶವನ್ನು ಕೂಡ ರವಾನೆ ಮಾಡಿವೆ. ಇನ್ನಾದರೂ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಕುರಿತು ತಲೆ ಕೆಡಿಸಿಕೊಂಡಿರುವ ಅನೇಕರು ಸುಮ್ಮನಾಗುತ್ತಾರಾ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್‌ ಅವರಿಗೆ ಇನ್ನಾದರೂ ಮಾನಸಿಕ ನೆಮ್ಮದಿ ಸಿಗುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
"A video of Aishwarya Rai and Abhishek Bachchan dancing to the song 'Kajra Re' has gone viral, amid ongoing rumours about their relationship issues.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X