ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಬಗ್ಗೆ ಹೀಗೊಂದು ಬ್ರೇಕಿಂಗ್ ನ್ಯೂಸ್ ; ನಿಜಾ ಆದರೆ ಮಾತ್ರ...
ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಕಳೆದ ಕೆಲ ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಸಾಂಸಾರಿಕ ಜೀವನ ಚರ್ಚೆಯಲ್ಲಿದೆ. ಇಬ್ಬರು ದೂರವಾಗುವುದು ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ.

ಆದರೆ ಹರಿದಾಡುತ್ತಿರುವ ಈ ಸುದ್ದಿ ನಿಜಾನಾ ಗೊತ್ತಿಲ್ಲ. ಯಾಕೆಂದರೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಂಸಾರಕ್ಕೆ ಕೊಳ್ಳಿ ಬಿದ್ದಿದೆ ಎಂದು ಜಗತ್ತು ಮಾತನಾಡಿಕೊಳ್ಳುತ್ತಿದೆಯಾದರೂ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅನೋನ್ಯವಾಗಿಯೇ ಇದ್ದಾರೆ ಎನ್ನುವ ಗುಮಾನಿ ಅನೇಕರಲ್ಲಿದೆ. ಇದಕ್ಕೆ ಪೂರಕವಾಗಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅನೇಕ ವರ್ಷಗಳ ನಂತರ ತೆರೆ ಹಂಚಿಕೊಳ್ಳಲು ಅಣಿಯಾಗಿದ್ದಾರೆ. ಹೀಗೊಂದು ಸುದ್ದಿ ಸದ್ಯ ಮುಂಬೈನಲ್ಲಿ ಕೇಳಿ ಬರುತ್ತಿದೆ.
ಹೌದು, ಅಸಲಿಗೆ ಮಣಿರತ್ನಂ ಬಹುಕಾಲದ ನಂತರ ಹಿಂದಿ ಚಿತ್ರವೊಂದನ್ನು ನಿರ್ದೇಶಿಸುವ ಮನಸು ಮಾಡಿದ್ದಾರೆ. ಈ ಚಿತ್ರದಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಖುದ್ದು ಮಣಿರತ್ನಂ ಈ ಸುಳಿವನ್ನು ನೀಡಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಜೊತೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಮ್ಮ ಕಾಂಬಿನೇಷನ್‌ನಲ್ಲಿ ಹ್ಯಾಟ್ರಿಕ್ ಹೊಡೆಯಬೇಕೆಂಬ ಆಸೆ ನನಗೆ ಇದೆ ಎಂದು ಹೇಳಿದ್ದಾರೆ ಎಂದು ಜೂಮ್ ವರದಿ ಮಾಡಿದೆ.

ಅಂದ್ಹಾಗೇ ಮಣಿರತ್ನಂ ಈ ಹಿಂದೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್‌ಗೆ 'ಗುರು' ಅಂತಹ ಅದ್ಭುತ ಚಿತ್ರವನ್ನು ನೀಡಿದವರು. ರಾವಣ್ ಚಿತ್ರವನ್ನು ಕೂಡ ನಿರ್ದೇಶಿಸಿದವರು. ಎಲ್ಲಕ್ಕಿಂತ ಹೆಚ್ಚಾಗಿ ಐಶ್ವರ್ಯ ರೈ ಅವರಿಗೆ ಮಣಿರತ್ನಂ ಅವರ ಮೇಲೆ ಅಪಾರವಾದ ಗೌರವ ಇದೆ. ತಮ್ಮ ಬದುಕಿನಲ್ಲಿ ಮಣಿರತ್ನಂ ಅವರಿಗೆ ವಿಶೇಷವಾದ ಸ್ಥಾನ ನೀಡಿದ್ದಾರೆ ಐಶ್ವರ್ಯ ರೈ.
ಇನ್ನೂ.. ಎಲ್ಲರೂ ಅಭಿಷೇಕ್ ಬಚ್ಚನ್ ಅವರದ್ದು ಐರನ್ ಲೆಗ್ ಎನ್ನುತ್ತಿದ್ದ ಸಮಯದಲ್ಲಿ ಮಣಿರತ್ನಂ ಅಭಿಷೇಕ್ ಬಚ್ಚನ್ ಅವರನ್ನು ತಮ್ಮ 'ಯುವ' ಚಿತ್ರಕ್ಕೆ ಸೇರಿಸಿಕೊಂಡಿದ್ದರು. ಈ ಕಾರಣಕ್ಕೆ ಮಣಿರತ್ನಂ ಮೇಲೆ ಅಭಿಷೇಕ್ ಬಚ್ಚನ್ ಅವರಿಗೆ ಕೂಡ ಗೌರವ ಇದೆ. ಈ ಎಲ್ಲ ಕಾರಣಗಳಿಂದ ಮಣಿರತ್ನಂ ಅವರ ಮುಂದಿನ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಜೊತೆಯಾಗಿ ಅಭಿನಯಿಸುವುದು ಪಕ್ಕಾ ಎನ್ನುವ ಮಾತು ಸದ್ಯ ಬಲವಾಗಿ ಕೇಳಿ ಬರುತ್ತಿದೆ. ಖುದ್ದು ಮಣಿರತ್ನಂ ಆಸಕ್ತಿ ತೋರಿರುವ ಕಾರಣ ಈ ಚಿತ್ರದ ಘೋಷಣೆ ಸದ್ಯದಲ್ಲಿಯೇ ಅಧಿಕೃತವಾಗಿ ಆಗುವ ಸಾಧ್ಯತೆ ಕೂಡ ಇದೆ. ಇನ್ನುಳಿದಂತೆ ಮಣಿರತ್ನಂ ಸದ್ಯ ಕಮಲ್ ಹಾಸನ್ ಜೊತೆ ಥಗ್ ಲೈಫ್ ಚಿತ್ರ ಮಾಡುತ್ತಿದ್ದಾರೆ. ಮುಂದಿನ ವರ್ಷದ ಜೂನ್‌ನಲ್ಲಿ ಈ ಚಿತ್ರ ಅದ್ಧೂರಿಯಾಗಿ ತೆರೆಗೆ ಬರಲಿದೆ.


Click it and Unblock the Notifications











