ಆ ಕಡೆ ಐಶ್ವರ್ಯ ರೈ ಈ ಕಡೆ ನಿಮ್ರತ್ ಕೌರ್, ಕೆರಳಿ ಕೆಂಡವಾದ ಅಭಿಷೇಕ್ ಬಚ್ಚನ್ ಹೇಳಿದ್ದೇನು..?

ಬದುಕು ಆಧುನಿಕವಾದಷ್ಟು ಸಂಸಾರ ಪ್ರಾಯೋಗಿಕವಾಗತೊಡಗಿದೆ. ಒಂದೊಂದು ಮನೆಯಲ್ಲೂ.. ಒಂದೊಂದು ಸಂಸಾರದಲ್ಲೂ.. ಒಂದೊಂದು ಜೀವದಲ್ಲೂ.. ಒಂದೊಂದು ಕಥೆ. ಉದಾಹರಣೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರನ್ನೇ ತೆಗೆದುಕೊಳ್ಳಿ.

ಹೌದು, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಸಾಂಸಾರಿಕ ಜೀವನ ಹಳಿ ತಪ್ಪಿದೆ ಎನ್ನುವ ಮಾತು ಕಳೆದ ಎರಡು ವರ್ಷದಿಂದ ಕೇಳಿ ಬರುತ್ತಾನೇ ಇದೆ. . ಇದಕ್ಕೆ ಪೂರಕವಾಗಿ ಇಬ್ಬರ ನಡಾವಳಿ ಕೂಡ ಹಾಗೇ ಇದೆ. ಮೊದಲೆಲ್ಲ ಜೊತೆ ಜೊತೆಯಾಗಿ ಓಡಾಡುತ್ತಿದ್ದ ಇಬ್ಬರು ಈಗ ನಾನೊಂದು ತೀರ.. ನೀನೊಂದು ತೀರ.. ಎಂಬಂತೆ ಓಡಾಡುತ್ತಿದ್ದಾರೆ.

Amid divorce rumours with Aishwarya Rai Abhishek Bachchan folded his hands in front of the paparazz

ಇನ್ನೂ.. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಸಂಬಂಧದಲ್ಲಿ ಬಿರುಕು ಮೂಡಲು ನಿಮ್ರತ್ ಕೌರ್ ಕಾರಣವೆನ್ನುವ ಮಾತಿದೆ. 'ದಸವಿ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ಈ ಸುದ್ದಿಯನ್ನು ನಂಬಿ ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗ ನಿಮ್ರತ್ ಕೌರ್ ಅವರನ್ನು ಹೀನಾಮಾನವಾಗಿ ಟ್ರೋಲ್ ಮಾಡುತ್ತಿದೆ. ಕೆಟ್ಟಾ ಕೊಳಕು ಪದಗಳಿಂದ ನಿಂದಿಸುತ್ತಿದೆ.

ಆದರೆ, ಇಷ್ಟೆಲ್ಲ ಆದರೂ ಕೂಡ ಅಭಿಷೇಕ್ ಬಚ್ಚನ್ ಆಗಲಿ ಐಶ್ವರ್ಯ ರೈ ಆಗಲಿ ನಿಮ್ರತ್ ಕೌರ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ಬದಲಿಗೆ ಮೌನಕ್ಕೆ ಶರಣಾಗಿದ್ದಾರೆ. ಇದರಿಂದ ಆಡಿಕೊಳ್ಳೋರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಕಿ ಇಲ್ಲದೇ ಹೊಗೆಯಾಡಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಮೌನಂ ಸಮ್ಮತಿ ಲಕ್ಷಣಂ ಎಂದು ತಿಳಿದು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಸಂಸಾರದಲ್ಲಿ ನಿಮ್ರತ್ ಕೌರ್ ಹುಳಿ ಹಿಂಡಿದ್ದು ನಿಜಾ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದೆ.

Amid divorce rumours with Aishwarya Rai Abhishek Bachchan folded his hands in front of the paparazz

ನಿಜಾ. ಸೆಲೆಬ್ರಿಟಿಗಳು ಅಂದಮೇಲೆ ಟ್ರೋಲ್‌ಗಳಾಗೋದು ಸಹಜ. ಹಾಗಂತ ಅನ್ನೋದನ್ನೆಲ್ಲಾ ಸಹಿಸಿಕೊಳ್ಳಬೇಕು ಅಂತೇನು ನಿಯಮ ಇಲ್ಲವಲ್ಲಾ? ವಿಪರೀತವಾಗಿ ರೇಗಿಸಿ,ತೆಪ್ಪಗಿದ್ದವರನ್ನು ಪದೇ ಪದೇ ಕೆರೆದರೆ ಎಂತವರಿಗಾದರೂ ಪಿತ್ತ ನೆತ್ತಿಗೇರದೇ ಇರೋದಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ತಮ್ಮ ದಾಂಪತ್ಯ ಜೀವನದ ಕುರಿತು ಹಬ್ಬಿರುವ ಸುದ್ದಿಗಳನನ್ನೂ ಕೇಳಿ ಕೇಳಿ ಅಭಿಷೇಕ್ ಬಚ್ಚನ್ ತಾಳ್ಮೆಯ ಕಟ್ಟೆ ಒಡೆದಂತೆ ಕಾಣುತ್ತಿದೆ. ಹೀಗಾಗಿಯೇ ಉಗ್ರ ರೂಪದಲ್ಲಿಯೇ ವಿಮಾನ ನಿಲ್ಧಾಣದಿಂದ ಹೊರ ಬಂದಿರುವ ಅಭಿಷೇಕ್ ಬಚ್ಚನ್ ತಮ್ಮ ಫೋಟೊ ತೆಗೆಯಲು ಆಚೆ ನಿಂತಿದ್ದ ಪಾಪರಾಜಿಗಳ ಮೇಲೆ ಕಿಡಿ ಕಾರಿದ್ದಾರೆ. ಸಾಕಿನ್ನೂ ಅದೆಲ್ಲ ಮುಗಿದಿದೆ ಎಂದು ಹೇಳಿ ಕೈ ಮುಗಿದಿದ್ದಾರೆ. ಒಂದು ಕ್ಷಣವೂ ಅಲ್ಲಿ ನಿಲ್ಲದೇ ಸಿಟ್ಟಿನಲ್ಲಿಯೇ ಅಲ್ಲಿಂದ ತೆರಳಿದ್ದಾರೆ.

ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಪಾಪರಾಜಿಗಳ ಮೇಲೆ ಇದೇ ಮೊದಲ ಬಾರಿ ಅಭಿಷೇಕ್ ಬಚ್ಚನ್ ಈ ರೀತಿ ಕೋಪ ಮಾಡಿಕೊಂಡಿರುವುದು ಎನ್ನುವ ಮಾತು ಕೇಳಿ ಬರುತ್ತಿದೆ. ಹರಿದಾಡುತ್ತಿರುವ ಸುದ್ದಿಗಳಿಂದ ಅಭಿಷೇಕ್ ಬಚ್ಚನ್ ವಿಚಲಿತರಾಗಿದ್ದಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಅಂದ್ಹಾಗೆ ಕಳೆದ ಕೆಲ ತಿಂಗಳ ಹಿಂದೆ ಅಭಿಷೇಕ್ ಬಚ್ಚನ್ ತಮ್ಮ ತಾಯಿ ಜಯಾ ಬಚ್ಚನ್ ಮತ್ತು ಸಹೋದರಿ ಶ್ವೇತಾ ಅವರ ಜೊತೆ ವಿಮಾನ ನಿಲ್ದಾಣದಿಂದ ಆಚೆ ಬಂದಾಗ ಕೂಡ ಪಾಪರಾಜಿಗಳು ಅಭಿಷೇಕ್ ಬಚ್ಚನ್ ಅವರನ್ನು ಸುತ್ತುವರೆದಿದ್ದರು. ಆದರೆ ಅವತ್ತು ತಾಳ್ಮೆ, ಸಂಯಮದಿಂದ ಇದ್ದ ಅಭಿಷೇಕ್ ಬಚ್ಚನ್ ಕೈ ಮುಗಿದು ಮುಂದೆ ಸಾಗಿದ್ದರು. ಸದ್ಯಕ್ಕೆ ಅಭಿಷೇಕ್ ಬಚ್ಚನ್ ವಿಮಾನ ನಿಲ್ಧಾಣದಿಂದ ಆಚೆ ಬರುವ ವಿಡಿಯೋ ವೈರಲ್ ಆಗಿದ್ದು ಮುಂದಿನ ದಿನಗಳಲ್ಲಾದರೂ ಮೂವರಲ್ಲಿ ಒಬ್ಬರು ಈ ವಿಚಾರದಲ್ಲಿ ಮೌನ ಮುರಿಯುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X