ವಿಚ್ಛೇದನ ವದಂತಿ ನಡುವೆ ಮಗನ ಜೊತೆ ದೇಶ ತೊರೆದ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ..!

ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು.

ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇನ್ನೂ ಪ್ರೀತಿ ಅನ್ನುವ ಪದದ ಅರ್ಥ ಬದಲಾಗದೇ ಇದ್ದರೂ, ಈ ಎರಡು ಕ್ಷೇತ್ರದಲ್ಲಿ ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ತುಂಬಾನೇ ಬದಲಾಗಿದೆ. ಇದಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಮತ್ತೊಂದು ಉದಾಹರಣೆ.

amid-divorce-rumours-with-cricketer-hardik-pandya-natasa-stankovic-flies-out-of-mumbai-with-son

ಹೌದು, ಕಳೆದ ಕೆಲ ದಿನಗಳಿಂದ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ನಡುವೆ ಅರಳಿದ್ದ ಪ್ರೇಮ ಕಮರಿದೆ ಅನ್ನುವ ಮಾತು ದಶದಿಕ್ಕುಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ನತಾಶ ಹೆಸರಿನ ಮುಂದೆ ಇದ್ದ ಹಾರ್ದಿಕ್ ಹೆಸರು ಮಾಯವಾಗಿದೆ. ಇನ್ನೂ ಹಾರ್ದಿಕ್ ಪಾಂಡ್ಯ ನಾಯಕನಾದರೂ ಕೂಡ ಮುಂಬೈ ಇಂಡಿಯನ್ಸ್ ಪಂದ್ಯಗಳನ್ನ ನೋಡಲು ನತಾಶಾ ಒಮ್ಮೆಯೂ ಬರಲಿಲ್ಲ. ಐಪಿಎಲ್ ಬಿಡಿ ವರ್ಲ್ಡ್ ಕಪ್‌ನಲ್ಲಿ ಭಾರತ ವಿಶ್ವವಿಜೇತವಾದರೂ ಮೈದಾನದಲ್ಲಿ ನತಾಶಾ ಕಾಣಿಸಲಿಲ್ಲ. ಮೊನ್ನೆ ನಡೆದ ಅಂಬಾನಿ ಮಗನ ಮದುವೆಗೆ ಕೂಡ ನತಾಶಾ ತನ್ನ ಗಂಡ ಹಾರ್ದಿಕ್ ಜೊತೆ ಬರಲಿಲ್ಲ.

ಈ ಎಲ್ಲ ಕಾರಣಗಳಿಂದ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ದೂರವಾಗುವುದು ಖಚಿತ ಅನ್ನುವ ಮಾತು ಕೇಳಿ ಬರುತ್ತಿದೆ. ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ನಿಜಾ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಇದರ ನಡುವೆ ಈಗ ನತಾಶಾ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹಾರ್ದಿಕ್ ಪಾಂಡೆ ಮನೆ ತೊರೆದಿದ್ದಾರೆ. ತನ್ನ ಮುದ್ದು ಮಗ ಅಗಸ್ತ್ಯ ಜೊತೆ ವಿದೇಶಕ್ಕೆ ತೆರಳಿದ್ದಾರೆ.

amid-divorce-rumours-with-cricketer-hardik-pandya-natasa-stankovic-flies-out-of-mumbai-with-son

ಹೌದು, ನಿನ್ನೆ ಬ್ಯಾಗ್‌ ಪ್ಯಾಕ್‌ ಮಾಡ್ತಿರೋ ಫೋಟೋ ಹಾಕಿದ್ದ ನತಾಶಾ ಇಂದು ತಮ್ಮ ಮಗ ಅಗಸ್ತ್ಯನೊಂದಿಗೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ದಾಂಪತ್ಯ ಜೀವನ ಮತ್ತೊಮ್ಮೆ ಸಾರ್ವಜನಿಕರ ಬಾಯಿಗೆ ಆಹಾರವಾಗಿದೆ. ನಿನ್ನ ಸಂಸಾರ ಹಿಂಗಾತು, ಜೋಪಾನ್ ಮಾಡಿದ್ದ ಫಾರಿನ್ ಪಾರಿವಾಳ ಹಾರಿ ಹೋಗಬಾರದಿತ್ತು ಎನ್ನುವ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಸಂಸಾರ ಅಂದಮೇಲೆ ಜಗಳ ರೋಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ, ಹೇಗಾದರೂ ಮಾಡಿ ಹಾರ್ದಿಕ್ ಪಾಂಡ್ಯ ನತಾಶಾ ಅವರ ಮನವೊಲಿಸಬಹುದಿತ್ತು ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ಇನ್ನೂ ನತಾಶಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಬೆನ್ನಲ್ಲಿಯೇ, ತಮ್ಮ ಮಗನನ್ನು ಕರೆದುಕೊಂಡು ನತಾಶಾ ಎಲ್ಲಿ ಹೋಗಿರಬಹುದು ಅನ್ನುವ ಪ್ರಶ್ನೆ ಕೂಡ ಅನೇಕರಿಗೆ ಕಾಡುತ್ತಿದೆ. ಇದಕ್ಕೆ ಉತ್ತರವೆಂಬಂತೆ ನತಾಶಾ ಸೆರ್ಬಿಯಾದಲ್ಲಿರುವ ತಮ್ಮ ತವರು ಮನೆಗೆ ತೆರಳಿದ್ದಾರೆ ಅನ್ನುವ ಸುದ್ದಿಯೂ ಹಬ್ಬಿದೆ.

ಒಟ್ನಲ್ಲಿ ಸದ್ಯಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಅವರ ವಿಚ್ಚೇದನದ ವದಂತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಸಂಸಾರದ ಕುರಿತು ಚರ್ಚೆ ಕೂಡ ನಡೆಯುತ್ತಿದೆ. ಇಷ್ಟೆಲ್ಲ ಆದರೂ ಹಾರ್ದಿಕ್ ಪಾಂಡ್ಯ ಆಗಲಿ.. ನತಾಶಾ ಆಗಲಿ.. ಈ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಇನ್ನೂ ಮೌನ ಮುರಿದಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X