Deepika Padukone: ಟ್ರೋಲ್‌ಗೆ ಡೋಂಟ್ ಕೇರ್ ಎಂದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಪ್ರತಿಕ್ರಿಯೆ ಹೀಗಿದೆ

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರ ಸೆಲೆಬ್ರಿಟಿ ಚಾಟ್ ಶೋ ಕಾಫಿ ವಿತ್ ಕರಣ್ ಸೀಸನ್ 8 ರಲ್ಲಿ ಕಾಣಿಸಿಕೊಂಡಾಗಿನಿಂದ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ. ಇಬ್ಬರ ವೈಯಕ್ತಿಯ ಜೀವನವನ್ನು ಜನ ಪ್ರಶ್ನಿಸಿ ಟ್ರೋಲ್ ಮಾಡಿದ್ದಾರೆ.

ಆದರೆ, ಇದ್ಯಾವುದಕ್ಕೂ ಈ ಮುದ್ದು ಜೋಡಿ ತಲೆ ಕೆಡಿಸಿಕೊಂಡಿಲ್ಲ. ಕಾಫಿ ವಿತ್ ಕರಣ್ ಸೀಸನ್ 8ರ ಬಳಿಕ ಹೆಚ್ಚು ಟ್ರೋಲ್‌ಗೆ ಒಳಗಾಗಿದ್ದು, ನಟಿ ದೀಪಿಕಾ ಪಡುಕೋಣೆ. ಇದಕ್ಕೆ ಸಾಕ್ಷಿಯಾಗಿದೆ ಅವರ ಇತ್ತೀಚಿನ ವಿಡಿಯೋ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅವರ ವಿಡಿಯೋಗೆ ನಟ ರಣವೀರ್ ಸಿಂಗ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

Amidst trolling, Deepika Padukone shares a hilarious video, Ranveer Singh react

ದೀಪಿಕಾ ಪಡುಕೋಣೆಯ 'ಲುಕಿಂಗ್ ಲೈಕ್ ಎ ವಾವ್' ವಿಡಿಯೋ

ದೀಪಿಕಾ ಪಡುಕೋಣೆ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಕತ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 'ಲುಕಿಂಗ್ ಲೈಕ್ ಎ ವಾವ್' ಆಡಿಯೊವನ್ನು ಬಳಸಿ ಮಾಡಿರುವ ವಿಡಿಯೋಗೆ ಅಭಿಮಾನಿಗಳು ಪ್ರೀತಿಯ ಮಳೆ ಸುರಿಸಿದ್ದಾರೆ. ಇದರ ಜೊತೆಗೆ ನಟ ರಣವೀರ್ ಸಿಂಗ್ ಕೂಡ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಈ ವೀಡಿಯೋದಲ್ಲಿ ದೀಪಿಕಾ ಪಡಿಕೋಣೆ ಅವರು ತಿಳಿ ಗುಲಾಬಿ ಬಣ್ಣದ ಬಟ್ಟೆ ಮತ್ತು ಭಾರವಾದ ವಜ್ರದ ಕಿವಿಯೋಲೆಗಳನ್ನು ಹಾಕಿಕೊಂಡಿದ್ದು, ಲುಕ್ಕಿಂಗ್ ಲೈಕ್ ಎ ವಾವ್ ಆಡಿಯೋಗೆ ಲಿಪ್ ಸಿಂಕ್ ಮಾಡಿದ್ದಾರೆ. ಅದನ್ನು ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಕಾಫಿ ವಿತ್ ಕರಣ್ ಸೀಸನ್ 8 ರಲ್ಲಿ ನಟರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕಾಣಿಸಿಕೊಂಡಿದ್ದೇ ತಪ್ಪು ಎಂಬ ಮಾಯುಗಳು ಕೇಳಿಬರುತ್ತಿವೆ. ರಣವೀರ್ ಸಿಂಗ್ ಅವರು ತಮ್ಮ ಪತ್ನಿ ದೀಪಿಕಾ ಪಡುಕೋಣೆ ಅವರ ಮಾತುಗಳಿಂದ ಹರ್ಟ್ ಆಗಿದ್ದಾರೆ. ಇಬ್ಬರ ನಡುವೆ ವೈಮನಸ್ಸು ಮೂಡುತ್ತಿದೆ ಎಂಬ ವದಂತಿಗಳು ಕೇಳಿಬರುತ್ತಿವೆ.

Amidst trolling, Deepika Padukone shares a hilarious video, Ranveer Singh react

ಆದರೆ, ದೀಪಿಕಾ ಪಡುಕೋಣೆ ಅವರ ವಿಡಿಯೋಗೆ ರಣವೀರ್ ಸಿಂಗ್ ಕಾಮೆಂಟ್ ಮಾಡುವ ಮೂಲಕ ಈ ವದಂತಿಗಳಿಗೆ ತೆರೆ ಎಳೆದಿದ್ದಾರೆ. ವಿಡಿಯೋಗೆ ಕಾಮೆಂಟ್ ಮಾಡಿರುವ ಅವರು, "ಹಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಡೇಟ್!!!!!!" ಎಂದು ನಗು ಹರಿಸಿದ್ದಾರೆ. ಇನ್ನು ಕಾಫಿ ವಿತ್ ಕರಣ್ ನಿರೂಪಕ ಕರಣ್ ಜೋಹರ್ ಕೂಡ ಕಾಮೆಂಟ್ ಮಾಡಿದ್ದಾರೆ.

'ಲುಕಿಂಗ್ ಲೈಕ್ ಎ ವಾವ್' ಮತ್ತು 'ಮೈನೆ ಪೆಹನಾ ಹೈ ಮೌಸ್ ಕಲರ್' ಎಂಬ ಎರಡು ವಿಡಿಯೋಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಡಿಯೋ ಆಗಿವೆ. ಇನ್ನು, ಗುರುವಾರದಂದು ಮೊದಲ ಸಂಚಿಕೆಯನ್ನು ಪ್ರಸಾರ ಮಾಡಿದ ಕಾಫಿ ವಿತ್ ಕರಣ್‌ನ ಪ್ರಸ್ತುತ ಹೊಸ ಸೀಸನ್‌ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಅತಿಥಿಗಳಾಗಿದ್ದರು.

ಶೋನಲ್ಲಿ ಮಾತನಾಡಿದ್ದ ದೀಪಿಕಾ ಪಡುಕೋಣೆ ತಾನು ಮತ್ತು ರಣವೀರ್ ಸಿಂಗ್ ಒಬ್ಬರಿಗೊಬ್ಬರು ಬದ್ಧರಾಗಿರಲಿಲ್ಲ ಎಂದು ಬಹಿರಂಗಪಡಿಸಿದ್ದರು. ರಣವೀರ್ ತಮ್ಮನ್ನು ಮದುವೆಯಾಗಲು ಕೇಳುವವರೆಗೂ ಇತರರ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು ಎಂಬುದನ್ನು ಬಹಿರಂಗೊಪಡಿಸಿದ್ದರು.

ಇನ್ನು, ರಣವೀರ್ ಸಿಂಗ್ ಅವರು ದೀಪಿಕಾ ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣ ಮತ್ತು ಆ ಕ್ಷಣ ಎಷ್ಟು ಕಾಲ್ಪನಿಕ ಕಥೆಯಂತೆ ಇತ್ತು ಎಂಬುದನ್ನು ವಿವರಿಸಿ ಟ್ರೋಲ್‌ಗೆ ಒಳಗಾಗಿದ್ದರು. ಏಕೆಂದರೇ ಈ ಹಿಂದೆ ವದಂತಿಯಲ್ಲಿದ್ದ ಮಾಜಿ ಗೆಳತಿ ಅನುಷ್ಕಾ ಶರ್ಮಾ ಅವರ ಜೊತೆಗಿನ ತನ್ನ ಮೊದಲ ಭೇಟಿಯನ್ನು ಕೂಡ 2011 ರಲ್ಲಿ ಇದೇ ರೀತಿಯ ಮಾತುಗಳಲ್ಲಿ ವಿವರಿಸಿದ್ದಾರೆ ಎಂದು ಜನ ಟ್ರೋಲ್ ಮಾಡುತ್ತಿದ್ದಾರೆ.

More from Filmibeat

English summary
Amidst trolling, Deepika Padukone shares a hilarious video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X