78ನೇ ಹುಟ್ಟುಹಬ್ಬದಲ್ಲಿ ಅಮಿತಾಭ್: ಬಿಗ್‌-ಬಿ ಕೈಯಲ್ಲಿದೆ ಸಾಲು ಸಾಲು ಚಿತ್ರಗಳು

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ತಮ್ಮ 78ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತಡೇಗೂ ಎರಡು ದಿನ ಮುಂಚೆ ಅಷ್ಟೇ ಸೌತ್ ಇಂಡಿಯಾದ ದೊಡ್ಡ ಪ್ರಾಜೆಕ್ಟ್‌ವೊಂದಕ್ಕೆ ಸಹಿ ಮಾಡಿದ್ದಾರೆ. 78ನೇ ವಯಸ್ಸಿನಲ್ಲಿ ಬಿಟೌನ್‌ನ ಬಹುಬೇಡಿಕೆಯ ಹಾಗೂ ಅತ್ಯಂತ ಬ್ಯುಸಿ ನಟ ಅಮಿತಾಭ್.

ತಮ್ಮ ಸುದೀರ್ಘವಾದ ಈ ಸಿನಿಮಾ ಪಯಣದಲ್ಲಿ ಅಮಿತಾಭ್ ಬಚ್ಚನ್ ಎಲ್ಲ ಅನುಭವಗಳನ್ನು ಕಂಡಿದ್ದಾರೆ. ಯಶಸ್ಸು, ಸೋಲು, ಅವಮಾನ, ಆರೋಗ್ಯ ಸಮಸ್ಯೆ, ವಿವಾದ, ಟೀಕೆ, ಇಂಡಸ್ಟ್ರಿಯಿಂದ ಬ್ರೇಕ್ ಹೀಗೆ ಈ ಎಲ್ಲದರ ನಡುವೆಯೂ ಯಶಸ್ವಿ ಕಲಾವಿದನಾಗಿ ಜೀವಿಸುತ್ತಿದ್ದಾರೆ.

ಬಹುಶಃ ಭಾರತೀಯ ಸಿನಿಮಾರಂಗದಲ್ಲಿ ಇತಿಹಾಸದಲ್ಲಿ 78 ವರ್ಷದ ಬಳಿಕವೂ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಸೂಪರ್ ಸ್ಟಾರ್ ಹೀರೋ ಅಮಿತಾಭ್ ಇರಬಹುದು. ಈಗಲೂ ಅವರ ಕೈಯಲ್ಲಿ ಐದಕ್ಕಿಂತ ಹೆಚ್ಚು ಪ್ರಾಜೆಕ್ಟ್‌ಗಳಿವೆ. ಯಾವುದು? ಮುಂದೆ ಓದಿ...

ಬ್ರಹ್ಮಾಸ್ತ್ರದಲ್ಲಿ ಬಿಗ್-ಬಿ

ಬ್ರಹ್ಮಾಸ್ತ್ರದಲ್ಲಿ ಬಿಗ್-ಬಿ

ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಕಾಣಸಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣವನ್ನು ಬಿಗ್‌ಬಿ ಮುಗಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ ಸಹ ನಟಿಸಿದ್ದಾರೆ. ಡಿಸೆಂಬರ್ 4 ರಂದು ಬಿಡುಗಡೆ ಮಾಡುವುದಾಗಿ ಈ ಹಿಂದೆ ಚಿತ್ರತಂಡ ಘೋಷಿಸಿತ್ತು.

ಚೆಹ್ರೆಯಲ್ಲಿ ಮೆಗಾಸ್ಟಾರ್

ಚೆಹ್ರೆಯಲ್ಲಿ ಮೆಗಾಸ್ಟಾರ್

ಇಮ್ರಾನ್ ಹಶ್ಮಿ ನಾಯಕರಾಗಿ ನಟಿಸಿರುವ 'ಚೆಹ್ರೆ' ಸಿನಿಮಾದಲ್ಲೂ ಅಮಿತಾಭ್ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಸಹ ಬಹುತೇಕ ಮುಗಿದಿದೆ. ಅಮಿತಾಭ್, ಇಮ್ರಾನ್ ಜೊತೆ ರಿಯಾ ಚಕ್ರವರ್ತಿ, ಸಿದ್ಧಾರ್ಥ್ ಕಪೂರ್ ಸೇರಿದಂತೆ ಹಲವರು ನಟಿಸಿದ್ದಾರೆ.

'ಜುಂಡ್' ಚಿತ್ರದಲ್ಲಿ ಬಿಗ್‌ಬಿ

'ಜುಂಡ್' ಚಿತ್ರದಲ್ಲಿ ಬಿಗ್‌ಬಿ

'ಸೈರಾಟ್' ಚಿತ್ರದ ನಿರ್ದೇಶಿಸಿದ್ದ ನಾಗರಾಜ್ ಮಂಜುಳೇ ಅವರ ಮುಂದಿನ ಚಿತ್ರ 'ಜುಂಡ್'ನಲ್ಲೂ ಅಮಿತಾಭ್ ಕಾಣಿಸಿಕೊಂಡಿದ್ದಾರೆ. 'ಸ್ಲಮ್ ಸಾಕರ್' ಸ್ಥಾಪಕ ವಿಜಯ್ ಬಾರ್ಸೆ ಅವರ ಜೀವನ ಕಥೆ ಇದಾಗಿದ್ದು, ಆಕಶ್ ತೋಸಾರ್ ಮತ್ತು ರಿಂಕು ರಾಜಗುರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ತಮಿಳಿಗೆ ಹೊರಟ ಅಮಿತಾಭ್

ತಮಿಳಿಗೆ ಹೊರಟ ಅಮಿತಾಭ್

ಹಿಂದಿ, ತೆಲುಗು ಹಾಗೂ ಕನ್ನಡದಲ್ಲು ನಟಿಸಿದ್ದ ಅಮಿತಾಭ್ ಬಚ್ಚನ್ ಈಗ ತಮಿಳಿಗೂ ಪ್ರವೇಶ ಮಾಡಿದ್ದಾರೆ. ತಮಿಳ್‌ವಣ್ಣನ್ ನಿರ್ದೇಶನ 'ಉನ್ನತ ಮನಿಧನ್' ಚಿತ್ರದಲ್ಲಿ ಅಮಿತಾಭ್ ನಟಿಸುತ್ತಿದ್ದಾರೆ. ಎಸ್‌ಜೆ ಸೂರ್ಯ ಮತ್ತು ರಮ್ಯಾ ಕೃಷ್ಣನ್ ಸಹ ಮುಖ್ಯ ತಾರಬಳಗದಲ್ಲಿದ್ದಾರೆ.

ಪ್ರಭಾಸ್ ಜೊತೆ ಅಮಿತಾಭ್

ಪ್ರಭಾಸ್ ಜೊತೆ ಅಮಿತಾಭ್

ಎರಡು ದಿನಗಳ ಹಿಂದೆಯಷ್ಟೇ ಅಮಿತಾಭ್ ಬಚ್ಚನ್ ಹೊಸ ಚಿತ್ರವೊಂದಕ್ಕೆ ಸಹಿ ಮಾಡಿದ್ದು, ತೆಲುಗು ನಟ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. ದಿಪೀಕಾ ಪಡುಕೋಣೆ ನಾಯಕಿಯಾಗಿದ್ದಾರೆ. ಈ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ.

ಆಂಕೇನ್ 2!

ಆಂಕೇನ್ 2!

ಬಾಲಿವುಡ್ ಇಂಡಸ್ಟ್ರಿಯ ಸೂಪರ್ ಹಿಟ್ ಚಿತ್ರ ಆಂಕೇನ್ ಮುಂದುವರಿದ ಭಾಗ ಆರಂಭವಾಗುತ್ತಿದೆ. ಆಂಕೇನ್ 2 ಚಿತ್ರದಲ್ಲೂ ಅಮಿತಾಭ್ ನಟಿಸುತ್ತಿದ್ದಾರೆ.

More from Filmibeat

English summary
Bollywood megastar amitabh bachchan celebrates 78th birthday. now also Amitabh is the most busiest star in B-Town. here is the upcoming movies list of BIG Man.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X