For Quick Alerts
  ALLOW NOTIFICATIONS  
  For Daily Alerts

  ಅಭಿಷೇಕ್ ಬಚ್ಚನ್ ಹೊರತು ಪಡಿಸಿ ಅಮಿತಾಬ್ ಸಂಪೂರ್ಣ ಕುಟುಂಬಕ್ಕೆ ಕೊರೊನಾ ಲಸಿಕೆ

  |

  ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಇಂದು (ಏಪ್ರಿಲ್ 2) ಕೋವಿಡ್ 19 ಲಸಿಕೆ ಪಡೆದಿದ್ದಾರೆ. ಮೊದಲ ಹಂತದ ಲಸಿಕೆ ಪಡೆದ ಅನುಭವವನ್ನು ಅಮಿತಾಬ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಅಮಿತಾಬ್ ಬಚ್ಚನ್ ಮಾತ್ರವಲ್ಲದೆ ಇಡೀ ಕುಟುಂಬ ಕೊರೊನಾ ಲಸಿಕೆ ಪಡೆದಿದೆ. ಆದರೆ ಪುತ್ರ ಅಬಿಷೇಕ್ ಬಚ್ಚನ್ ಮಾತ್ರ ಲಸಿಕೆ ಹಾಕಿಸಿಕೊಂಡಿಲ್ಲ. ಅಭಿಷೇಕ್ ಸದ್ಯ ಮುಂಬೈನಲ್ಲಿ ಇರದ ಕಾರಣ ಕುಟುಂಬದ ಜೊತೆ ಲಸಿಕೆ ಹಾಕಿಸಿಕೊಳ್ಳುವುದನ್ನು ಮಿಸ್ ಮಾಡಿಕೊಂಡಿದ್ದಾರೆ. ಮುಂಬೈಗೆ ವಾಪಸ್ ಆಗುತ್ತಿದ್ದಂತೆ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ ಎಂದು ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ ಮಾಹಿತಿ ನೀಡಿದ್ದಾರೆ.

  ಅಮಿತಾಬ್ ಗೆ FIAF ಪ್ರಶಸ್ತಿ: 'ಜೀವಂತ ದಂತಕಥೆ' ಎಂದು ಕರೆದ ಕ್ರಿಸ್ಟೋಫರ್ ನೋಲನ್ಅಮಿತಾಬ್ ಗೆ FIAF ಪ್ರಶಸ್ತಿ: 'ಜೀವಂತ ದಂತಕಥೆ' ಎಂದು ಕರೆದ ಕ್ರಿಸ್ಟೋಫರ್ ನೋಲನ್

  ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕುತ್ತಿರುವ ಫೋಟೋವನ್ನು ಅಮಿತಾಬ್ ಶೇರ್ ಮಾಡಿ, 'ಲಸಿಕೆ ಹಾಕಿಸಿಕೊಂಡಿದ್ದೀವಿ. ಎಲ್ಲಾ ಚೆನ್ನಾಗಿದೆ. ನಿನ್ನೆ ಕುಟುಂಬದವರು ಮತ್ತು ಸಿಬ್ಬಂದಿ ಕೊರೊನಾ ಪರೀಕ್ಷೆ ಮಾಡಿಸಿದ್ದೇವೆ. ಎಲ್ಲರ ವರದಿ ನೆಗೆಟಿವ್ ಇದೆ. ಅಭಿಷೇಕ್ ಹೊರತುಪಡಿಸಿ ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದೇವೆ. ಅಭಿಷೇಕ್ ಬಂದ ನಂತರ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಇನ್ನು ನಾಳೆಯಿಂದ ಮತ್ತೆ ಕೆಲಸಕ್ಕೆ ಮರಳುವುದಾಗಿಯೂ ಹೇಳಿದ್ದಾರೆ.

  ಕಳೆದ ತಿಂಗಳು ಅಮಿತಾಬ್ ಕಣ್ಣಿನ ಶಸ್ತ್ರ ಚಿಕಿತ್ಸೆ ಒಳಗಾಗಿದ್ದರು. ಚೇತರಿಸಿಕೊಂಡಿರುವ ಬಚ್ಚನ್ ಸದ್ಯ ಕೊರೊನಾ ಲಸಿಕೆ ಪಡೆದು ಮತ್ತೆ ಕೆಲಸಕ್ಕೆ ಹೊರಡುವ ಉತ್ಸಾಹದಲ್ಲಿದ್ದಾರೆ.

  ಅಂದಹಾಗೆ ಕಳೆದ ವರ್ಷ ಅಮಿತಾಬ್ ಬಚ್ಚನ್ ಮತ್ತು ಪುತ್ರ ಅಭಿಷೇಕ್ ಬಚ್ಚನ್, ಐಶ್ವರ್ಯಾ ಮತ್ತು ಮೊಮ್ಮಗಳು ಆರಾಧ್ಯ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಎಲ್ಲರೂ ಮುಂಬೈನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

  Recommended Video

  ಪುನೀತ್ ರಾಜ್ ಕುಮಾರ್ ಮನವಿಗೆ ಸಚಿವ ಸುಧಾಕರ್ ಖಡಕ್ ಪ್ರತಿಕ್ರಿಯೆ | Filmibeat Kannada

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಅಮಿತಾಬ್ ಸದ್ಯ ಚಹ್ರೆ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಏಪ್ರಿಲ್ 9ಕ್ಕೆ ತೆರೆಗೆ ಬರುತ್ತಿದೆ. ಬ್ರಹ್ಮಾಸ್ತ್ರ ಚಿತ್ರ ಕೂಡ ಬಿಡುಗಡೆಯಾಗಬೇಕಿದೆ. ಇಂದು ಹೊಸ ಸಿನಿಮಾದ ಮುಹೂರ್ತ ನೆರವೇರಿದ್ದು ನಟಿ ರಶ್ಮಿಕಾ ಮಂದಣ್ಣ ತಂದೆಯ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ ಚಿತ್ರಕ್ಕೆ ಗುಡ್ ಬಾಯ್ ಎಂದು ಶೀರ್ಷಿಕೆ ಇಡಲಾಗಿದೆ. ಕೊನೆಯದಾಗಿ ಅಮಿತಾಬ್ ಸೂಜಿತ್ ಸರ್ಕಾರ್ ನಿರ್ದೇಶನದ ಗುಲಾಬೊ ಸಿತಾಬೊ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

  English summary
  Actor Amitabh Bachchan and his all family except Abhishek Bachchan get Covid-19 vaccine.
  Friday, April 2, 2021, 17:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X