ಅಮಿತಾಬ್ ಬಚ್ಚನ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ: ಇಂಟರೆಸ್ಟಿಂಗ್ ಸ್ಟೋರಿ ಬಿಚ್ಚಿಟ್ಟ ಬಿಗ್ ಬಿ
ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ದಂಪತಿಗೆ ಇಂದು ಮದುವೆ ವಾರ್ಷಿಕೋತ್ಸವದ ಸಂಭ್ರಮ. ಅಮಿತಾಬ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 47 ವರ್ಷಗಳು ತುಂಬಿದೆ. ಈ ಸಂಭ್ರಮದಲ್ಲಿ ಅಮಿತಾಬ್ ಮದುವೆ ಫೋಟೋ ಜೊತೆಗೆ ಇಂಟ್ರಸ್ಟಿಂಗ್ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.
Recommended Video
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅಮಿತಾಬ್ "47 ವರ್ಷಗಳು ಇವತ್ತಿಗೆ. ಇಂದು ಜೂನ್ 3 1973, ಒಂದುವೇಳೆ ಜಂಜೀರ್ ಯಶಸ್ವಿಯಾದರೆ ನಾವು ಕೆಲವು ಸ್ನೇಹಿತರ ಜೊತೆ ಲಂಡನ್ ಗೆ ಹೋಗಲು ನಿರ್ಧರಿಸಿದ್ದೆವು. ಅಪ್ಪ ಕೇಳಿದ್ದರು ಯಾರೆಲ್ಲ ಹೋಗುತ್ತಿದ್ದೀರಾ ಎಂದು. ನಾನು ಹೇಳಿದೆ. ಆದರೆ ಅವರು ನೀನು ಹೋಗುವ ಮೊದಲು ಅವಳನ್ನು ಮದುವೆಯಾಗಬೇಕು, ಇಲ್ಲ ಅಂದರೆ ಹೋಗಬೇಡ ಎಂದು ಹೇಳಿದರು. ನಾನು ಅದನ್ನು ಪಾಲಿಸಿದೆ"ಎಂದು ಮದುವೆ ಬಗ್ಗೆ ಇಂಟ್ರಸ್ಟಿಂಗ್ ರಹಸ್ಯವೊಂದನ್ನುಹಂಚಿಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ಮೊದಲು ಜಯಾ ಬಚ್ಚನ್ ಅವರನ್ನು 1970ರಲ್ಲಿ. ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಇಬ್ಬರು ಮೊದಲ ಬಾರಿಗೆ ಭೇಟಿ ಮಾಡುತ್ತಾರೆ. ಅದಕ್ಕು ಮೊದಲು ಅಮಿತಾಬ್, ಜಯಾ ಬಚ್ಚನ್ ಅವರನ್ನು ಮ್ಯಾಗಜಿನ್ ಕವರ್ ಫೋಟೋದಲ್ಲಿ ನೋಡಿದ್ದರು. ಭೇಟಿಯ ನಂತರ ಇಬ್ಬರು ಸ್ನೇಹಿತರಾಗುತ್ತಾರೆ. ಆ ನಂತರ 1972ರಲ್ಲಿ ರಿಲೀಸ್ ಆಗ ಏಕ್ ನಜರ್ ಚಿತ್ರದ ಚಿತ್ರೀಕರಣ ವೇಳೆ ಇಬ್ಬರು ಪ್ರೀತಿ ಪ್ರಾರಂಭವಾಯಿತು. 1973ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

47 ವರ್ಷಗಳ ಸಂತೋಷದ ದಾಂಪತ್ಯ ಜೀವನ ನಡೆಸಿರುವ ಅಮಿತಾಬ್ ದಂಪತಿಗೆ ಅಭಿಷೇಕ್ ಮತ್ತು ಶ್ವೇತಾ ಬಚ್ಚನ್ ಇಬ್ಬರು ಮಕ್ಕಳಿದ್ದಾರೆ. ಅಭಿಷೇಕ್ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಮಗಳು ಶ್ವೇತಾ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
77 ವರ್ಷದ ಅಮಿತಾಬ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಳಿವಯಸ್ಸಿನಲ್ಲಿಯೂ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸದ್ಯ ಅಮಿತಾಬ್ ಅಭಿನಯದ ಗುಲಾಬೋ ಸಿತಾಬೋ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು ಇದೆ ತಿಂಗಳು 12ಕ್ಕೆ ಒಟಿಟಿಯಲ್ಲಿ ತೆರೆಗೆ ಬರುತ್ತಿದೆ. ಜೊತೆಗೆ ರಣ್ಬೀರ್ ಮತ್ತು ಅಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾ ಸಹ ಕಾಣಿಸಿಕೊಂಡಿದ್ದಾರೆ.


Click it and Unblock the Notifications











