ಅಮಿತಾಬ್ ಮತ್ತು ಜಯಾ ಬಚ್ಚನ್ ಮದುವೆಗೆ 'ಜಂಜೀರ್' ಸಿನಿಮಾ ಪ್ರಮುಖ ಪಾತ್ರ ವಹಿಸಿದ್ದೇಗೆ?
ಬಾಲಿವುಡ್ ಪವರ್ ಕಪಲ್ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ದಂಪತಿಗೆ ಇಂದು (ಜೂನ್ 3) ಮದುವೆ ವಾರ್ಷಿಕೋತ್ಸವದ ಸಂಭ್ರಮ. ಅಮಿತಾಬ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 48 ವರ್ಷಗಳು ತುಂಬಿದೆ. ಬಾಲಿವುಡ್ ಈ ಸುಂದರ ಜೋಡಿಗೆ ಅಭಿಮಾನಿಗಳು ಮತ್ತು ಸಿನಿ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇನ್ನು ಈ ಸಂಭ್ರಮದಲ್ಲಿ ಅಮಿತಾಬ್ ಮದುವೆ ಫೋಟೋ ಶೇರ್ ಮಾಡಿ ವಿಶ್ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ತೆರೆ ಮೇಲೆ ಮತ್ತು ತೆರೆ ಹಿಂದೆಯೂ ಅದ್ಭುತ ಜೋಡಿಯಾಗಿ ಅಪಾರ ಅಭಿಮಾನಿಗಳ ಹೃದಯಗೆದ್ದಿದ್ದಾರೆ. 1973ರಲ್ಲಿ ಬಿಡುಗಡೆಯಾದ ಜಂಜೀರ್ ಸಿನಿಮಾದ ಸಕ್ಸಸ್ ಇಬ್ಬರ ಮದುವೆಗೆ ಪ್ರಮುಖ ಪಾತ್ರ ವಹಿಸಿದೆ. ಮುಂದೆ ಓದಿ...

ಜಂಜೀರ್ ಸಿನಿಮಾ ಸಕ್ಸಸ್
ಜಂಜೀರ್ ಅಮಿತಾಬ್ ಮತ್ತು ಜಯಾ ಬಚ್ಚನ್ ನಟನೆಯ ಎರಡನೇ ಸಿನಿಮಾ. ಬನ್ಸಿ ಬಿರ್ಜು ಸಿನಿಮಾ ಬಳಿಕ ಇಬ್ಬರು ಮತ್ತೆ ಸಂಜೀರ್ ನಲ್ಲಿ ಒಟ್ಟಿಗೆ ಕಾಣಿಸಿಕೊೆಂಡಿದ್ದರು. ಈ ಸಿನಿಮಾದ ಚಿತ್ರೀಕರಣ ವೇಳೆಗೆ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರ ಪ್ರೀತಿ ಉತ್ತುಂಗದಲ್ಲಿದ್ದ ಸಮಯ. ಅಷ್ಟರಲ್ಲೇ ಇಬ್ಬರ ನಡುವಿನ ಪ್ರೀತಿಯ ವಿಚಾರ ಬಾಲಿವುಡ್ ನಲ್ಲಿ ಗುಲ್ಲಾಗಿತ್ತು. ಜಂಜೀರ್ ಸಿನಿಮಾ ಕೂಡ ಸೂಪರ್ ಸಕ್ಸಸ್ ಆಗಿತ್ತು.

ಅಮಿತಾಬ್ ಗೆ ತಂದೆ ಹಾಕಿದ್ದ ಷರತ್ತು
ಸಿನಮಾದ ಸಕ್ಸಸ್ ಆಚರಿಸಲು ಜಂಜೀರ್ ತಂಡ ಲಂಡನ್ ಗೆ ಹೋಗಲು ಯೋಜನೆ ಹಾಕಿದ್ದರು. ಈ ವಿಚಾರವನ್ನು ಅಮಿತಾಬ್ ತನ್ನ ತಂದೆ ಹರಿವಂಶ್ ರಾಯ್ ಅವರಿಗೆ ತಿಳಿಸಿದಾಗ ಜಯಾ ಅವರನ್ನು ಜೊತೆಯಲ್ಲೇ ಕರೆದುಕೊಂಡು ಹೋಗುತ್ತೀರಾ ಎಂದು ಕೇಳುತ್ತೀರಾ ಎಂದು ಕೇಳಿದರು. ಹೌದು ಎಂದು ಹೇಳಿದಾಗ ಅಮಿತಾಬ್ ತಂದೆ ಇಬ್ಬರು ಒಟ್ಟಿಗೆ ಪ್ರವಾಸಕ್ಕೆ ಹೋಗುವ ಮೊದಲು ಮದುವೆಯಾಗಬೇಕು ಎಂದು ಷರತ್ತು ಹಾಕಿದರು.

1973ರಲ್ಲಿ ಮದುವೆ
ತಂದೆಯ ಮಾತಿನಂತೆ ಅಮಿತಾಬ್ ಪ್ರೀತಿಸಿದ ಯುವತಿ ಜಯಾ ಜೊತೆ ಸಪ್ತಪದಿ ತುಳಿಯಲು ಸಿದ್ಧರಾದರು. ತಕ್ಷಣ ಮದುವೆ ತಯಾರಿ ನಡೆದು ಜಯಾ ಬಚ್ಚನ್ ಅವರ ಸ್ನೇಹಿತರ ಸ್ಥಳ ಮಲಬಾರ್ ಬೆಟ್ಟದಲ್ಲಿ ಅಮಿತಾಬ್ ಮತ್ತು ಜಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ನವ ಜೋಡಿ ಲಂಡನ್ ಗೆ ಜಂಜೀರ್ ಸಕ್ಸಸ್ ಆಚರಣೆ ಮಾತ್ರವಲ್ಲದೆ ಹನಿಮೂನ್ ಸಹ ಮುಗಿಸಿಕೊಂಡು ವಾಪಸ್ ಆಗಿದ್ದರು.

ಇಬ್ಬರು ಮೊದಲು ಭೇಟಿಯಾಗಿದ್ದು ಎಲ್ಲಿ?
ಅಮಿತಾಬ್ ಬಚ್ಚನ್ ಮೊದಲು ಜಯಾ ಬಚ್ಚನ್ ಅವರನ್ನು 1970ರಲ್ಲಿ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಭೇಟಿ ಮಾಡುತ್ತಾರೆ. ಆದರೆ ಅದಕ್ಕೂ ಮೊದಲು ಅಮಿತಾಬ್, ಜಯಾ ಬಚ್ಚನ್ ಅವರನ್ನು ಮ್ಯಾಗಜಿನ್ ಕವರ್ ಫೋಟೋದಲ್ಲಿ ನೋಡಿದ್ದರು. ಫೋಟೋ ನೋಡಿ ಫಿದಾ ಆಗಿದ್ದರು. ಜಯಾ ಅವರನ್ನು ಭೇಟಿಯಾದ ನಂತರ ಇಬ್ಬರು ಸ್ನೇಹಿತರಾಗುತ್ತಾರೆ. ಬಳಿಕ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ಇಬ್ಬರ ನಡುವೆ ಪ್ರೀತಿಯಾಗಿ ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
Recommended Video

48 ವರ್ಷಗಳ ಸುಂದರ ದಾಂಪತ್ಯ
ಅಮಿತಾಬ್ ಮತ್ತು ಜಯಾ ಒಟ್ಟಿಗೆ ಅಭಿಮಾನ್, ಚುಪ್ ಚುಪ್ ಕೆ, ಶೋಲೆ, ಕಭಿ ಖುಷಿ ಕಭಿ ಗಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು 48 ವರ್ಷಗಳ ಸಂತೋಷದ ದಾಂಪತ್ಯ ಜೀವನ ಇವರದ್ದು. ಅಮಿತಾಬ್ ದಂಪತಿಗೆ ಅಭಿಷೇಕ್ ಮತ್ತು ಶ್ವೇತಾ ಬಚ್ಚನ್ ಇಬ್ಬರು ಮಕ್ಕಳಿದ್ದಾರೆ. ಅಭಿಷೇಕ್ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಮಗಳು ಶ್ವೇತಾ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.


Click it and Unblock the Notifications











