For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣಕ್ಕೆ ಹಿಂತಿರುಗಿದ ಬಿಗ್-ಬಿ ಅಮಿತಾಭ್ ಬಚ್ಚನ್

  |

  ಅಮಿತಾಭ್ ಬಚ್ಚನ್ ನಟಿಸುತ್ತಿರುವ 'ಚೆಹ್ರೆ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈ ಹಿಂದೆ ಬಿಡುಗಡೆಯಾಗಿತ್ತು. ಈ ಪೋಸ್ಟರ್‌ನಿಂದ ಚಿತ್ರದ ಬಗ್ಗೆ ಭಾರಿ ಕುತೂಹಲ ಹುಟ್ಟಿಕೊಂಡಿದೆ. ರೂಮಿ ಜಾಫರಿ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಈಗಾಗಲೇ ಟೀಸರ್ ಮತ್ತು ಟ್ರೈಲರ್ ಮೂಲಕ ಸಂಚಲನ ಸೃಷ್ಟಿಸಿದೆ.

  ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ಏಪ್ರಿಲ್ ತಿಂಗಳಲ್ಲೇ ಚೆಹ್ರೆ ಸಿನಿಮಾ ತೆರೆಗೆ ಬರಬೇಕಿತ್ತು. ಆದ್ರೆ, ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಸಾಧ್ಯವಾಗಲಿಲ್ಲ. ಇದೀಗ, ಲಾಕ್‌ಡೌನ್ ತೆರವುಗೊಂಡಿದ್ದು, ಬಾಕಿ ಉಳಿದಿರುವ ಕೆಲಸ ಮುಗಿಸಲು ಚಿತ್ರತಂಡ ಸಜ್ಜಾಗಿದೆ.

  ಬಾಲಿವುಡ್‌ನ 'ಗುಡ್ ಬೈ' ಪಾರ್ಟಿಯಲ್ಲಿ ರಶ್ಮಿಕಾ ಸಖತ್ ಡಾನ್ಸ್: ಫೋಟೋ ವೈರಲ್ ಬಾಲಿವುಡ್‌ನ 'ಗುಡ್ ಬೈ' ಪಾರ್ಟಿಯಲ್ಲಿ ರಶ್ಮಿಕಾ ಸಖತ್ ಡಾನ್ಸ್: ಫೋಟೋ ವೈರಲ್

  ಅಂದ್ಹಾಗೆ, ಚೆಹ್ರೆ ಸಿನಿಮಾದ ಕೊನೆಯ ಹಾಡೊಂದನ್ನು ಚಿತ್ರೀಕರಣ ಮಾಡಲು ಚಿತ್ರತಂಡ ಯೋಜಿಸಿದ್ದು, ಅದಕ್ಕಾಗಿ ತಯಾರಿ ಮಾಡಿದೆ. ಇದು ಸಿನಿಮಾದ ಟೈಟಲ್ ಹಾಡಾಗಿದ್ದು, ಅಮಿತಾಭ್ ಬಚ್ಚನ್, ಇಮ್ರಾನ್ ಹಶ್ಮಿ ಕಾಣಿಸಿಕೊಳ್ಳಲಿದ್ದಾರೆ. ಮುಂಬೈನಲ್ಲಿ ಅದಕ್ಕಾಗಿ ಸೆಟ್ ಹಾಕಲಾಗಿದ್ದು, ಶೀಘ್ರದಲ್ಲೇ ಶೂಟಿಂಗ್ ನಡೆಯಲಿದೆ ಎಂದು ವರದಿಯಾಗಿದೆ.

  ಈ ಹಿಂದೆ ಅಮಿತಾಭ್ ಬಚ್ಚನ್ ಜೊತೆ 'ಬಿಗ್ ಬುಲ್' ನಿರ್ದೇಶನ ಮಾಡಿದ್ದ ಕುಕ್ಕಿ ಗುಲಾಟಿ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ರೂಮಿ ಜಾಫರಿ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ವಿಶಾಲ್-ಶೇಖರ್ ಜೊತೆ 107 ಜನ ಸಂಗೀತ ತಂತ್ರಜ್ಞರು ಹಾಡಿಗೆ ಧ್ವನಿಗೂಡಿಸಲಿದ್ದಾರಂತೆ.

  ಈ ಕುರಿತು ಚಿತ್ರದ ನಿರ್ಮಾಪಕ ಆನಂದ್ ಪಂಡಿತ್ ಪ್ರತಿಕ್ರಿಯಿಸಿ, ''ಈ ಚಿತ್ರ ನಮ್ಮೆಲ್ಲರಿಗೂ ಅತ್ಯಂತ ವಿಶೇಷವಾಗಿದೆ. ಇದು ಒಂದು ರೋಮಾಂಚಕಾರಿ ಸಿನಿಮಾವಾಗಿದೆ. ದೊಡ್ಡ ಪರದೆಗೆ ತರಲು ನಾವು ಒಂದು ವರ್ಷದಿಂದ ಕಾಯುತ್ತಿದ್ದೇವೆ. ಇನ್ನು ಚಿತ್ರದ ಟೈಟಲ್ ಹಾಡನ್ನು ಬಚ್ಚನ್ ಜಿ ಅವರೊಂದಿಗೆ ಶೂಟ್ ಮಾಡುತ್ತಿರುವುದು ನನಗೆ ಖುಷಿಯಾಗಿದೆ. ಅದಕ್ಕ್ ಬೇಕಾದ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ನಿರ್ವಹಿಸಿದ್ದೇವೆ. ಇದನ್ನು ಎಲ್ಲರಿಗೂ ಸ್ಮರಣೀಯ ಶೂಟಿಂಗ್ ಅನುಭವವನ್ನಾಗಿ ಮಾಡುವಲ್ಲಿ ಕೆಲಸ ಮಾಡುತ್ತಿದ್ದೇವೆ'' ಎಂದು ತಿಳಿಸಿದರು.

  Amitabh Bachchan Back On The Sets Of Chehre

  ರೂಮಿ ಜಾಫರಿ ನಿರ್ದೇಶನ ಮಾಡುತ್ತಿರುವ ಚೆಹ್ರೆ ಸಿನಿಮಾ ಮಿಸ್ಟರಿ ಥ್ರಿಲ್ಲರ್ ಕಥೆ ಹೊಂದಿದೆ. ಅಮಿತಾಬ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿಗ್ ಬಿ ವಕೀಲರ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಹಶ್ಮಿ ಈ ಚಿತ್ರದಲ್ಲಿ ಉದ್ಯಮಿ. ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಮತ್ತು ಸರಸ್ವತಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಕಪೂರ್, ಕ್ರಿಸ್ಟಲ್ ಡಿಸೋಜ, ಧೃತಿಮನ್ ಚಟರ್ಜಿ, ರಘುಬೀರ್ ಯಾದವ್, ಸಿದ್ಧಾಂತ್ ಕಪೂರ್ ಮತ್ತು ರಿಯಾ ಚಕ್ರವರ್ತಿ ನಟಿಸಿದ್ದಾರೆ.

  2020ರಲ್ಲಿ ಅಮಿತಾಭ್ ಬಚ್ಚನ್‌ಗೆ ಕೊರೊನಾ

  ಶಿಲ್ಪಾ ಶೆಟ್ಟಿ ಪತಿ ವಿರುದ್ಧ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟ ಪೂನಂ ಪಾಂಡೆ

  ಕಳೆದ ವರ್ಷ ಹಿರಿಯ ನಟ ಅಮಿತಾಭ್ ಬಚ್ಚನ್‌ಗೆ ಕೊರೊನಾ ಸೋಂಕು ತಗುಲಿತ್ತು. ಇಡೀ ಕುಟುಂಬಕ್ಕೆ ಪಾಸಿಟಿವ್ ಬಂದಿತ್ತು. ನಂತರ ಆಸ್ಪತ್ರೆಗೆ ಸೇರಿದ್ದ ಅಮಿತಾಭ್ ಗುಣಮುಖರಾಗಿದ್ದರು.

  English summary
  Bollywood Megastar Amitabh Bachchan back on the set of Chehre movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X