ಅಮಿತಾಬ್ ಹುಟ್ಟುಹಬ್ಬ: 80ರ ಕಡೆ ಪಯಣ ಬೆಳೆಸಿದ ಬಿಗ್ ಬಿಗೆ 'ಗ್ಯಾಂಗ್‌ಸ್ಟರ್' ಎಂದು ರಣ್ವೀರ್ ಸಿಂಗ್

ಬಾಲಿವುಡ್ ಮೆಗಾಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ 79ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭಾರತೀಯ ಸಿನಿಮಾರಂಗದ ಲೆಜೆಂಡ್ ಅಮಿತಾಬ್ ಬಚ್ಚನ್ ಅವರಿಗೆ ಅಭಿಮಾನಿಗಳು ಮತ್ತು ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇಳಿ ವಯಸ್ಸಿನಲ್ಲೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಮಿತಾಬ್ ಎಲ್ಲರಿಗೂ ಸ್ಫೂರ್ತಿ. ಈಗಲೂ ಬೇಡಿಕೆಯ ನಟನಾಗಿರುವ ಅಮಿತಾಬ್ ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ.

ನಿರ್ಮಾಪಕ ಆನಂದ್​ ಪಂಡಿತ್​ ಅವರ ಮನೆಯಲ್ಲಿ ಈ ಬಾರಿ ಅಮಿತಾಬ್​ ಬಚ್ಚನ್​ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಪಾರ್ಟಿಗೆ ತೆರಳುತ್ತಿರುವಾಗ ಕ್ಲಿಕ್ಕಿಸಿದ ಫೋಟೋವನ್ನು ಬಿಗ್​ ಬಿ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಮಿತಾಬ್ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ಶೇರ್ ಮಾಡಿ ಅಮಿತಾಬ್ "80ರ ಕಡೆಗೆ ಪಯಣ" ಎಂದು ಕ್ಯಾಪ್ಷನ್​ ನೀಡಿದ್ದಾರೆ. ಕೆಲವೇ ಗಂಟೆ ಕಳೆಯುವುದರೊಳಗೆ ಇನ್​ಸ್ಟಾಗ್ರಾಮ್​ನಲ್ಲಿ ಈ ಫೋಟೋಗೆ 7 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಒತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕಮೆಂಟ್​ಗಳ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಅಮಿತಾಬ್ ಮಗಳು, ಮೊಮ್ಮಗಳು ಸೇರಿದಂತೆ ಬಾಲಿವುಡ್ ಅನೇಕ ಗಣ್ಯರು ವಿಶ್ ಮಾಡಿದ್ದಾರೆ. ಇನ್ನು ವಿಶೇಷ ಎಂದರೆ ಬಾಲಿವಡ್ ಖ್ಯಾತ ನಟ ರಣ್ವೀರ್ ಸಿಂಗ್ ಕಾಮೆಂಟ್ ಮಾಡಿ ಗ್ಯಾಂಗ್‌ಸ್ಟರ್ ಎಂದು ಹೇಳಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 Amitabh Bachchan Birthday: Ranveer Singh calls Amitabh Bachchan gangster

ಇನ್ನು ಬಾಲಿವುಡ್ ಸ್ಟಾರ್ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸ್ಟಾರ್ ಮತ್ತು ಸೌತ್ ಸ್ಟಾರ್ ಕಲಾವಿದರು ಕೂಡ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಟ ಚಿರಂಜೀವಿ, ಪ್ರಭಾಸ್, ಮಹೇಶ್ ಬಾಬು ಸೇರಿದಂತೆ ಅನೇಕ ಸ್ಟಾರ್ ಅಮಿತಾಬ್ ಗೆ ವಿಶ್ ಮಾಡಿದ್ದಾರೆ.

ಅಮಿತಾಬ್ ಸದ್ಯ ಸಿನಿಮಾ ಜೊತೆಗೆ ಕಿರುತೆರೆಯ 'ಕೌನ್​ ಬನೇಗಾ ಕರೋಡ್​ಪತಿ' ಕಾರ್ಯಕ್ರಮದ ನಿರೂಪಣೆಯಲ್ಲೂ ತೊಡಗಿಕೊಂಡಿದ್ದಾರೆ. ಈ ಕಾರ್ಯಕ್ರಮದ 13ನೇ ಸೀಸನ್​ ಪ್ರಸಾರ ಆಗುತ್ತಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಇಮ್ರಾನ್​ ಹಷ್ಮಿ ಜೊತೆ ಅಮಿತಾಭ್​ ನಟಿಸಿದ್ದ 'ಜೆಹ್ರೆ' ಚಿತ್ರ ಆಗಸ್ಟ್ 27ರಂದು ತೆರೆಕಂಡಿತ್ತು. ಸದ್ಯ ಅವರ ಕೈಯಲ್ಲಿ ಹಲವು ಸಿನಿಮಾಗಳಿಗೆ ರಶ್ಮಿಕಾ ಮಂದಣ್ಣ ಜೊತೆ 'ಗುಡ್​ ಬೈ' ಸಿನಿಮಾದಲ್ಲಿ ಬಿಗ್​ ಬಿ ನಟಿಸುತ್ತಿದ್ದಾರೆ. 'ಜುಂಡ್​', 'ಬ್ರಹ್ಮಾಸ್ತ್ರ', 'ಮೇಡೇ', 'ಊಂಚಾಯಿ' ಮುಂತಾದ ಚಿತ್ರಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇನ್ನು ಬಾಲಿವುಡ್ ಮಾತ್ರವಲ್ಲದೆ ಸೌತ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. 'ಮಹಾನಟಿ' ಖ್ಯಾತಿಯ ನಿರ್ದೇಶಕ ನಾಗ್​ ಅಶ್ವಿನ್​ ಜೊತೆಗೂ ಅಮಿತಾಬ್​ ಒಂದು ಸಿನಿಮಾ ಮಾಡುತ್ತಿದ್ದು, ಅದರ ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ. ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ದೀಪಿಕಾ ಪಡುಕೋಣೆ ಬಣ್ಣ ಹಚ್ಚುತ್ತಿದ್ದಾರೆ.

More from Filmibeat

English summary
Amitabh Bachchan Birthday: Ranveer Singh calls Amitabh Bachchan gangster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X