For Quick Alerts
  ALLOW NOTIFICATIONS  
  For Daily Alerts

  ಪೋಲೆಂಡ್ ನಿಂದ 50 ಆಕ್ಸಿಜನ್ ಸಾಂದ್ರಕ ಖರೀದಿಸಿದ ಬಿಗ್ ಬಿ ಅಮಿತಾಬ್ ಬಚ್ಚನ್

  |

  ದೇಶದಲ್ಲಿ ಕೋವಿಡ್-19ನಿಂದ ಭೀಕರಸ್ಥಿತಿ ಉಂಟಾಗಿದ್ದು, ಪರಿಹಾರ ಕಾರ್ಯಕ್ಕೆ ಅನೇಕರು ಸಹಾಯ ಮಾಡುತ್ತಿದ್ದಾರೆ. ಕೆಲವು ಸಿನಿಮಾ ಸೆಲೆಬ್ರಿಟಿಗಳು ಸಹ ಕೈ ಜೋಡಿಸಿದ್ದು, ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ 2 ಕೋಟಿ ದೇಣಿಗೆ ನೀಡಿದ್ದಲ್ಲದೇ ವಿದೇಶದಿಂದ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸಿ ದೇಶಕ್ಕೆ ಜೀವರಕ್ಷಕ ವ್ಯವಸ್ಥೆ ಮಾಡಿಸಿದ್ದಾರೆ.

  ಸಂಕಷ್ಟದ ಪರಿಸ್ಥಿತಿಯಲ್ಲೂ ಸೆಲೆಬ್ರಿಟಿಗಳು ಎನಿಸಿಕೊಂಡವರು ಸಹಾಯ ಮಾಡುತ್ತಿಲ್ಲ ಎಂದು ಅನೇಕರು ಆಕ್ಷೇಪವೆತ್ತಿದ್ದರು. ಅಮಿತಾಬ್ ವಿರುದ್ಧ ಅನೇಕರು ಅಸಮಾಧಾನ ಹೊರಹಾಕಿದ್ದರು. ಇದರಿಂದ ಬೇಸರಗೊಂಡ ಅಮಿತಾಬ್ ಕೋವಿಡ್ ಸಂಕಷ್ಟದ ಸಮಯದಲ್ಲಿ ತಾವು ಮಾಡಿದ ಸಹಾಯದ ಪಟ್ಟಿ ನೀಡುವ ಮೂಲಕ ಉತ್ತರ ನೀಡಿದ್ದರು.

  ಅಮಿತಾಬ್ ಬಚ್ಚನ್ ಏನೂ ಮಾಡಿಲ್ಲ ಎಂದವರಿಗೆ ಸಮಾಜ ಸೇವೆಯ ಪಟ್ಟಿ ನೀಡಿದ ನಟಅಮಿತಾಬ್ ಬಚ್ಚನ್ ಏನೂ ಮಾಡಿಲ್ಲ ಎಂದವರಿಗೆ ಸಮಾಜ ಸೇವೆಯ ಪಟ್ಟಿ ನೀಡಿದ ನಟ

  ಕೋವಿಡ್-19 ವಿರುದ್ಧದ ಹೋರಾಟಕ್ಕೆ 2 ಕೋಟಿ ರೂ. ದೇಣಿಗೆ ನೀಡಿದ ಬೆನ್ನಲ್ಲೇ ಅಮಿತಾಬ್ ಆಕ್ಸಿಜನ್ ಮತ್ತು ವೆಂಟಿಲೇಟರ್ ಸಹಾಯ ಮಾಡುತ್ತಿದ್ದಾರೆ.

  ಅಮಿತಾಬ್ ಪೋಲೆಂಡ್ ನಿಂದ ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಿದ್ದಾರೆ. ಆಕ್ಸಿಜನ್ ಸಾಂದ್ರಕಗಳನ್ನು ಬೇರೆ ಮೂಲದಿಂದ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಅದರಂತೆ ಈಗ ಪೋಲೆಂಡ್ ನಿಂದ ಖರೀದಿಸುವ ಮೂಲಕ ದೇಶಕ್ಕೆ ಜೀವರಕ್ಷಕ ತಂದಿದ್ದಾರೆ.

  ಪೋಲೆಂಡ್ ಜೊತೆ ಅಮಿತಾಬ್ ವಿಶೇಷವಾದ ಸಂಬಂಧ ಹೊಂದಿದ್ದಾರೆ. ಅಮಿತಾಬ್ ತಂದೆ, ಪ್ರಸಿದ್ಧ ಕವಿ ಹರಿವಂಶ್ ರೈ ಬಚ್ಚನ್ ಅವರನ್ನು ಗೌರವಿಸಿದ ನಗರ. ಈಗ ಅದೆ ನಗರದಿಂದ ಭಾರತಕ್ಕೆ ಆಕ್ಸಿಜನ್ ತರಿಸಿದ್ದಾರೆ.

  ಪೋಲೆಂಡ್ ನ ರೋಕ್ಲ ನಗರದ ಮೇಯರ್ ಮತ್ತು ಭಾರತದ ರಾಯಭಾರಿ ಜೊತೆ ಮಾತುಕತೆ ನಡೆಸಿ 50 ಆಕ್ಸಿಜನ್ ಸಾಂದ್ರಕಗಳನ್ನು ಆರ್ಡರ್ ಮಾಡಿದ್ದಾರೆ. ಈ ಬಗ್ಗೆ ಅಮಿತಾಬ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದು, ಆಕ್ಸಿಜನ್ ತುರ್ತು ಅವಶ್ಯಕತೆ ಇದ್ದ ಕಾರಣ ತ್ವರಿತ ಮೂಲಗಳು ಸಿಗದಿದ್ದಾಗ ನನ್ನ ಸ್ನೇಹಿತ ಮತ್ತು ಪೋಲೆಂಡ್ ನ ರೊಕ್ಲಾದಲ್ಲಿರುವ ಭಾರತೀಯ ರಾಯಭಾರಿ ಸಹಾಯ ಕೇಳಿದೆ. ತಕ್ಷಣ 50 ಆಕ್ಸಿಜನ್ ಸಾಂದ್ರಕಗಳಿಗೆ ಆರ್ಡರ್ ಮಾಡಿದ್ದೀನಿ' ಎಂದಿದ್ದಾರೆ.

  ಮನೆಬಾಗಿಲಿಗೆ ಆಕ್ಸಿಜನ್ ಬರ್ಬೇಕಾ? ಹಾಗಾದ್ರೆ ಸೋನು ಸೂದ್ ಸಂಪರ್ಕಿಸಿ | Filmibeat Kannada

  ಈ ಸಾಂದ್ರಕಗಳು ಮೇ 15 ರಂದು ತಲುಪಲಿದೆ. ಇದಕ್ಕೆ ಸಹಾಯಕರಾದ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದಿದ್ದಾರೆ. ಈಗಾಗಲೇ 20 ವೆಂಟಿಲೇಟರ್ ಆರ್ಡರ್ ಮಾಡಿದ್ದು ಅದರಲ್ಲಿ 10 ವೆಂಟಿಲೇಟ್ ಗಳನ್ನು ಬಿಎಂಸಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಇನ್ನು ಉಳಿದ 10 ವೆಂಟಿಲೇಟರ್ ಗಳು ಈ ತಿಂಗಳ ಕೊನೆಯಲ್ಲಿ ತುಲುಪಲಿದ್ದು, ಬೇರೆ ಬೇರೆ ಆಸ್ಪತ್ರೆಗೆ ನೀಡುವುದಾಗಿ ಹೇಳಿದ್ದಾರೆ.

  English summary
  Bollywood Actor Amitabh Bachchan buys 50 oxygen concentrator from Poland.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X