For Quick Alerts
  ALLOW NOTIFICATIONS  
  For Daily Alerts

  ಕೊರೊನಾ ನಡುವೆಯೂ ಐಷಾರಾಮಿ ಮನೆ ಖರೀದಿಸಿದ ನಟ ಅಮಿತಾಬ್ ಬಚ್ಚನ್: ಬೆಲೆ ಎಷ್ಟು?

  |

  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹೊಸ ಮನೆ ಖರೀದಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಕೊರೊನಾ ಸಂಕಷ್ಟದಲ್ಲಿರೋರಿಗೆ ನೆರವಿನ ಹಸ್ತ ಚಾಚುತ್ತಿದ್ದ ಅಮಿತಾಬ್ ಈಗ ಹೊಸ ಮನೆಯ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

  ಬಿಗ್ ಬಿ ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ್ದಾರೆ. 31 ಕೋಟಿ ರೂ. ಬೆಲೆ ಬಾಳುವ ಡ್ಯೂಪ್ಲೆಕ್ಸ್ ಮನೆ ಇನ್ನುವ ಮಾತು ಕೇಳಿಬರುತ್ತಿದೆ. 6 ಕಾರುಗಳನ್ನು ಪಾರ್ಕ್ ಮಾಡುವ ಜಾಗವಿದ್ದು, 27 ಮತ್ತು 28ನೇ ಮಹಡಿಯಲ್ಲಿದೆಯಂತೆ. ಕ್ರಿಸ್ಟಲ್ ಪ್ರೈಡ್ ಗ್ರೂಪ್ ಬಿಲ್ಡರ್ ನಿಂದ ಮನೆ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.

  ಚಂಡಮಾರುತದ ಹೊಡೆತಕ್ಕೆ ಮುಳುಗಿದ ಅಮಿತಾಬ್ ಬಚ್ಚನ್ ಕಚೇರಿಚಂಡಮಾರುತದ ಹೊಡೆತಕ್ಕೆ ಮುಳುಗಿದ ಅಮಿತಾಬ್ ಬಚ್ಚನ್ ಕಚೇರಿ

  ಕೊರೊನಾದಿಂದ ತೀವ್ರ ನಷ್ಟದಲ್ಲಿರುವ ರಿಯಲ್ ಎಸ್ಟೇಟ್ ವ್ಯವಹಾರ ಹೆಚ್ಚಿಸುವ ದೃಷ್ಟಿಯಿಂದ ಐಷಾರಾಮಿ ಅಪಾರ್ಟ್ಮೆಂಟ್ ಗಳ ಮಾರಾಟಕ್ಕೆ ಉತ್ತೇಜನ ನೀಡಲಾಗಿದೆ. ಹಾಗಾಗಿ ಮಹಾರಾಷ್ಟ್ರ ಸರ್ಕಾರ ಕಳೆದ ವರ್ಷ ಡಿಸೆಂಬರ್ 31ರ ವರೆಗೆ ವಸತಿ ಘಟಕಗಳ ಮೇಲಿನ ಸ್ಟ್ಯಾಂಪ್ ಸುಂಕವನ್ನು 5 ಪ್ರತಿಶತಿಂದ 2 ಪ್ರತಿಶತಕ್ಕೆ ತಾತ್ಕಾಲಿಕವಾಗಿ ಕಡಿಮೆ ಮಾಡಿತ್ತು. 2021ರ ಜನವರಿ 1ರಿಂದ ಮಾರ್ಚ್ 31ರ ವರೆಗೆ ಸ್ಟ್ಯಾಂಪ್ ಡ್ಯೂಟಿ 3 ಪ್ರತಶತದಷ್ಟಿತ್ತು. ಈ ಯೋಜನೆಯಲ್ಲಿ ಅನೇಕ ಸೆಲೆಬ್ರಿಟಿಗಳು, ಉದ್ಯಮಿಗಳು ಲಾಭ ಪಡೆದಿದ್ದಾರೆ.

  ಸೀಲ್ ಡೌನ್ ಆಗಿರೋ ಏರಿಯಾದಲ್ಲಿ Harshaka ಮತ್ತು Bhuvan ಮಾಡಿದ್ದೇನು ನೋಡಿ | Filmibeat Kannada

  ನಟಿ ಸನ್ನಿ ಲಿಯೋನ್ ಮತ್ತು ನಿರ್ದೇಶಕ ಆನಂದ್ ಎಲ್ ರೈ ಕೂಡ ಇದೇ ಯೋಜನೆಯಲ್ಲಿ ಮನೆಯ ಖರೀದಿಸಿದ್ದಾರೆ. ಸನ್ನಿ ಲಿಯೋನ್ 16 ಕೋಟಿ ರೂ. ಬೆಲೆ ಬಾಳುವ ಮನೆ ಖರೀದಿಸಿದ್ದು, ಆನಂದ್ ಎಲ್ ರೈ 25.3 ಕೋಟಿ ರೂ. ಬೆಲೆ ಬಾಳುವ ಮನೆ ಖರೀದಿಸಿದ್ದಾರೆ ಎನ್ನಲಾಗಿದೆ.

  English summary
  Bollywood Actor Amitabh Bachchan buys duplex worth Rs 31 crore in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X