twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ವೈರಸ್ ಬಗ್ಗೆ ಮತ್ತೆ ತಪ್ಪು ಮಾಹಿತಿ ನೀಡಿದ ಅಮಿತಾಬ್ ಬಚ್ಚನ್

    |

    ಜೋರಾಗಿ ಜಪ್ಪಾಳೆ ತಟ್ಟಿ, ಗಂಟೆ, ಜಾಗಟೆ ಬಾರಿಸಿದರೆ ವೈರಸ್‌ಗಳ ಶಕ್ತಿ ಕುಂದುತ್ತದೆ ಎಂಬ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಗುರಿಯಾಗಿದ್ದ ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್, ಕೊರೊನಾ ವೈರಸ್‌ ಕುರಿತಂತೆ ಮತ್ತೊಂದು ತಪ್ಪು ಮಾಹಿತಿ ಹಂಚಿಕೊಂಡಿದ್ದಾರೆ.

    ಕೊರೊನಾ ವೈರಸ್ ನೊಣಗಳ ಮೂಲಕವೂ ಹರಡುತ್ತದೆ ಎಂದು ಚೀನಾದ ತಜ್ಞರು ಹೇಳಿದ್ದಾರೆ ಎಂದು ಅಮಿತಾಬ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಕೊರೊನಾ ವೈರಸ್ ಯಾವುದೇ ರೀತಿಯ ನೊಣಗಳ ಮೂಲಕ ಹರಡುವುದಿಲ್ಲ ಎಂದು ದೇಶದ ಆರೋಗ್ಯ ಸಚಿವಾಲಯ ಸ್ಪಷ್ಟೀಕರಣ ನೀಡಿದೆ.

    ಚಪ್ಪಾಳೆ ತಟ್ಟಿದರೆ ವೈರಸ್ ಸಾಯುತ್ತದೆ ಎಂದ ಅಮಿತಾಬ್ ಬಚ್ಚನ್ ಟ್ವೀಟ್ ಡಿಲೀಟ್!ಚಪ್ಪಾಳೆ ತಟ್ಟಿದರೆ ವೈರಸ್ ಸಾಯುತ್ತದೆ ಎಂದ ಅಮಿತಾಬ್ ಬಚ್ಚನ್ ಟ್ವೀಟ್ ಡಿಲೀಟ್!

    ಬುಧವಾರ ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, ಮಲ, ತ್ಯಾಜ್ಯಗಳ ಮೇಲೆ ಕೂರುವ ಸಾಮಾನ್ಯ ನೊಣಗಳ ಮೂಲಕವೂ ಕೊರೊನಾ ವೈರಸ್ ಹರಡಬಹುದು ಎಂದು ಚೀನಾದ ಪರಿಣತರು ಪತ್ತೆಹಚ್ಚಿದ್ದಾರೆ ಎಂಬುದಾಗಿ ಹೇಳಿದ್ದರು.

    ನೀವು ಪ್ರಮುಖ ಪಾತ್ರ ವಹಿಸಬೇಕು

    ನೀವು ಪ್ರಮುಖ ಪಾತ್ರ ವಹಿಸಬೇಕು

    'ಇಂದು ನಾನು ನಿಮ್ಮೊಂದಿಗೆ ಬಹಳ ಮುಖ್ಯವಾದ ಮಾಹಿತಿಯೊಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ದೇಶವು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದೆ. ಮತ್ತು ನೀವು ಈ ಹೋರಾಟದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಬೇಕಿದೆ' ಎಂದು ಅಮಿತಾಬ್ ಹೇಳಿದ್ದಾರೆ.

    ಮಲದಲ್ಲಿ ಜೀವಂತ ಇರುತ್ತದೆ

    ಮಲದಲ್ಲಿ ಜೀವಂತ ಇರುತ್ತದೆ

    'ನಿಮಗೆ ಗೊತ್ತೇ? ಇತ್ತೀಚಿನ ಅಧ್ಯಯನವೊಂದರಲ್ಲಿ ಚೀನಾದ ಪರಿಣತರು ಕೊರೊನಾ ವೈರಸ್ ಹಲವು ವಾರಗಳವರೆಗೂ ಮನುಷ್ಯರ ಮಲಗಳಲ್ಲಿಯೂ ಜೀವಂತವಾಗಿ ಇರಬಲ್ಲದು ಎಂಬುದನ್ನು ಕಂಡುಕೊಂಡಿದ್ದಾರೆ' ಎಂದು ಅಮಿತಾಬ್ ತಿಳಿಸಿದ್ದಾರೆ.

    ಈಗ ನಿಮ್ಮ ವರ್ಕೌಟ್ ವಿಡಿಯೋ ಎಲ್ಲ ಬೇಕಾ? 'ಸ್ಟಾರ್‌'ಗಳಿಗೆ ಛಡಿಯೇಟು ಕೊಟ್ಟ ನಿರ್ದೇಶಕಿ: ವಿಡಿಯೋಈಗ ನಿಮ್ಮ ವರ್ಕೌಟ್ ವಿಡಿಯೋ ಎಲ್ಲ ಬೇಕಾ? 'ಸ್ಟಾರ್‌'ಗಳಿಗೆ ಛಡಿಯೇಟು ಕೊಟ್ಟ ನಿರ್ದೇಶಕಿ: ವಿಡಿಯೋ

    ನೊಣದ ಮೂಲಕ ಹರಡುತ್ತದೆ

    ನೊಣದ ಮೂಲಕ ಹರಡುತ್ತದೆ

    'ಈ ವೈರಸ್ ತಗುಲಿದವರು ಕಾಯಿಲೆಯಿಂದ ಚೇತರಿಸಿಕೊಂಡರೂ ಆತನ ಮಲದಲ್ಲಿ ವೈರಸ್ ಜೀವಂತವಾಗಿ ಇರಬಲ್ಲದು. ಅದರ ಮೇಲೆ ನೊಣ ಕುಳಿತುಕೊಂಡರೆ, ಬಳಿಕ ಅದು ತರಕಾರಿ ಅಥವಾ ಹಣ್ಣು ಅಥವಾ ಇತರೆ ಆಹಾರ ಪದಾರ್ಥಗಳ ಮೇಲೆ ಕುಳಿತುಕೊಂಡರೆ ಈ ಕಾಯಿಲೆ ಇನ್ನಷ್ಟು ಹರಡಬಹುದು' ಎಂದು ಪ್ರತಿಪಾದಿಸಿದ್ದಾರೆ.

    ನೊಣಗಳಿಂದ ಹರಡುವುದಿಲ್ಲ

    ನೊಣಗಳಿಂದ ಹರಡುವುದಿಲ್ಲ

    ಆದರೆ ಇದನ್ನು ಆರೋಗ್ಯ ಸಚಿವಾಲಯ ನಿರಾಕರಿಸಿದೆ. 'ನಾನು ಅಮಿತಾಬ್ ಅವರ ಟ್ವೀಟ್ ನೋಡಿಲ್ಲ. ಆದರೆ ಇದು ಸೋಂಕಿನಿಂದ ಹರಡುವ ಕಾಯಿಲೆ ಮತ್ತು ಇದು ನೊಣಗಳ ಮೂಲಕ ಹರಡುವುದಿಲ್ಲ' ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಹೇಳಿದ್ದಾರೆ.

    ಕೊರೊನಾ: ಸಾವಿನ ಕದತಟ್ಟಿ ಹಿಂದಿರುಗಿದ ಹಾಲಿವುಡ್ ನಟಿಯ ಬಹಿರಂಗ ಪತ್ರಕೊರೊನಾ: ಸಾವಿನ ಕದತಟ್ಟಿ ಹಿಂದಿರುಗಿದ ಹಾಲಿವುಡ್ ನಟಿಯ ಬಹಿರಂಗ ಪತ್ರ

    English summary
    Bollywood star Amitabh Bachchan has claimed coronavirus can spread through flies. Health ministry denied it.
    Friday, March 27, 2020, 8:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X