For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅಮಿತಾಬ್ ಗೆ ಮಗನಿಂದ ಭಾವನಾತ್ಮಕ ಪತ್ರ

  |

  50 ವರ್ಷಗಳ ಹಿಂದೆ, ಇದೆ ದಿನ ಅಂದರೆ ನವೆಂಬರ್ 7, 1969 'ಸಾತ್ ಹಿಂದೂಸ್ತಾನಿ' ಚಿತ್ರದ ಮೂಲಕ 6 ಅಡಿ ಎತ್ತರದ, ಅಮಿತಾಬ್ ಬಚ್ಚನ್ ದೊಡ್ಡ ಪರದೆಯ ಮೇಲೆ ನಾಯಕನಾಗಿ ಮಿಂಚುವ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಅಮಿತಾಬ್ ಅಭಿನಯಕ್ಕೆ ಇಡೀ ಬಾಲಿವುಡ್ ಸಾಕ್ಷಿಯಾಗಿತ್ತು. ಈ ವ್ಯಕ್ತಿ ಮುಂದೊಂದು ದಿನ ಇಡೀ ಜಗತ್ತೆ ಕೊಂಡಾಡುವ ಮಹಾನ್ ವ್ಯಕ್ತಿಯಾಗಿ ಬೆಳೆದುನಿಲ್ಲುತ್ತಾರೆ ಎಂದು ಬಹುಶಃ ಅಂದು ಯಾರು ಊಹಿಸಿರಲಿಕ್ಕಿಲ್ಲ.

  'ಸಾತ್ ಹಿಂದೂಸ್ತಾನಿ' ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಮಿತಾಬ್ ಇಂದು 50 ವರ್ಷಗಳನ್ನು ಪೂರೈಸಿದ್ದಾರೆ. 50 ವರ್ಷಗಳ ಯಶಸ್ವಿ ಪಯಣ ಅಂದರೆ ಅದೂ ಸುಲಭದ ಸಾಧನೆಯಲ್ಲ, ಈ 50 ವರ್ಷಗಳಲ್ಲಿ ಅವರು ಕಂಡ ಏಳು-ಬೀಳಗಳೆಷ್ಟೊ, ಹೆಚ್ಚಾಗಿ ಅಮಿತಾಬ್ ಶ್ರಮ ಇಂದು ಲೆಜೆಂಡ್ ಸ್ಥಾನದಲ್ಲಿ ನಿಲ್ಲಿದೆ.

  ಅಮಿತಾಭ್ ಬಚ್ಚನ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಅಮಿತಾಭ್ ಬಚ್ಚನ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

  ಚಿತ್ರರಂಗದಲ್ಲಿ ಯಶಸ್ವಿಯಾಗಿ ಅರ್ಧ ಶತಕ ಪೂರೈಸಿದ ಅಮಿತಾಬ್ ಗೆ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ. ಈ 50 ವರ್ಷಗಳಲ್ಲಿ ಅಮಿತಾಬ್ ಮಾಡಿರದ ಪಾತ್ರಗಳೆ ಇಲ್ಲ. ತರಹೇವಾರಿ ಪಾತ್ರಗಳ ಮೂಲಕ ಚಿತ್ರಪ್ರಿಯರನ್ನು ರಂಜಿಸುತ್ತ ಬಂದಿದ್ದಾರೆ. ಬಿಗ್ ಬಿ ಪ್ರತಿಯೊಬ್ಬ ಕಲಾವಿದರಿಗೂ ಸ್ಫೂರ್ತಿ. 77ನೇ ಈ ಇಳಿ ವಯಸ್ಸಿನಲ್ಲೂ ಅವರು ಮಾಡುವಂತಹ ಚಿತ್ರಗಳು ನಿಜಕ್ಕು ಅಚ್ಚರಿ ಮೂಡಿಸುತ್ತೆ. ವಯಸ್ಸಿಗೆ ತಕ್ಕದಾದ ಅಮಿತಾಬ್ ಪಾತ್ರಗಳು ಎಂತವರಾದರು ಇಷ್ಟಪಡದೆ ಇರಲು ಸಾಧ್ಯವೆ ಇಲ್ಲ.

  ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಬಿಗ್ ಬಿಗೆ ದೊಡ್ಡ ಅಭಿಮಾನಿಯೊಬ್ಬ ಭಾವನಾತ್ಮಕ ಪತ್ರ ಬರೆದಿದ್ದಾರೆ. ಆ ಅಭಿಮಾನಿ ಮತ್ಯಾರು ಅಲ್ಲ ಅಮಿತಾಬ್ ಪುತ್ರ ಅಭಿಷೇಕ್ ಬಚ್ಚನ್. 50 ವರ್ಷ ಪೂರೈಸಿದ ಪ್ರೀತಿಯ ತಂದೆಗೆ ಅಭಿಷೇಕ್ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದ್ದಾರೆ.

  ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್

  "ಒಬ್ಬ ಮಗನಾಗಿ ಮಾತ್ರವಲ್ಲ, ನಟನಾಗಿ ಮತ್ತು ಅಭಿಮಾನಿಯಾಗಿ ನಾವೆಲ್ಲರು ನಿಮ್ಮ ಸಾಧನೆ, ದೊಡ್ಡತನಕ್ಕೆ ಸಾಕ್ಷಿಯಾಗಿರುವುದೆ ನಮ್ಮ ಪುಣ್ಯ. ನಿಮ್ಮನ್ನು ಮೆಚ್ಚಿಸಲು, ಪ್ರಶಂಸಿಸಲು ಮತ್ತು ನಿಮ್ಮಿಂದ ಕಲಿಯಲು ಇನ್ನೂ ಜಾಸ್ತಿ ಇದೆ. ಹಲವಾರು ತಲೆಮಾರಿನ ಸಿನಿ ಪ್ರಿಯರು, ನಾವು ಬಚ್ಚನ್ ಕಾಲದಲ್ಲಿ ವಾಸಿಸುತ್ತಿದ್ದೇವು ಎಂದು ಹೇಳಿಕೊಳ್ಳುವುದೆ ದೊಡ್ಡ ಹೆಮ್ಮೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿದಕ್ಕೆ ಅಭಿನಂದನೆಗಳು ಅಪ್ಪ. ನಾವೀಗ ಮುಂದಿನ 50 ವರ್ಷಕ್ಕಾಗಿ ಕಾಯುತ್ತಿದ್ದೀವಿ. ಲವ್ ಯು ಅಪ್ಪ" ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

  ಸಾತ್ ಹಿಂದೂಸ್ತಾನಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಬಿಹಾರದ ಮುಸ್ಲಿಂ ಕವಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮಿತಾಬ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ರಹ್ಮಾಸ್ತ್ರ, ಗುಲಾಬೊ ಸಿತಾಬೊ, ಚೆಹ್ರೆ ಸೇರಿದಂತೆ ಸಾಕಷ್ಟು ಸಿನಿಮಾಗಳಿವೆ. ಇತ್ತೀಚಿಗೆ ಅಮಿತಾಬ್ ತೆಲುಗಿನ ಸೂಪರ್ ಹಿಟ್ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮಿತಾಬ್ ಮತ್ತಷ್ಟು ಸಿನಿಮಾಗಳನ್ನು ಮಾಡಲಿ, ಅಭಿಮಾನಿಗಳನ್ನು ರಂಜಿಸುತ್ತಿರಲಿ ಎನ್ನುವುದೆ ಕೋಟ್ಯಂತರ ಚಿತ್ರಪ್ರಿಯರ ಆಶಾಯ.

  English summary
  Bollywood actor Amitabh Bachchan completes 50 years in film industry. abhishek bachchan wrote emotional letter to his father amitabh bachchan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X